ಜಿಲ್ಲಾ ಸಾಹಿತ್ಯ ಸಮ್ಮೇಳನ-ಸಭೆ ಇಂದು
0
ಡಿಸೆಂಬರ್ 25, 2018
ಬದಿಯಡ್ಕ:ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು-ಹೈಸ್ಕೂಲು ಆವರಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವೀ ಸಭೆ ಇಂದು ಬೆಳಿಗ್ಗೆ 10 ರಿಂದ ಶಾಲಾ ವಠಾರದಲ್ಲಿ ನಡೆಯಲಿದೆ.
ಈಗಾಗಲೇ ಎರಡು ಸಭೆಗಳು ನಡೆದಿದ್ದು,ಅಂತಿಮ ನಿರ್ಣಯಗಳು ಇಂದು ಕೈಗೊಳ್ಳುವ ಸಾಧ್ಯತೆ ಇದೆ. ವಾಡಿಕೆಗಿಂತ ವಿಭಿನ್ನವಾಗಿ ಈ ಬಾರಿಯ ಸಾಹಿತ್ಯ ಸಮ್ಮೇಳನವು ಮೂಡಿಬರಲಿದ್ದು, ಸಮ್ಮೇಳನದ ಅಧ್ಯಕ್ಷರ ಹೆಸರಿನ ಅಧಿಕೃತ ಪ್ರಕಟಣೆ ಇಂದು ಹೊರಬೀಳಲಿದೆ. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಕಾರ್ಯದರ್ಶಿಗಳಾದ ರಾಮಚಂದ್ರ ಭಟ್ ಧರ್ಮತ್ತಡ್ಕ, ನವೀನ್ ಮಾಸ್ತರ್ ಮಾನ್ಯ, ಸುಂದರ ಬಾರಡ್ಕ, ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಸಹಿತ ಗಣ್ಯರು ಭಾಗವಹಿಸುವರು.


