ತುಳು ಅಕಾಡೆಮಿ ಕಾರ್ಯಕ್ರಮಕ್ಕೆ ನೈತಿಕತೆ ಇಲ್ಲವೇ?- ಬಿಜೆಪಿ
0
ಡಿಸೆಂಬರ್ 25, 2018
ಕುಂಬಳೆ: ಸರಕಾರದ ಅಧೀನದ ತುಳು ಅಕಾಡೆಮಿಯ ಅಧಿಕೃತ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಸಭಾಂಗಣದಲ್ಲಿ ನಡೆಸಬೇಕು. ಆದರೆ ಕ್ರಿಸ್ಮಸ್ ಪ್ರಯುಕ್ತ ತುಳು ಅಕಾಡೆಮಿ ಸೋಮವಾರ ವರ್ಕಾಡಿಯ ಮೊರತ್ತಣೆಯ ಉದ್ಯಮಿ, ಕಮ್ಯುನಿಸ್ಟ್ ನೇತಾರರೋರ್ವರ ಮನೆಯ ಅಂಗಳದಲ್ಲಿ ಅವರ ಸೊಸೆಯ ಸೀಮಂತ ಕಾರ್ಯಕ್ರಮ ವೇದಿಕೆಯಲ್ಲಿ ಸಂಘಟಿಸಿರುವುದು ಆರ್ಥಿಕ ಮುಗ್ಗಟ್ಟು ನಿ0ದಲೇ? ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪ್ರಶ್ನಿಸಿದೆ.
ಹೆಸರಿಗೆ ಮಾತ್ರ ಕಾರ್ಯಕ್ರಮ ಸಂಘಟಿಸುವ, ಭಾಷೆಯ ಹೆಸರಲ್ಲಿ ಜನತೆಯನ್ನು ವ0ಚಿಸುವ ಅಗತ್ಯ ಅಕಾಡೆಮಿಯ ಹಿಡನ್ ಅಜೆ0ಡವೇ? ಅಥವಾ ಗತಿಗೆಟ್ಟು ಇಂತಹ ಕಾರ್ಯಕ್ರಮ ನಡೆಸುವ ಅಗತ್ಯವಾದರೂ ಏನಿತ್ತು? ತುಳು ಅಕಾಡೆಮಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕ್ರಮವೇ ಅಥವಾ ಸಮಗ್ರ ತುಳುವರಿಗಾಗಿ ಇರುವ ಕಾರ್ಯಕ್ರಮವೇ ಎಂದು ಬಿಜೆಪಿ ಪ್ರಶ್ನಿಸಿದೆ?
ನಾಡಿನ ಜನತೆಗೆ ಆಹ್ವಾನ ನೀಡದೆ,ಸ್ಥಳೀಯ ರಾಜಕೀಯ ಪ್ರತಿನಿಧಿಗಳನ್ನು ಆಹ್ವಾನಿಸದೆ ಅಕಾಡೆಮಿ ಕೇವಲ ಸ್ಥಳೀಯ ಕಮ್ಯುನಿಸ್ಟ್ ನೇತಾರನ್ನು ಕರೆದು ಕಮ್ಯುನಿಸ್ಟ್ ನೇತಾರನ ಮನೆಯ ಅಂಗಳದಲ್ಲಿ ಸಂಘಟಿಸಿದ ಕಾರ್ಯಕ್ರಮ ನಾಡಿನ ಬೆಳವಣಿಗೆಗೆ ಬೇಕಾಗಿಯೇ ಅಥವಾ ಆ ನೇತಾರಣ ಮನೆಯಲಿದ್ದ ಸೀಮಂತ ಕಾರ್ಯಕ್ರಮದ ಮನೋರಂಜನೆಗಾಗಿಯೇ. ಅಕಾಡೆಮಿ ರಾಜಕೀಯ ಪ್ರೇರಿತವಾಗಿ ವರ್ತಿಸಬಾರದು, ಕಾರ್ಯಕ್ರಮಗಳು ನಿಯಮ ನಿಬಂಧನೆಗಳು ಪಾಲಿಸಬೇಕು, ಖಾಸಗೀ ವ್ಯಕ್ತಿಯ ಅಂಗಳದಲ್ಲಿ ಮಾಡದೆ ಸರ್ವರಿಗೂ ಭಾಗವಹಿಸುವಂತೆ ಅನುಕೂಲಕರವಾಗಿರಬೇಕೆಂದು ಬಿಜೆಪಿ ಆಗ್ರಹಿಸಿದೆ.
ಕುಂಬಳೆಯಲ್ಲಿರುವ ಬಿಜೆಪಿ ಮಂಡಲ ಕಚೇರಿಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆ ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್ ಉದ್ಘಾಟಿಸಿದರು.ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಬಿಜು ಎಲಕುಡಿ, ನ್ಯಾಯವಾದಿ.ವಿ.ಬಾಲಕೃಷ್ಣ ಶೆಟ್ಟಿ, ಎ ಕೆ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಪ್ರ.ಕಾರ್ಯದರ್ಶಿ ಮುರಳೀಧರ್ ಯಾದವ್ ನಾಯ್ಕಾಪು ಸ್ವಾಗತಿಸಿ, ಆದರ್ಶ್ ಬಿಎಂ ವಂದಿಸಿದರು. ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಯಶಸ್ವಿಗೆ ಬಿಜೆಪಿ ಬೆಂಬಲ ನೀಡಬೇಕೆಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.


