ಕಾಟುಕುಕ್ಕೆಯಲ್ಲಿ ಧನುಪೂಜೆ; ಹರಿಕಥೆ
0
ಡಿಸೆಂಬರ್ 24, 2018
ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಕಳೆದ ಒಂದು ವಾರದಿಂದ ಧನುಪೂಜೆ ಅಂಗವಾಗಿ ಬೆಳಿಗ್ಗೆ 5ರಿಂದ ರುದ್ರ ಪಾರಾಯಣ, 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 6.30ಕ್ಕೆ ಪ್ರಾತಃಕಾಲದ ಪೂಜೆ, ಪ್ರಸಾದ, ಉಪಾಹಾರ ವಿತರಣೆ ನಡೆದು ಬರುತ್ತಿದ್ದು ಜನವರಿ 14ರಂದು ಸಂಪನ್ನಗೊಳ್ಳಲಿದೆ.
ಭಾನುವಾರ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಮತ್ತು ಬಳಗದಿಂದ 'ಗಿರಿಜಾ ಕಲ್ಯಾಣ' ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಿತು.
ಡಿ.25ರಂದು ರತ್ನಮಾಲ ಎಸ್, ಅಮೃತ ಪಳ್ಳತ್ತಡ್ಕ ಬಳಗದಿಂದ ಯಕ್ಷಗಾನ ವೈಭವ, ಡಿ.26ರಂದು ಬೆಟ್ಟಂಪಾಡಿ ಮಿತ್ತಡ್ಕ ಕೇಸರಿನಗರ ಕೇಸರಿ ಕಲಾವೃಂದ ಕುಣಿತ ಭಜನೆ, ಡಿ.27ರಂದು ಬೆದ್ರಂಪಳ್ಳ ಶ್ರೀ ಗಣೇಶ ಭಜನಾ ಮಂಡಳಿ ಇವರಿಂದ ಭಜನೆ, ಬಜಕೂಡ್ಲು ಗಣೇಶ್ ಶೆಟ್ಟಿ ಬಳಗದಿಂದ ಭಜನೆ, 28ರಂದು ಬಾಳೆಮೂಲೆ ಸುಂದರಗಿರಿ ಶ್ರೀ ದೇವಿ ಭಜನಾ ಸಂಘದಿಂದ ಭಜನೆ, 29ರಂದು ವಿದುಷಿ ಅನುರಾಧಾ ಭಟ್ ಅಡ್ಕಸ್ಥಳ ಮತ್ತು ಶಿಷ್ಯವೃಂದದಿಂದ ಭಕ್ತಿ ಸಂಗೀತ, 30ರಂದು ಕಾಟುಕುಕ್ಕೆ ರಾಮಚಂದ್ರ ಮಣಿಯಾಣಿ ಬಳಗದಿಂದ 'ಗಜಗೌರಿ ವೃತ' ಹರಿಕಥಾ ಕಾಲಕ್ಷೇಪ, 31ರಂದು ಸುಬ್ರಹ್ಮಣ್ಯ ಕೊಲ್ಲಮೊಗರು ಹರಿಹರೇಶ್ವರ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.


