HEALTH TIPS

ಗದ್ದಿಕ : ಪರಿಶಿಷ್ಟ ಜನಾಂಗದ ಸಾಂಸ್ಕøತಿಕ ಇತಿಹಾಸ ತಿಳಿಸುವ ಗೋತ್ರ ಸಂಸ್ಕøತಿ ಮೇಳ

ಕಾಸರಗೋಡು: ಕುತೂಹಲ ಮೂಡಿಸುವ ಐತಿಹಾಸಿಕ ವಿಚಾರಗಳಿಗೆ ಕೈಗನ್ನಡಿ ಹಿಡಿದಿರುವ ಪರಿಶಿಷ್ಟ ಜನಾಂಗದ ಸಂಸ್ಕøತಿ ಪ್ರದರ್ಶನ ಮೇಳ ಮೂಲಕ ಗದ್ದಿಕ ಮಹೋತ್ಸವ ಚರಿತ್ರೆ ಆಸಕ್ತರನ್ನು ಸೆಳೆಯುತ್ತಿದೆ. ಕಾಲಿಕಡವು ಮೈದಾನದಲ್ಲಿ ನಡೆಯುತ್ತಿರುವ ಸಾಂಸ್ಕøತಿಕೋತ್ಸವ ಮತ್ತು ಪರಂಪರಾಗತ ಉತ್ಪನ್ನಗಳ ಪ್ರದರ್ಶನ-ಮಾರಾಟ ಮೇಳದಲ್ಲಿ `ಗೋತ್ರ ಸಂಸ್ಕøತಿ ಪ್ರದರ್ಶನ' ಎಂಬ ಹೆಸರಿನಲ್ಲಿ ಐತಿಹಾಸಿಕ ಮಹತ್ವದ ಸಲಕರಣೆಗಳನ್ನು ಜನತೆಯ ಮುಂದೆ ತೆರೆದಿಟ್ಟಿದೆ. ರಾಜ್ಯದ ವಿವಿಧ ಪರಿಶಿಷ್ಟ ಜಾತಿ-ಪಂಗಡದ ಜನಾಂಗದವರು ಹಿಂದೆ ಬಳಸುತ್ತಿದ್ದ ಆಯುಧಗಳು, ಮನೆಗಳಲ್ಲಿ ಉಪಯೋಗಿಸುತ್ತಿದ್ದ ಉಪಕರಣಗಳು, ಆಭರಣಗಳು, ಕೃಷಿಗೆ ಬಳಕೆಯಾಗುತ್ತಿದ್ದ ಸಲಕರಣೆಗಳು ಇತ್ಯಾದಿ ಇಲ್ಲಿ ನೋಟಕರ ಕುತೂಹಲಕ್ಕೆ ಕಾರಣವಾಗುತ್ತಿವೆ. ಓಡುತ್ತಿರುವ ಮೃಗವನ್ನು ಮೂರ್ಛೆ ಹೋಗುವಂತೆ ಮಾಡಿಹಿಡಿಯಲು ಬಳಸುವ ಮೋಟಂಬು(ಬಿಲ್ಲು-ಬಾಣ), ಹುಲಿಯನ್ನು ಬಲೆ ಬೀಸಿ ಹಿಡಿದು ಅಲ್ಲಿಂದಲೇ ಕೊಲ್ಲಲು ಬಳಸುತ್ತಿದ್ದ ಪುಲಿಕುಂದಂ(ಕಠಾರಿ), ಕತ್ತಿಯಂಬ್(ಈಟಿ), ಅಂಬ್ ತಳ್ಳ(ಬತ್ತಳಿಕೆ) ಇತ್ಯಾದಿ ಆಯುಧಗಳು ಗಮನಸೆಳೆಯುತ್ತವೆ. ತಾಳಿ ಸರ, ಪದಕ, ಗುಂಡು ಕಿವಿಯೋಲೆ, ಬೆಳ್ಳಿ ಸೊಂಟದ ಸರ, ಬಳೆ ಇತ್ಯಾದಿ ವಿವಿಧ ರೀತಿಯ ಪ್ರಾಚೀನ ಆಭರಣಗಳು ಪ್ರದರ್ಶನದಲ್ಲಿವೆ. ಮನೆಯಲ್ಲಿ ನಿತ್ಯಬಳಕೆಯಲ್ಲಿದ್ದ ಅರೆಯುವ ಕಲ್ಲು, ಪಾವು, ಅಕ್ಕಿ ಗೇರುವ ಸಾಮಾಗ್ರಿ ಇತ್ಯಾದಿಗಳ ಸಂಗ್ರಹ ಇಲ್ಲಿದೆ. ಈ ಜನಾಂಗದ ಇತಿಹಾಸ ತಿಳಿಸುವ ಅನೇಕ ಚಿತ್ರಗಳ ಪ್ರದರ್ಶನವೂ ಇಲ್ಲಿವೆ. ವಿದ್ಯಾರ್ಥಿಗಳು ಮತ್ತು ಚಾರಿತ್ರಿಕ ಕುತೂಹಲಿಗಳು ಈ ಪ್ರದರ್ಶನದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries