ಕುಂಬಳೆಯಲ್ಲಿ ಸ್ನೇಹಿತ ಕಾಲಿಂಗ್ ಬೆಲ್ ಸಂಗಮ ಕಾರ್ಯಕ್ರಮ
0
ಡಿಸೆಂಬರ್ 24, 2018
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಅಶ್ರಯದಲ್ಲಿ ಅಶಕ್ತರಿಗೆ ಹಾಗೂ ಒಂಟಿ ಜೀವನ ನಡೆಸುತ್ತಿರುವವರಿಗೆ ಧೈರ್ಯ, ಭರವಸೆ ತುಂಬುವ ನಿಟ್ಟಿನಲ್ಲಿ ಕುಂಟಬ ಶ್ರೀ ಯೋಜನೆಯ ಸ್ನೇಹಿತ ಕಾಲಿಂಗ್ ಬೆಲ್ ಸಂಗಮ ಕಾರ್ಯಕ್ರಮ ಭಾನುವಾರ ನಡೆಯಿತು.
ಅಶಕ್ತ ಹಾಗೂ ಒಂಟಿ ಜೀವನ ನಡೆಸುತ್ತಿರುವವರಿಗೆ ಪೆÇೀಲಿಸ್ ಸಹಾಯವನ್ನು ಮತ್ತು ಪಂಚಾಯತಿನಿಂದ ನೀಡುವ ವಿವಿಧ ಯೋಜನೆಗಳಿಗೆ ಒಳಪಡಿಸಿ ಅವರನ್ನು ಮುಖ್ಯವಾಹಿನಿಗೆ ಕರೆದು ತರುವ ಉದ್ದೇಶವನ್ನಿಟ್ಟುಕೊಂಡು ಒಂದು ದಿನದ ಕಾರ್ಯಕ್ರಮದಲ್ಲಿ ಆಶಯ, ಅನುಭವ ವಿನಿಮಯ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ.ಕೆ.ಎಲ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಫಾತಿಮಾ ಅಬ್ದುಲ್ಲ ಕುಂಞ, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಎ.ಕೆ.ಆರಿಫ್, ಕುಟುಂಬ ಶ್ರೀ ಜಿಲ್ಲಾ ಸಂಚಾಲಕ ಸುರೇಂದ್ರನ್, ಜನಮೈತ್ರಿ ಪೆÇೀಲಿಸ್, ಡಿಬಿಎಂ ಆರತಿ, ಹರಿ, ಶರಣ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಸಿಡಿಎಸ್ ಅಧ್ಯಕ್ಷೆ ಸಬೂರ ಸ್ವಾಗತಿಸಿ, ಉಪಾಧ್ಯಕ್ಷೆ ವೀಣಾ ಜನಾರ್ಧನ್ ವಂದಿಸಿದರು. ಅಶ್ವತಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶ್ರೀಧರನ್ ಅವರಿಂದ ಜಾದೂ ಪ್ರದರ್ಶನ್ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನಗೊಂಡವು.


