ಪರಿಶಿಷ್ಟ ಜಾತಿ-ಪಂಗಡ ಆಯೋಗ ಅದಾಲತ್
0
ಡಿಸೆಂಬರ್ 19, 2018
ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡ ಆಯೋಗದ ಅದಾಲತ್ ಮಂಗಳವಾರ ಕಾಞÂಂಗಾಡು ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷ ಬಿ.ಎಸ್.ಮಾವೋಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್ ನಲ್ಲಿ ೭೭ ದೂರುಗಳನ್ನು ಪರಿಶೀಲಿಸಲಾಗಿದ್ದು, ೬೭ ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. ಉಳಿದ ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ. ಆಸ್ತಿ ತಗಾದೆ, ಭೂಹಕ್ಕು ಪತ್ರ ಸಂಬಂಧ ದೂರು, ಜಾತಿ ನಿಂದನೆ ಸಂಬಂದ ಅಹವಾಲುಗಳು ಅಧಿಕವಾಗಿ ಮಂಡಿಸಲಾಗಿದ್ದುವು.
ಸದಸ್ಯರಾದ ನ್ಯಾಯವಾದಿ ಪಿ.ಜೆ.ಸಿಜಾ, ಎಸ್.ಅಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


