ಸಾಹಿತ್ಯ-ಸಾಂಸ್ಕೃತಿಕ ಸಂದೇಶ ನೀಡುವಲ್ಲಿ ವಿಶ್ವದರ್ಶನ ಯ1ಶಸ್ವಿಯಾಗಲಿ- ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮಿ ವಿಶ್ವದರ್ಶನ-2019 ಆಮಂತ್ರಣ ಪತ್ರ ಬಿಡುಗಡೆ
0
ಡಿಸೆಂಬರ್ 19, 2018
ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ಯಶಸ್ವೀ ದ್ದಿತೀಯ ವರ್ಷಾಚರಣೆಯ ಸಾಹಿತ್ಯ-ಸಾಂಸ್ಕೃತಿಕೋತ್ಸವ" ವಿಶ್ವದರ್ಶನ-2019" ರ ಆಮಂತ್ರಣ ಪತ್ರಿಕೆಯನ್ನು ಆನೆಗುಂದಿ ಸಂಸ್ಥಾನ ಬೆಳಗುತ್ತಿಮಠಾಧೀಶ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಅವರು ಕಟಪಾಡಿ ವಿಶ್ವಕರ್ಮೇಶ್ವರ ಕ್ಷೇತ್ರದ ಗುರು ಸಾನಿಧ್ಯದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದಶ್ರೀಗಳು ಪಂಚಕಸುಬು ಹಾಗೂ ಲಲಿತ ಕಲೆಗಳಲ್ಲಿ ಜನಾನುರಾಗಿಗಳಾಗಿ ಗುರುತಿಸಿಕೊಂಡಿರುವ ವಿಶ್ವಕರ್ಮ ಜನಾಂಗದ ಯುವ ಪ್ರತಿಭೆಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರೋತ್ಸಾಹಕ್ಕಾಗಿ ರೂಪಿತವಾಗಿರುವ ಸಂಘಟನೆಯ ನೇತೃತ್ವದಲ್ಲಿ ಜರಗುವ ವಿಶ್ವದರ್ಶನ ಕಾರ್ಯಕ್ರಮದ ಕೀರ್ತಿ ವಿಶ್ವದ ಮೂಲೆ ಮೂಲೆಗೂ ಹರಡಲಿ ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನದ ಸ್ಥಾಪಕ ಜಯ ಮಣಿಯಂಪಾರೆ,ನಿರ್ವಾಹಕ ಸಮಿತಿಯ ದೇವರಾಜ್ ಆಚಾರ್ಯ,ಕಿರಣ್ ಶರ್ಮ, ವಿಶ್ವದರ್ಶನ ಸಮಿತಿ ಅಧ್ಯಕ್ಷ ಆಶೋಕ್ ಸಾನಗ,ಕಾರ್ಯದರ್ಶಿ ನಿರಂಜನ್ ಪುರೋಹಿತ್ ನೀರ್ಚಾಲು ಮೊದಲಾದವರು ಉಪಸ್ಥಿತರಿದ್ದರು.
ಜ.26 ರಂದು ಬೆಳಿಗ್ಗೆ ದ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಾಗುವುದು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಭಾಗವಹಿಸಲಿದ್ದಾರೆ.ಸಮಾಜದ ಉದಯೋನ್ಮುಖ ಕವಿಗಳ ಚುಟುಕು/ಹನಿಗವನ ಸಂಕಲನ "ಅಣುರೇಣು" ಪುಸ್ತಕ ವನ್ನು ಸಾಹಿತ್ಯ ಪೋಷಕ,ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಾಕೃಪಾ ಬಿಡುಗಡೆಗೊಳಿಸಲಿದ್ದು, "ವಿಶ್ವದರ್ಶನ" ವಿಶೇಷ ಪುರವಣಿ ಬಿಡುಗಡೆಯನ್ನು ರಾಧಾಕೃಷ್ಣ ಕೆ.ಉಳಿಯತ್ತಡ್ಕ ಬಿಡುಗಡೆಗೊಳಿಸುವರು. ಚಿತ್ರಕಲಾ, ವಸ್ತುಪ್ರದರ್ಶನ ದೊಂದಿಗೆ ಜರಗುವ ಕಾರ್ಯಕ್ರಮದಲ್ಲಿ 'ಶಿಕ್ಷಣದರ್ಶನ-2019'ಕ್ಕೆ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಚಾಲನೆ ನೀಡುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ಒಗ್ಗೂಡುವಿಕೆಯಿಂದ ಜರಗುವ 'ವಿಶ್ವದರ್ಶನ-2019' ರ ಮೊದಲನೇ ದಿನ 'ಚುಟುಕು/ಹನಿಗವನ ಗೋಷ್ಟಿ' ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೊದಲನೇ ದಿನದ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪುಸ್ತಕ ಪುರಸ್ಕಾರ, ಸಾಹಿತ್ಯ ಪುರಸ್ಕಾರ ನಡೆಯಲಿದೆ.
ಎರಡನೇ ದಿನವಾದ ಜ.27ರಂದು 'ಸಾಂಸ್ಕೃತಿಕೋತ್ಸವ'ವು ಸಂಗೀತ ,ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 'ಬಾಲ-ಯುವ
ಸಾಧಕ ಪುರಸ್ಕಾರ'ವು ಜರುಗಲಿದ್ದು ಗಣೇಶ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಎನ್ನಾರ್ ಕೆ. ವಿಶ್ವನಾಥ್ ಉದ್ಘಾಟಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮವು ಮುಂದುವರಿದು ಸಮಾರೋಪ ಸಮಾರಂಭದಲ್ಲಿ ಬ್ರಹ್ಮಶ್ರೀ ಪುರೋಹಿತರತ್ನ ಬಿ. ಕೇಶವ ಆಚಾರ್ಯ ಉಳಿಯತ್ತಡ್ಕ ಹಾಗೂ ಬ್ರಹ್ಮಶ್ರೀ ಉಮೇಶ ತಂತ್ರಿ ಮಂಗಳೂರು ಇವರ ದಿವ್ಯ ಉಪಸ್ಥಿತಿಯಲ್ಲಿ 'ವಿಶ್ವದರ್ಶನ-2019 ಸಾಧಕ ಪುರಸ್ಕಾರ, ವಿಶೇಷ ಪ್ರತಿಭಾ ಪುರಸ್ಕಾರ, ಅಪೂರ್ವ ದಂಪತಿ ಪುರಸ್ಕಾರ ಹಾಗೂ ಬಹುಮುಖ ಪ್ರತಿಭಾ ಪುರಸ್ಕಾರವನ್ನು ನೀಡಲಿದ್ದಾರೆ. ವಿವಿಧ ಧಾರ್ಮಿಕ ಕ್ಷೇತ್ರಗಳ ಮುಂದಾಳುಗಳು ಭಾಗವಹಿಸಲಿದ್ದಾರೆ.


