`ಕುದಿಪ್' ಯೋಜನೆಗೆ ಇಂದು ಚಾಲನೆ ನನಸಾಗಲಿರುವ ಕ್ರೀಡಾ ವಲಯದ ಕನಸು
0
ಡಿಸೆಂಬರ್ 25, 2018
ಕಾಸರಗೋಡು: ಜಿಲ್ಲೆಯ ಕ್ರೀಡಾವಲಯದ ಅನೇಕ ವರ್ಷಗಳ ಕನಸಾಗಿರುವ ಸಮಗ್ರ ಅಭಿವೃದ್ಧಿಗೆ `ಕುದಿಪ್`(ಜಿಗಿತ) ಎಂಬ ವಿನೂತನ ಯೋಜನೆ ಆರಂಭದೊಂದಿಗೆ ಚಾಲನೆ ಲಭಿಸಲಿದೆ.
ಜಿಲ್ಲಾ ಪಂಚಾಯತಿ ನೇತೃತ್ವದಲ್ಲಿ ಗಡಿನಾಡಿನ ಕ್ರೀಡಾವಲಯದ ಮುದುಡುವಿಕೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೀರ್ಘಗಾಮಿಯಾಗಿರುವ ಈ ಯೋಜನೆ ಇಂದು ಶುಭಾರಂಭವಾಗಲಿದೆ.
`ಕ್ರೀಡಾ ಯೌವನದ ಜಿಗಿತ' ಎಂಬ ಸಂಕಲ್ಪದೊಂದಿಗೆ 15ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. 5ನೇ ತರಗತಿಯಿಂದ 8ನೇ ತರಗತಿ ವರೆಗಿನ ಮಕ್ಕಳಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಯೋಜನೆಯ ಉದ್ದೇಶ. ಇದರ ಅಂಗವಾಗಿ ಡಿ.26ರಿಂದ 28 ವರೆಗೆ ಪರಿಣತರಾದ ಕ್ರೀಡಾ ಅಧ್ಯಾಪಕರ ಮೂಲಕ ಪ್ರತಿಭೆಗಳಿಗೆ ತರಬೇತಿ ನೀಡುವ ಶಿಬಿರ ನಡೆಸಲಾಗುವುದು. ಜಿಲ್ಲೆಯ ಪ್ರತಿ ಶೈಕ್ಷಣಿಕ ಜಿಲ್ಲೆಗಳಿಂದ ಸೆಲೆಕ್ಷನ್ ಕ್ಯಾಂಪ್ ಮೂಲಕ ಆಯ್ಕೆ ಮಾಡಲಾದ ತಲಾ 90 ಮಕ್ಕಳಂತೆ, 7 ಉಪಜಿಲ್ಲೆಗಳಿಂದ ಒಟ್ಟು 630 ಮಕ್ಕಳು ಈ ಶಿಬಿರದಲ್ಲಿ ತರಬೇತಿ ಪಡೆಯಲಿದ್ದಾರೆ. ಶಿಬಿರದ ನಂತರ ಮಕ್ಕಳಿಗೆ ನಿರಂತರ ತರಬೇತಿ ನೀಡುವ ಕಾರ್ಯಕ್ರಮಕ್ಕೆ ರೂಪುನೀಡಲಾಗಿದೆ. ತರಬೇತಿ ವೇಳೆ ಬೇಕಾದ ಸಲಕರಣೆಗಳು, ಆಹಾರ ಪೂರೈಕೆ ಇತ್ಯಾದಿಗಳಿಗೂ ಜಿಲ್ಲಾ ಪಂಚಾಯತಿ ಯೋಜನೆ ಹಮ್ಮಿಕೊಳ್ಳಲಿದೆ. ಈ ಮೂಲಕ ಜಿಲ್ಲೆಯಲ್ಲಿ ಹೊಸನಿರೀಕ್ಷೆಯೂ ಮೂಡಿದೆ.
ಇಂದು ಸಂಜೆ 4 ಗಂಟೆಗೆ ಚಂದ್ರಗಿರಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಕೆ.ಕುಂಞÂರಾಮನ್ ಯೋಜನೆ ಉದ್ಘಾಟಿಸುವರು. ಈ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಅವಲೋಕನ ಸಭೆ ಜರುಗಿತು. ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ವೈಕ್ಷಣಿಕ ಉಪನಿರ್ದೇಶಕ ಡಾ.ಗಿರೀಶ್ ಚೋಲಯಿಲ್, ಜಿಲ್ಲಾ ಪಂಚಾಯತಿ ಸದಸ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.


