ಮುಳ್ಳೇರಿಯದಲ್ಲಿ ಚೈಲ್ಡ್‍ಲೈನ್ ಜಾಗೃತಿ ಶಿಬಿರ ಸಮಾರೋಪ
0
ಡಿಸೆಂಬರ್ 19, 2018
ಮಕ್ಕಳ ಸಂರಕ್ಷಣೆಗೆ ಸಮಾಜ ಬದ್ದವಾಗಿರಬೇಕು
ಮುಳ್ಳೇರಿಯ: ಮಕ್ಕಳ ಸಂರಕ್ಷಣೆಗೆ ಸಮಾಜ ಬದ್ದವಾಗಿದ್ದರೆ ಮಾತ್ರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸುಲಭದಲ್ಲಿ ಹೋಗಲಾಡಿಸಿ ಸುಂದರವಾದ ಬದುಕನ್ನು ಕಟ್ಟಲು ಅನುವುಮಾಡಿಕೊಡಲು ಸಾಧ್ಯ. ಸರಕಾರ ಮತ್ತು ನ್ಯಾಯಾಲಯ ಸದಾ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ ಅವರ ಭವಿಷ್ಯವನ್ನು ಭದ್ರವಾಗಿಸಲು ಕಟಿಬದ್ಧವಾಗಿದೆ ಎಂದು ಕಾಸರಗೋಡು ಜಿಲ್ಲಾ ನ್ಯಾಯಾಲಯದ ಉಪ ನ್ಯಾಯಾಧೀಶರಾದ ಫಿಲಿಪ್ ತೋಮಸ್ ಅಭಿಪ್ರಾಯ ಪಟ್ಟರು.
ಅವರು ಕೇಂದ್ರ ಸರಕಾರದ ಮಿನಿಸ್ಟ್ರಿ ಓಫ್ ವಿಮೆನ್ ಆಂಡ್ ಚೈಲ್ಡ್ ಡೆವಲಪ್‍ಮೆಂಟ್, ಚೈಲ್ಡ್ ಲೈನ್ ಕಾಸರಗೋಡು ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಮುಳ್ಳೇರಿಯ ಶ್ರೀ ಗಣೇಶ ಕಲಾಮಂದಿರ ಏರ್ಪಡಿಸಿದ ಮಕ್ಕಳ ಕಲರವ-2018 ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್‍ನ ಅಧಿಕಾರಿ ಕುಕಾನ ರಹ್ಮಾನ್ ಅಧ್ಯಕ್ಷತೆವಹಿಸಿದರು. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಬಿಜು, ಐಸಿಡಿಎಸ್ ಮೇಲ್ವಿಚಾರಕಿ ಪ್ರಸನ್ನಾ ಕಾರಡ್ಕ, ರಂಗನಾಥ ಶೆಣೈ, ನಿತೀಶ್ ಎಂ.ಜೋರ್ಜ್, ಚಿತ್ತರಂಜನ್ ರೈ, ಗೋಪಾಲಕೃಷ್ಣ ವಾಂತಿಚ್ಚಾಲು, ಸುಭಾಷ್ ಪೆರ್ಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರಡ್ಕ ಹೈಯರ್ ಸೆಕಂಡರಿ ಶಾಲಾ ಮಕ್ಕಳಿಂದ ಮತ್ತು ಮುಳ್ಳೇರಿಯ ಹೈಯರ್ ಸೆಕಂಡರಿ ಎನ್ ಎಸ್ ಎಸ್ ಮಕ್ಕಳಿಂದ ವಿವಿಧ ಜಾನಪದ ಹಾಡು ಕಾರ್ಯಕ್ರಮ ನಡೆಸಿಕೊಟ್ಟರು.
ಉದಯ ಕುಮಾರ್.ಎಂ ಹಾಗೂ ಡಾ.ಡಿಸ್ ಥೋಮಸ್ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಚೈಲ್ಡ್ ಲೈನ್‍ನ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತ ರಂಗನಾಥ ಶೆಣೈ , ಚಿತ್ತರಂಜನ್ ರೈ ಬದಿಯಡ್ಕ, ಜಯ ಮಣಿಂಪಾರೆ, ಅಖಿಲೇಶ್ ನಗುಮುಗಂ ಹಾಗೂ ನಿಧೀಶ್.ಎಂ.ಜೋರ್ಜ್ ಅವರನ್ನು ಗೌರವಿಸಿಸಲಾಯಿತು. ದಿವಾಕರ ಉಪ್ಪಳ ಕಾರ್ಯಕ್ರಮ ನಿರ್ವಹಿಸಿದರು.


