ಉದಯಮಂಗಲ : ಸಹಸ್ರ ನಾಮಾರ್ಚನೆ
0
ಡಿಸೆಂಬರ್ 17, 2018
ಕಾಸರಗೋಡು: ಉದಯಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಹಸ್ರನಾಮಾರ್ಚನೆ ಜರಗಿತು.
ದೇವಸ್ಥಾನದ ಚೈತನ್ಯ ವೃದ್ಧಿ ಮತ್ತು ಸಮಾಜದ ಅಭಿವೃದ್ದಿಯ ಹಿನ್ನೆಲೆಯಲ್ಲಿ ನಡೆದ ಪೂಜೆಯನ್ನು ಕ್ಷೇತ್ರ ತಂತ್ರಿ ಉಚ್ಚಿಲತ್ ಕೆ.ಯು.ಪದ್ಮನಾಭ ತಂತ್ರಿ ಕಾರ್ಯಕ್ರಮ ನೆರವೇರಿಸಿದರು. ಬೆಳಿಗ್ಗೆ ಗಣಪತಿ ಹೋಮ, ಪೂಜಾ ಸಂಕಲ್ಪ, ಆ ಬಳಿಕ ಸತ್ಯನಾರಾಯಣ ಪೂಜೆ ಮತ್ತು ಸಹಸ್ರನಾಮಾರ್ಚನೆಯಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದರು.
ಕೊಪ್ಪಲ್ ಚಂದ್ರಶೇಖರನ್ ಕಥಾ ಪ್ರವಚನ ನಡೆಸಿದರು. ಕ್ಷೇತ್ರದ ಖಾಯಂ ಚಪ್ಪರವನ್ನು ಕ್ಷೇತ್ರ ತಂತ್ರಿ ಉಚ್ಚಿಲತ್ತ್ ಕೆ.ಯು.ಪದ್ಮನಾಭ ಸಮರ್ಪಿಸಿದರು.

