ಪ್ರಶಾಂತಿಯಲ್ಲಿ ವಾರ್ಷಿಕ ಈಜುಕೂಟ
0
ಡಿಸೆಂಬರ್ 24, 2018
ಉಪ್ಪಳ: ಪ್ರಶಾಂತಿ ವಾರ್ಷಿಕ ಈಜು ಕೂಟವು ಇತ್ತೀಚೆಗೆ ಪ್ರಶಾಂತಿಯ ವಿದ್ಯಾಕೇಂದ್ರದಲ್ಲಿ ಸಂಭ್ರಮದಿಂದ ನಡೆಯಿತು.
ವಿದ್ಯಾ ಸಂಸ್ಥೆಯ ಆಡಳಿತ ಟ್ರಸ್ಟ್ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್ ಈಜುಕೂಟವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಜೀವ ಚೈತನ್ಯ, ಕ್ರಿಯಾಶೀಲತೆಗೆ ಬಲ ನೀಡುವ ಈಜುಗಾರಿಕೆ ಅತ್ಯುತ್ತಮ ಚಿಕಿತ್ಸೆಯೂ ಹೌದು.ಈ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳು ಈಜುಗಾರಿಕೆಯತ್ತ ಒಲವುಳ್ಳವರಾಗಿರಬೇಕು. ಮಾರ್ಗದರ್ಶಕರ ನೆರವು-ನಿರ್ದೇಶನಗಳೊಂದಿಗೆ ಈಜುಕೂಟ ಯಶಸ್ವಿಯಾಗಲಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಟ್ರಸ್ಟ್‍ನ ಆಡಳಿತ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್, ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ , ಡಾ.ಕೃಷ್ಣ ಕುಮಾರ್ ಮಾಣಿಪ್ಪಾಡಿ, ಶಾಲಾ ಪ್ರಾಂಶುಪಾಲ ಅನೂಪ್.ಕೆ, ನಿಲಯ ಪಾಲಕರಾದ ಕೃಷ್ಣ ನಾಯಕ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


