HEALTH TIPS

ನಾಳೆಯಿಂದ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನ ಮಂದಿರ ಲೋಕಾರ್ಪಣೆ, ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ

ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ನೂತನ ಮಂದಿರವು ದ.27,28,29ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮಗಳು : ಡಿ.27ರಂದು ಪೂರ್ವಾಹ್ನ 9 ಕ್ಕೆ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದ ಹಸಿರುವಾಣಿ ಮೆರವಣಿಗೆ ಆರಂಭ, ಉಗ್ರಾಣ ತುಂಬಿಸುವುದು, ಮಧ್ಯಾಹ್ನ ತತ್ವಮಸಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಪ್ರಸಾದ ಭೋಜನ, 2ರಿಂದ ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿ ಪ್ರಾಯೋಜಕತ್ವದಲ್ಲಿ ಯಕ್ಷಭಾರತೀ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ, ಸಾಯಂಕಾಲ 6 ಗಂಟೆಯಿಂದ ಸ್ಥಳಶುದ್ಧಿ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ವಾಸ್ತುಪೂಜೆ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ., ಸಾಯಂ 7ಗಂಟೆಯಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ. ಡಿ.28ರಂದು ಬೆಳಿಗ್ಗೆ 5ಕ್ಕೆ ದೀಪ ಪ್ರತಿಷ್ಠೆ, ಶರಣಂ ವಿಳಿ, 8ರಿಂದ ಗಣಪತಿ ಹೋಮ, 10 ಗಂಟೆಗೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಕೇಶವಾನಂದಭಾರತೀ ಶ್ರೀಪಾದಂಗಳರ ಆಗಮನ, ಪೂರ್ಣಕುಂಭ ಸ್ವಾಗತ, ಶ್ರೀಗಳಿಂದ ದೀಪ ಪ್ರತಿಷ್ಠೆ, ಆಶೀರ್ವಚನ, ಮಂದಿರದ ಲೋಕಾರ್ಪಣೆ. 10.12ರಿಂದ 11.05ರ ಕುಂಭಲಗ್ನ ಸುಮುಹೂರ್ತದಲ್ಲಿ ಮಂದಿರದ ರಮೇಶ ಗುರುಸ್ವಾಮಿ ಇವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಚಿತ್ರ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. ಸಾಯಂ 4 ಗಂಟೆಯಿಂದ ಸಭಾ ಕಾರ್ಯಕ್ರಮ. ಶ್ರೀ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಪರಮಪೂಜ್ಯ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಇವರುಗಳಿಂದ ಆಶೀರ್ವಚನ. ಜ್ಯೋತಿಷ್ಯರತ್ನ ಪದ್ಮನಾಭ ಶರ್ಮ ಬೇಳ, ಇರಿಞ್ಞÁಲಕ್ಕುಡ, ಬಿ. ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಧ.ಗ್ರಾ.ಯೋ. ಜಿಲ್ಲಾ ಯೋಜನಾಧಿಕಾರಿ ಚೇತನಾ, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಬದಿಯಡ್ಕ ಗ್ರಾ.ಪಂ.ಸದಸ್ಯರುಗಳಾದ ಶಂಕರ ಡಿ., ಪ್ರೇಮ ಕುಮಾರಿ ಶುಭಾಶಂಸನೆಗೈಯಲಿದ್ದಾರೆ. ಶ್ರೀ ಧರ್ಮಶಾಸ್ತ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಗುರುಸ್ವಾಮಿ, ಮಂದಿರದ ರಮೇಶ ಗುರುಸ್ವಾಮಿ, ಸ್ಥಳದಾನಿ ಸಂಜೀವ ರೈಗಳ ಮೊಮ್ಮಗ ಪಂದಳ ರಾಜ ಕುಮಾರ ರೈ, ನಿವೃತ್ತ ಡಿ.ವೈ.ಎಸ್.ಪಿ. ಪ್ರಕಾಶ್ ನೀರ್ಚಾಲು, ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿಯ ರವಿಚಂದ್ರ ಮೈಕುರಿ, ಮಾತೃಮಂಡಳಿಯ ಜಯಶ್ರೀ ಉಪಸ್ಥಿತರಿರುವರು. ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ, ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಸುಧಾಮ ಮಾಸ್ತರ್ ಮಲ್ಲಡ್ಕ, ಉತ್ಸವ ಸಮಿತಿ ಕಾರ್ಯದರ್ಶಿ ರವೀಂದ್ರ ಕೆ. ಪಾಲ್ಗೊಳ್ಳಲಿದ್ದಾರೆ. ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1ರಿಂದ ಮಹಾಬಲ ರೈ ಮಲ್ಲಡ್ಕ ಪ್ರಾಯೋಜಕತ್ವದಲ್ಲಿ ಯಕ್ಷಗಾನ `ಗಾನವೈಭವ', ಹಿಮ್ಮೇಳದಲ್ಲಿ ಪ್ರಫುಲ್ಲಚಂದ್ರ ನೆಲ್ಯಾಡಿ, ಕಾವ್ಯಶ್ರೀ ಅಜೇರು, ವೆಂಕಟ್ರಮಣ ಭಟ್ ತಲ್ಪಣಾಜೆ ಭಾಗವತರಾಗಿ ಸಹಕರಿಸಲಿದ್ದಾರೆ. ಸಾಯಂ 6ರಿಂದ ದಿ| ಚಕ್ರೇಶ್ವರ ಸ್ಮರಣಾರ್ಥ ಜಯಂತಿ ಹಾಗೂ ಮಕ್ಕಳು ಮತ್ತು ವೈಶ್ಣವಿ ನಾಟ್ಯಾಲಯದ ಪೋಷಕರ ಪ್ರಾಯೋಜಕತ್ವದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ವೈಶ್ಣವಿ ನಾಟ್ಯಾಲಯ ಪುತ್ತೂರು ಇವರ ಶಿಷ್ಯವೃಂದದವರಿಂದ `ನೃತ್ಯಾಭಿಷೇಕಂ' ಭರತನಾಟ್ಯ ಮತ್ತು ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯರೂಪಕ, ರಾತ್ರಿ 9ರಿಂದ ರುದ್ರ ಫ್ರೆಂಡ್ಸ್ ನೀರ್ಚಾಲು ಪ್ರಾಯೋಜಕತ್ವದಲ್ಲಿ ವಿಠಲ ನಾಯಕ್ ಮತ್ತು ಬಳಗದವರಿಂದ `ಗೀತಾ ಸಾಹಿತ್ಯ ಸಂಭ್ರಮ' ಸಂದೇಶದ ಸಂತೋಷ ವಿನೂತನ ಶೈಲಿಯ ಕಾರ್ಯಕ್ರಮ, ರಾತ್ರಿ 11ರಿಂದ ಶ್ರೀಮತಿ ಮತ್ತು ಶ್ರೀ ಸೀತಾರಾಮ ಆಚಾರ್ಯ, ಭವಾನಿ ಜ್ಯುವೆಲ್ಲರಿ ನೀರ್ಚಾಲು ಪ್ರಾಯೋಜಕತ್ವದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಯಕ್ಷಗಾನ ಬಯಲಾಟ `ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ, ವಾವರ ಮೋಕ್ಷ'. ಡಿ.29ರಂದು ಬೆಳಿಗ್ಗೆ 5ಕ್ಕೆ ಶರಣಂ ವಿಳಿ, ಗೋಪಾಲಕೃಷ್ಣ ಪೈ ಬದಿಯಡ್ಕ ಇವರಿಂದ ದೀಪಪ್ರತಿಷ್ಠೆ, ವಿವಿಧ ಭಜನಾ ಸಂಘಗಳಾದ ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು, ಶ್ರೀ ಧರ್ಮಶಾಸ್ತಾ ಮಾತೃಮಂಡಳಿ ನೀರ್ಚಾಲು, ಶ್ರೀ ಹರಿಹರ ಭಜನ ಸಂಘ ಮಾಡತ್ತಡ್ಕ, ಶ್ರೀ ಪೂಮಾಣಿ ಕಿನ್ನಿಮಾಣಿ ಭಜನ ಸಂಘ ಬದಿಯಡ್ಕ, ಶ್ರೀ ವನದುರ್ಗಾ ಬಾಲಗೋಕುಲ ಮೀಯಾಡಿಪಳ್ಳ ನೆಲ್ಲಿಕಟ್ಟೆ ಇವರುಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ. ಸಾಯಂ 6ರಿಂದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಹೊರಟು ಉತ್ಸವಾಂಗಣಕ್ಕೆ ಪಾಲೆಕೊಂಬು ಮೆರವಣಿಗೆ, ರಾತ್ರಿ 12ಕ್ಕೆ ಮಹಾಪೂಜೆ, ಮಂಗಳಾರತಿ. 12.30ಕ್ಕೆ ಅಯ್ಯಪ್ಪನ್ ಪಾಟು, ಪೊಲಿಪಾಟು, ರಾತ್ರೆ 3.30ರಿಂದ ತಾಲಿಪ್ಪೊಲಿ, ಅಗ್ನಿಪೂಜೆ, ತಿರಿ ಉಯಿಚ್ಚಿಲ್, ಅಯ್ಯಪ್ಪ - ವಾವರ ಯುದ್ಧ, ತಿರುವಿಳಕ್ಕ್ ಉತ್ಸವ. ವೇಣುಗೋಪಾಲನ್ ಮತ್ತು ಸಂಗಡಿಗರು, ಶ್ರೀ ಮಣಿಕಂಠ ಅಯ್ಯಪ್ಪನ್ ವಿಳಕ್ಕು ಸಂಘ ಬಾಲುಶ್ಶೇರಿ, ಕೋಝಿಕ್ಕೋಡು ಇವರಿಂದ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2ರಿಂದ ಶ್ರೀಮಂದಿರ ಪಿ.ಬಿ. ರಮೇಶ ಗುರುಸ್ವಾಮಿ ಪ್ರಾಯೋಜಕತ್ವದಲ್ಲಿ ಯಕ್ಷಸಂಜೀವಿನಿ ಟ್ರಸ್ಟ್ (ರಿ) ಜಾಲಹಳ್ಳಿ ಬೆಂಗಳೂರು ಇವರ ಮಹಿಳಾ ತಂಡದವರಿಂದ ಯಕ್ಷಗಾನ ಪ್ರದರ್ಶನ `ಶಿವಭಕ್ತ ವೀರಮಣಿ'. ರಾತ್ರಿ 7 ಗಂಟೆಗೆ ರಮೇಶ್ ಕಳೇರಿ ಬೇಳ ಮತ್ತು ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ ಪ್ರಾಯೋಜಕತ್ವದಲ್ಲಿ ವಿದುಷಿ ವಿದ್ಯಾಲಕ್ಷ್ಮಿ, ನಾಟ್ಯನಿಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯಸಂಭ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries