HEALTH TIPS

ಪತಿಗೆ ಸತಿ ಸತಿಗೆ ಪತಿ ಆದರ್ಶರಾಗಿರಬೇಕು-ಹಸು.ಒಡ್ಡಂಬೆಟ್ಟು

ಮಂಜೇಶ್ವರ: ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳು ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುವುದು,ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿಯೇ ಆದರ್ಶರಾಗಿದ್ದಾಗ ಅವರು ಸಮಾಜದಲ್ಲಿ ಆದರ್ಶ ದಂಪತಿಗಳಾಗುತ್ತಾರೆ ಎಂದು ಬೋಳಂಗಳದಲ್ಲಿ ಅಣ್ಣ ತಮ್ಮ ಜೋಡುಕರೆ ಕಂಬಳದ ಪ್ರಯುಕ್ತ ಶುಕ್ರವಾರ ನಡೆದ ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ಸಾಹಿತಿ ಶಿಕ್ಷಕ ಹರೀಶ ಸುಲಾಯ ಒಡ್ಡಂಬೆಟ್ಟು ಹೇಳಿದರು. ಅತಿಯಾದ ಮೊಬೈಲ್ ಬಳಕೆಯಿಂದ ಅದೆಷ್ಟೋ ಸಂಸಾರಗಳು ವಿಚ್ಚೇದನಕ್ಕೆ ಕಾರಣವಾಗುತ್ತಿದೆ.ಸಂಸಾರದಲ್ಲಿ ಸಾಮರಸ್ಯ ಕಾಯ್ದಕ್ಕೊಳ್ಳುವುದು ಅತೀ ಅಗತ್ಯ ಮತ್ತು ಅದು ನಮ್ಮ ಮಕ್ಕಳಿಗೆ ಆದರ್ಶ ಎಂದವರು ಅಭಿಪ್ರಾಯ ಪಟ್ಟರು. ಈ ಸಂದರ್ಭ ಉಪಸ್ಥಿತರಿದ್ದ ಅವರ ಧರ್ಮಪತ್ನಿ ಅಪರ್ಣ ಹರೀಶ್ ಈ ಸಂದರ್ಭದಲ್ಲಿ ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕೃತಿ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು. ಕಾರ್ಯಕ್ರಮವನ್ನು ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ್ ಅರಸು ದಂಪತಿಗಳು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹಿರಿಯ ಕಬಡಿಪಟು ಭಾಸ್ಕರ.ಡಿ.ಶೆಟ್ಟಿ ಅವರು ವಹಿಸಿದ್ದರು.ಸುಮಾರು ಐವತ್ತು ದಂಪತಿಗಳು ವಿವಿಧ ಆಟಗಳಲ್ಲಿ ಪಾಲ್ಗೊಂಡ ಈ ಕಾರ್ಯಕ್ರಮವನ್ನು ಮೋಹನ್ ದಂಪತಿಗಳು ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries