ಬಣ್ಣದ ಲೋಕ ಸೃಷ್ಟಿಸಿದ ಮಕ್ಕಳ ಚಿತ್ರರಚನೆ ಸ್ಪರ್ಧೆ
0
ಡಿಸೆಂಬರ್ 25, 2018
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜು ಸಭಾಂಗಣದಲ್ಲಿ ಮಕ್ಕಳ ಚಿತ್ರ ರಚನೆ ಸ್ಪರ್ಧೆ ಸೋಮವಾರ ಜರಗಿತು. ಪರಂಪರಾಗತ ಕೈಮಗ್ಗ ಉದ್ದಿಮೆ ಕುರಿತು ಹೊಸ ತಲೆಮಾರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೈಮಗ್ಗ ಬಟ್ಟೆ ನಿರ್ದೇಶನಾಲಯ, ಕಾಸರಗೋಡು ಜಿಲ್ಲಾ ಉದ್ದಿಮೆ ಕೇಂದ್ರ ಜಂಟಿ ವತಿಯಿಂದ ಸಮಾರಂಭ ಜರಗಿತು.
ಜಿಲ್ಲೆಯ ಕಿರಿಯ-ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆಗಳು ನಡೆದುವು. ಒಟ್ಟು 114 ಮಕ್ಕಳು ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದರು. ಪ್ರೌಢಶಾಲೆ ವಿಭಾಗದಲ್ಲಿ ಕಾಂಞಂಗಾಡು ಬಲ್ಲ ಕ್ರೈಸ್ಟ್ ಸಿ.ಎಂ.ಐ. ಪಬ್ಲಿಕ್ ಸ್ಕೂಲ್‍ನ ಪಿ.ಆದಿರಾ ಪ್ರಥಮ ಬಹುಮಾನ, ಚಾಯೋತ್ ಸರಕಾರಿ ಸೈಯರ್ ಸೆಕೆಂಡರಿ ಶಾಲೆಯ ಕೆ.ವಿ.ಸಿದ್ದಾರ್ಥ್ ದ್ವಿತೀಯ, ಕಾಂಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಪಿ.ಆದಿತ್ಯನ್ ತೃತೀಯ ಬಹುಮಾನ ಗಳಿಸಿದರು.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪೆರಿಯ ಕೆ.ಜಿ.ಎಚ್.ಎಸ್.ಎಸ್.ನ ಅರುಣಿಮಾ ರಾಜ್ ಪ್ರಥಮ ಬಹುಮಾನ, ಆಯಂಪಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿ.ಸುಮಿತ್ ನಾಥ್ ದ್ವಿತೀಯ, ಕಾಂಞಂಗಾಡಿನ ಚಿನ್ಮಯಾ ವಿದ್ಯಾಲಯದ ಪ್ರಜ್ವಲ್ ಪ್ರಕಾಶ್ ತೃತೀಯ ಬಹುಮಾನ ಪಡೆದರು.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶ್ರೀಲಕ್ಷ್ಮಿ ವೇಣುಗೋಪಾಲ್ ಪ್ರಥಮ ಬಹುಮಾನ, ನೀಲೇಶ್ವರ ನಿವೇದ್ಯಾ ಜಯನ್ ದ್ವಿತೀಯ, ನೀಲೇಶ್ವರ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ ಋಷಿಕೇಶ್ ತೃತೀಯ ಬಹುಮಾನ ಪಡೆದುಕೊಂಡರು.
ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಸ್ಪರ್ಧೆಯನ್ನು ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಅರವಿಂದ ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಚಿತ್ರರಚನೆ ಕಲಾವಿದ ಕೆ.ಕೆ.ಆರ್.ವೆಂಙರ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಣ ಸಹಾಯಕ ನಿರ್ದೇಶಕ ಡಾ.ಗಿರೀಶ್ ಚೋಲಯಿಲ್, ಜಿಲ್ಲಾ ಉದ್ದಿಮೆ ಕೇಂದ್ರ ಸಹಾಯಕ ನಿರ್ದೇಶಕಿ ಆರ್.ರೇಖಾ, ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಧಾನ ಪ್ರಬಂಧಕ ಕೆ.ರಾಜನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಉದ್ಯಮ ಕೇಂದ್ರ ಪ್ರಬಂಧಕಿ ಸಿ.ಜಿ.ಮಿನಿಮೋಳ್ ಸ್ವಾಗತಿಸಿ, ಸಹಾಯಕ ರಿಜಿಸ್ಟ್ರಾರ್ ಸಿ.ಪಿ.ಉಣ್ಣಿಕೃಷ್ಣನ್ ವಂದಿಸಿದರು.


