ಕಸಾಪ ಸಭೆ-ಸಾಹಿತ್ಯ ಸಮ್ಮೇಳನದ ರೂಪುರೇಖೆ ತಯಾರಿ
0
ಡಿಸೆಂಬರ್ 26, 2018
ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವೀ ಸಭೆ ಬುಧವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ಘಟಕಾಧ್ಯಕ್ಷ ಎಸ್.ವಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜನವರಿ 19 ಹಾಗೂ 20 ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣ, ಖಂಡಿಗೆ ಶ್ಯಾಮ್ ಭಟ್ ನಗರಿಯಲ್ಲಿ ಮಾ.ಭ.ಪೆರ್ಲ ಸಭಾಂಗಣದಲ್ಲಿ ಕಯ್ಯಾರ ಕಿಂಞÂಣ್ಣ ರೈ ವೃದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷಕಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಶಿಸಲಾಯಿತು. ಸಾಹಿತ್ಯ ಸಮ್ಮೇಳನದ ಅಂಗವಾಗಿ ಜ.19 ರಂದು ಬೆಳಿಗ್ಗೆ 9 ಕ್ಕೆ ಬೇಳ ವಿಷ್ಣುಮೂರ್ತಿ ನಗರದಿಂದ ಸಮ್ಮೇಳನ ನಗರಿಗೆ ಸಾಹಿತ್ಯ=ಸಾಂಸ್ಕøತಿಕ ಮೆರವಣಿಗೆ ನಡೆಸಲಾಗುವುದು. ಬಳಿಕ 10ಕ್ಕೆ ಸರ್ವಾಧ್ಯಕ್ಷರ ಉಪಸ್ಥಿತಿಯಲ್ಲಿ ಕಸಾಪ ಕೇಂದ್ರ ಘಟಕಾಧ್ಯಕ್ಷ ಮನು ಬಳಿಗಾರ್ ಸಮ್ಮೇಳನ ಉದ್ಘಾಟಿಸುವರು. ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು. ಇದೇ ವೇಳೆ ಗಣ್ಯರು ವಿವಿಧ ಪ್ರದರ್ಶನಗಳ ಉದ್ಘಾಟನೆ ನಡೆಸುವರು. ಬಳಿಕ ವಿವಿಧ ಸಾಹಿತ್ಯ. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.20 ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ.ದೊಡ್ಡರಂಗೇಗೌಡ ಸಮಾರೋಪ ಭಾಷಣ ಮಾಡುವರು.
ಬುಧವಾರ ನಡೆದ ಪೂರ್ವಭಾವೀ ಸಭೆಯಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ, ಕಸಾಪ ಗಡಿನಾಡ ಘಟಕದ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಮಚಂದ್ರ ಭಟ್ ಧರ್ಮತ್ತಡ್ಕ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ನವೀನ್‍ಚಂದ್ರ ಮಾಸ್ತರ್ ಮಾನ್ಯ ಸಹಕರಿಸಿದರು.

