HEALTH TIPS

ಕುಂಟಾರು; ರಂಗಪ್ರವೇಶದಲ್ಲಿ ಮಿಂಚಿದ ಮಕ್ಕಳು

ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಮಕ್ಕಳ ಯಕ್ಷಗಾನ ರಂಗಪ್ರವೇಶ ಶನಿವಾರ ನಡೆಯಿತು. ತಮ್ಮ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮಕ್ಕಳಿಗೆ ಇದೊಂದು ಮೊದಲ ಅವಕಾಶವಾಗಿತ್ತು. ಕೇವಲ ಎರಡು ತಿಂಗಳಲ್ಲಿಯೇ ತಮಗೆ ಕಲಿಸಿ ಕೊಟ್ಟದ್ದನ್ನು, ತಾವು ಕಲಿತದ್ದನ್ನು ಪ್ರಕಟಪಡಿಸಲು ಮಕ್ಕಳ ಶ್ರಮ ಶ್ಲಾಘನೀಯ. ಅದರಲ್ಲಿಯೂ ಒಂದು ಮತ್ತು ಎರಡನೇ ತರಗತಿಯಲ್ಲಿ ಕಲಿಯುವ ಮಕ್ಕಳೇ ಬಹುಪಾಲು. ಇವರನ್ನು ಮೊದಲ ಬಾರಿಗೆ ರಂಗಕ್ಕೆ ತರುವುದೆಂದರೆ ಸುಲಭವಲ್ಲ. ರಂಗಸಿರಿ ಬದಿಯಡ್ಕ ಇದರ ಪ್ರಮುಖ ಕಲಾವಿದರಲ್ಲೊಬ್ಬರಾದ ಸೂರ್ಯನಾರಾಯಣ ಪದಕ್ಕಣ್ಣಾಯ ನಾಟ್ಯಗುರು. ಇವರ ಉತ್ತಮ ಮಾರ್ಗದರ್ಶನದ ಫಲವಾಗಿ ಕಡಿಮೆ ಅವಧಿಯಲ್ಲಿ ಮಕ್ಕಳ ರಂಗಪ್ರವೇಶ ಸಾಧ್ಯವಾಯಿತು. ಹಾಗೆಯೇ ಕಲಾಸಂಘದ ಸದಸ್ಯರೂ ಆಗಿರುವ ದಿಲೀಪ ಕುಂಟಾರು ಅವರ ಶ್ರಮ ಶ್ಲಾಘನೀಯ. ನರಕಾಸುರ ವಧೆ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆ ವಾದನದಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆ ವಾದನದಲ್ಲಿ ಮುರಳಿ ಮಾಧವ ಮಧೂರು, ಶಿವದಾಸ ಕುಂಟಾರು, ಶೇಖರ ಕುಂಟಾರು, ಚಕ್ರತಾಳದಲ್ಲಿ ಕೃಷ್ಣ.ಕೆ, ರವೀಂದ್ರ.ಎಚ್, ವಸ್ತ್ರಾಲಂಕಾರದಲ್ಲಿ ಮೋಹನ ಕೊಕ್ಕರ್ಣೆ, ಜನಾರ್ದನ ಬದಿಯಡ್ಕ, ಕೇಶವ ಆಚಾರ್ಯ ಕೀನ್ಯಾ, ಶಿವರಾಮ ಆಚಾರ್ಯ ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಸಹನಾ.ಎಂ(ದೇವೇಂದ್ರ), ತ್ವಿಶಾ.ವಿ.ಎಚ್(ಅಗ್ನಿ), ಉಲ್ಲಾಸ್.ಕೆ(ವರುಣ), ಆಶಿಕಾ.ಕೆ(ಕುಬೇರ), ಶಿವಪ್ರಸಾದ್.ಎ(ಈಶಾನ ಮತ್ತು ದೂತ), ದೃಶ್ಯ.ಡಿ.ಕೆ(ವಾಯು), ಭವಿನ್.ಎನ್.ರಾವ್(ನಿರುತಿ), ಹಿತೇಶ್ ಮತ್ತು ಗುರುಕಿರಣ್(ನರಕಾಸುರ), ಪ್ರಜೀತ್.ಎಮ್.ಎಚ್(ಚಂಡಾಸುರ), ಶ್ರೀಶ.ಪಿ.ಕೆ(ಬಂಡಾಸುರ), ಪ್ರೀತಮ್(ವ್ಯಾಘ್ಯಾಸುರ), ಪದ್ಮನಾಭ(ಸೂಜಿಮುಖಾಸುರ), ಗಣೇಶ(ಶೂರ್ಪದಂತಾಸುರ), ವಿಖ್ಯಾತ್(ವಜ್ರಾಸುರ), ಅಶ್ವಿಜ.ಬಿ.ಎಂ.ರಾವ್(ಕೃಷ್ಣ), ಇಂಚರ.ಕೆ.ರಾವ್(ಸತ್ಯಭಾಮೆ), e್ಞÁನೇಶ್.ಕೆ(ಮುರಾಸುರ ಮತ್ತು ನಾರದ ಋಷಿ) ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries