ವಾಣೀನಗರ:ಎನ್ನೆಸ್ಸೆಸ್ ಶಿಬಿರ ಅರಣ್ಯ, ಬಯಲು ಸಂದರ್ಶನ
0
ಡಿಸೆಂಬರ್ 24, 2018
ಪೆರ್ಲ:ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಸೇವಾ ಶಿಬಿರಕ್ಕೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಚಾಲನೆ ನೀಡಲಾಗಿದ್ದು ಶನಿವಾರ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಸದಸ್ಯೆ ಶಶಿಕಲಾ ವೈ. ವಾಣೀನಗರ ಪತ್ತಡ್ಕ ಹಾಗೂ ಇಳಂತೋಡಿ, ಬೈಲಮೂಲೆ ರಸ್ತೆ ದುರಸ್ತಿ ಕಾಮಗಾರಿಯನ್ನು ಉದ್ಘಾಟಿಸಿದರು. ಮಧ್ಯಾಹ್ನ ಬಂಟಾಜೆ ರಕ್ಷಿತಾರಣ್ಯ, ಜಾಂಬ್ರಿ ಗುಹೆ ಸಂದರ್ಶನ, ಬಯಲು ಪ್ರವಾಸ ಕೈಗೊಂಡರು.ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಇಳಂತೋಡಿ ಅಂಗನವಾಡಿ ಶಿಕ್ಷಕಿ ಹೇಮಲತ, ಸ್ವರ್ಣಲತಾ ಇಳಂತೋಡಿ, ಕೃಷ್ಣ ಜೆ., ಉಪನ್ಯಾಸಕರುಗಳಾದ ಪ್ರಜಿತ್, ಗೀತಾ ವಿ.ಭಟ್, ಅಮೃತಾ ಎ. ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


