ಪೊಸಡಿಗುಂಪೆ ಪರಿಸರದಲ್ಲಿ ಲಭಿಸಿದ್ದು ಶಿಲಾಯುಧ ಹೌದು-ತಜ್ಞ ಪರಿಶೀಲನಾ ವರದಿ
0
ಡಿಸೆಂಬರ್ 19, 2018
ಉಪ್ಪಳ: ಪೈವಳಿಕೆ ಸಮೀಪದ ಕನಿಯಾಲ ಕೆದುಕೋಡಿಯಲ್ಲಿ ಇತ್ತಿÃಚೆಗೆ ಪತ್ತೆಯಾದ ಶಿಲಾಯುಗಕ್ಕೆ ಸೇರಿದ ವಿಶಿಷ್ಟ ಆಯುಧದ ಆಕೃತಿಯನ್ನು ಇತಿಹಾಸ ತಜ್ಞರು ಬುಧವಾರ ಪರಿಶೀಲನೆ ನಡೆಸಿದ್ದು, ಅದು ಶಿಲಾಯುಗಕ್ಕೆ ಸೇರಿದ ಅತಿ ವಿಶಿಷ್ಟ ಶಿಲಾಯುಧ ಹೌದೆಂದು ತಿಳಿಸಿರುವರು.
ಚಾರಣಧಾಮ ಪೊಸಡಿಗುಂಪೆ ಬೆಟ್ಟ ಪ್ರದೇಶದ ತಪ್ಪಲಿನಲ್ಲಿರುವ ಬಾಲಕೃಷ್ಣ ಭಟ್ಟರ ಅಡಿಕೆ ತೋಟದಲ್ಲಿ ಪತ್ತೆಯಾದ ನುಣುಪಾದ ಶಿಲಾಯುಧ ೧೦ಮೀಟರ್ ಅಗಲ ಹಾಗೂ ೨೦ ಮೀಟರ್ ಉದ್ದವಿದ್ದು ಒಟ್ಟು ೩೦ ಸೆಂಟೀ ಮೀಟರ್ ಅಳತೆ ಹೊಂದಿದೆ. ಲೋಹ ಬಳಕೆಯ ಮೊದಲು ಮುನುಷ್ಯ ದೀರ್ಘ ಕಾಲದವರೆಗೆ ಗೆಡ್ಡೆ ಗೆಣಸುಗಳನ್ನು ಅಗೆಯಲು, ಪ್ರಾಣಿಗಳನ್ನು ಕೊಲ್ಲಲು, ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಸೀಳಲು ಮತ್ತು ಕತ್ತರಿಸಲು ಇಂತಹ ಕಲ್ಲನ್ನು ಉಪಯೋಗಿಸಿದ್ದರು ಎಂದು ತಜ್ಞರ ಪರಿಶೀಲನೆಯಿಂದ ದೃಢಪಟ್ಟಿದೆ.
ಪೊಸಡಿಗುಂಪೆ ಪ್ರದೇಶದಲ್ಲಿ ಹಲವು ಬಾಂಜಾರ ಗುಹೆಗಳು, ಪುರಾತನ ಸುರಂಗಗಳು ಇದ್ದು,ಶಿಲಾಯುಧದ ಶೋಧನೆಯೊಂದಿಗೆ ಇನ್ನೂ ಅನೇಕ ಕೌತುಕಗಳು ಈ ಪರಿಸರದಲ್ಲಿ ಇರಬಹುದಾಗಿದೆ ಎಂದು ಸ್ಥಳೀಯ ನಿವಾಸಿ ಅಭಿಪ್ರಾಯಪಟ್ಟಿದ್ದಾರೆ.
ಪತ್ತೆಯಾದ ಶಿಲಾಯುಧವೆನ್ನಬಹುದಾದ ಕಲ್ಲಿನ ಬುಡ ದಪ್ಪಗಿದ್ದು ಒಂದು ಕೈಯಲ್ಲಿ ಹಿಡಿಯುವಂತಿದೆ, ತುದಿಯು ಮೊನಚಾಗಿದೆ. ಸುಮಾರು ೧೫.ಸೆಂ.ಮೀ ಉದ್ದವಿರುವ ಕಲ್ಲಿನ ಒಂದು ಪಾರ್ಶ್ವ ಹರಿತವಾಗಿದೆ. ೫.ಸೆಂ.ಮೀ ಅಗಲವಿರುವ ಕಲ್ಲು ಮಿಸೋಲಿಥಿಕ್ ಶಿಲಾಯುಗ ಕಾಲಘಟ್ಟದ ಚರ‍್ಟ್ ಬುರಿನ್ ಮೈಕ್ರೊÃಲಿತ್ ಶಿಲಾಯುಧವನ್ನು ಹೋಲುತ್ತದೆ.
ತಜ್ಞರ ಅಭಿಪ್ರಾಯ:
ಈಗ ಪತ್ತೆಯಾದ ಈ ಅಪೂರ್ವ ಶಿಲಾಯುಧವು ಭಾರತದಲ್ಲೆÃ ಅತ್ಯಪೂರ್ವವಾಗಿದೆ. ಸುಮಾರು ಕ್ರಿ.ಪೂ. ೭ ಸಾವಿರ ವರ್ಷಗಳಷ್ಟು ಇತಿಹಾಸವಿರಬಹುದಾದ ಈ ವಸ್ತುವೊಂದು ಇದೇ ಮೊದಲ ಬಾರಿಗೆ ಉತ್ತರ ಮಲಬಾರಿಯ ತುತ್ತತುದಿಯಲ್ಲಿ ಪತ್ತೆಯಾಗಿರುವುದು ಇನ್ನೂ ಇಂತಹ ವಸ್ತುಗಳು ಈ ಪ್ರದೇಶದಲ್ಲಿ ಪತ್ತೆಯಾಗಬಹುದಾಗಿದೆ ಎಂದು ಪ್ರೊ.ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮೇಘಾಲಯದಲ್ಲೂ ಇದೇ ತರಹದ ಶಿಲಾಯುಧ ಈ ಹಿಂದೆ ಪತ್ತೆಯಾಗಿತ್ತು. ಇಲ್ಲಿ ಲಭಿಸಿರುವುದು ಅದಕ್ಕೆ ಹೋಲಿಕೆಯಾಗಿರುವುದು ಐತಿಹಾಸಿಕ ಹೊಸತನಕ್ಕೆ ಕಾರಣವಾಗಬಹುದಾಗಿದೆ. ಬುಧವಾರ ಶಿಲಾಯುಧ ಪತ್ತೆಯಾದ ಪ್ರದೇಶಕ್ಕೆ ಕಾಂಞÂಂಗಾಡ್ ನೆಹರೂ ಆರ್ಟ್ಸ್ -ಸೈನ್ಸ್ ಕಾಲೇಜಿನ ಇತಿಹಾಸ ವಿಭಾಗದ
ಪ್ರೊ.ನಂದಕುಮಾರ್ ಕೋರೋತ್, ಹಾಗೂ ಪ್ರೊ.ರಾಜೀವನ್ ಸಿ.ಪಿ ಪಾಲ್ಗೊಂಡರು. ಸ್ಥಳೀಯರಾದ ಗೋವಿಂದ ಭಟ್, ವಿವೇಕ್, ಅನೂಪ್. ಜೊತೆಗಿದ್ದು ಸಹಕರಿಸಿದರು.





