HEALTH TIPS

ಸಾಹಿತಿ, ಕಲಾವಿದರ ಅಂತರಾಳ ತೆರೆದಿಟ್ಟ ಸುಖ ದು:ಖಗಳ `ಸಾಹಿತ್ಯ ಸಂತೆ'

ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕರಂದಕ್ಕಾಡಿನ `ಪದ್ಮಗಿರಿ ಕಲಾಕುಟೀರ'ದಲ್ಲಿ `ಸಾಹಿತ್ಯ ಸಂತೆ' ಬದುಕಿನ ಸಣ್ಣ ಸುಖಗಳು....ಎನ್ನುವ ವಿಶಿಷ್ಟ ಕಾರ್ಯಕ್ರಮ ಭಾನುವಾರ ದಿನಪೂರ್ತಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತಿ, ಕಲಾವಿದರು ತಮ್ಮ ಸುಖ, ದು:ಖವನ್ನು ತೆರೆದುಕೊಂಡು ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿದರು. ಡಾ.ಬಿ.ಎ.ವಿವೇಕ ರೈ, ಡಾ.ನಾ.ದಾಮೋದರ ಶೆಟ್ಟಿ, ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಖ್ಯಾತ ವೈದ್ಯ ಡಾ.ಶ್ರೀಪಾದ್ ರಾವ್, ಪತ್ರಕರ್ತ ಯು.ಕೆ.ಕುಮಾರನಾಥ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಾವುದೇ ಕಾರ್ಯದಲ್ಲೂ ಸಾಕಷ್ಟು ಚಿಂತಿಸಿದ ಬಳಿಕವೇ ಮುನ್ನಡಿ ಇಡಬೇಕು. ಇಲ್ಲದಿದ್ದರೆ ಬದುಕಿನಲ್ಲಿ ಸಮಸ್ಯೆಗಳ ಸರಮಾಲೆ ಎದುರಿಸಬೇಕಾಗುತ್ತದೆ ಎಂದು ಡಾ.ಬಿ.ಎ.ವಿವೇಕ ರೈ ಅವರು ಹೇಳಿದರು. ಈ ಮಾತುಗಳಿಗೆ ಜರ್ಮನಿಯಲ್ಲಿ ಕಳೆದ ದಿನಗಳಲ್ಲಿ ಎದುರಿಸಿದ ಸಮಸ್ಯೆಗಳನ್ನು ಉದಾಹರಣೆಯನ್ನಿತ್ತರು. ಮನುಷ್ಯ ರಿಲ್ಯಾಕ್ಸ್ ಆದಾಗ ಸಾಧನೆಗೆ ಸುಗಮವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಲ್ಲಿ ಭಯ ಹುಟ್ಟಿಸುವುದರಿಂದ ಜೀವನ ಪರ್ಯಂತ ಭಯ ಕಾಡುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಭಯವನ್ನು ಹುಟ್ಟಿಸದೆ ವಾಸ್ತವವನ್ನು ಮನನ ಮಾಡಬೇಕು ಎಂದು ಡಾ.ನಾ.ದಾಮೋದರ ಶೆಟ್ಟಿ ಅವರು ಹೇಳಿದರು. ಕಾಲದ ಹರಿವಿನಲ್ಲಿ ಕೊಚ್ಚಿಹೋದ, ಹತ್ತಿರವಿದ್ದರೂ ದೂರವಾದ, ತೆರೆಯಲೆತ್ನಿಸಿದರೂ ಮುಚ್ಚಿಹೋದ, ನಗಲೆತ್ನಿಸಿದರೂ ಅಳುವಾದ, ಅಳಲೆತ್ನಿಸಿದರೆ ಜೀವನವೇ ಆದ, ಎಷ್ಟೆಷ್ಟೋ ಪರಸ್ಪರ ಹಂಚ ಬೇಕಾಗಿದ್ದ ಸಿಹಿ ಕಹಿ ನೆನಪುಗಳು, ಕಾಲಗರ್ಭದೊಳಗಿಂದ ಹೊರ ಜಿಗಿಯಲು ಇದೊಂದು ವಿಶಿಷ್ಟ, ವಿಭಿನ್ನ ಅವಕಾಶವನ್ನೊದಗಿಸಿತು. ಕಾರ್ಯಕ್ರಮದಲ್ಲಿ ರವೀಂದ್ರ ಜೋಷಿ ಮೈಸೂರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಾ.ವಸಂತ ಕುಮಾರ್ ಪೆರ್ಲ, ಶಶಿರಾಜ ಕಾವೂರು, ಬಿ.ಎನ್.ಸುಬ್ರಹ್ಮಣ್ಯ, ಸ್ನೇಹಲತಾ ದಿವಾಕರ್, ಕವಿತಾ ಕೂಡ್ಲು, ಗೀತಾ ಕೋಟೆ ಸುಳ್ಯ, ಸೀತಾಲಕ್ಷ್ಮಿ ಕರ್ಕಿಕೋಡಿ, ಚೇತನ ಕುಂಬಳೆ, ಯಶವಂತ ಬೋಳೂರು, ಮಲಾರ್ ಜಯರಾಮ ರೈ, ಯೋಗೀಶ್ ರಾವ್ ಚಿಗುರುಪಾದೆ, ಪ್ರವೀಣರಾಜ್ ಪುಣಿಂಚಿತ್ತಾಯ, ಮುಹಮ್ಮದ್ ಅನ್ಸಾರಿ, ಜ್ಯೋತಿಪ್ರಭಾ ಎಸ್.ರಾವ್, ಬಿ.ನರಸಿಂಗ ರಾವ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಗಣೇಶ್ ಪೈ ಬದಿಯಡ್ಕ, ಗೋವಿಂದ ಭಟ್ ಬಳ್ಳಮೂಲೆ, ಡಾ.ಸುದೇಶ್ ರಾವ್, ಟಿ.ಶಂಕರನಾರಾಯಣ ಭಟ್, ಕಿಶೋರ್ ಪೆರ್ಲ, ಸಾಯಿಭದ್ರಾ ರೈ ಶಿರಿಯಾ, ಸತೀಶ್ಚಂದ್ರ ಭಂಡಾರಿ ಕೋಳಾರು, ಜಯಾನಂದ ಕುಮಾರ್ ಹೊಸದುರ್ಗ, ಬಿ.ರಾಮಮೂರ್ತಿ, ಸುಬ್ಬಣ್ಣ ಶೆಟ್ಟಿ, ಉದಯ ಕುಮಾರ್ ಮನ್ನಿಪ್ಪಾಡಿ, ರಘು ಮೀಪುಗುರಿ ಮೊದಲಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ರಂಗಚಿನ್ನಾರಿ ಸಂಚಾಲಕ ಕಾಸರಗೋಡು ಚಿನ್ನಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಜೆ ನಡೆದ ಸಮಾರೋಪದಲ್ಲಿ ಮಾತನಾಡಿದ ಡಾ.ಬಿ.ಎ.ವಿವೇಕ ರೈ ಅವರು ಭೌದ್ದಿಕತೆ ಪ್ರತಿಯೊಬ್ಬನಲ್ಲೂ ಇರುತ್ತದೆ. ಹಳೆಯ ನೆನಪುಗಳು ಯಾವತ್ತಿಗೂ ವರ್ತಮಾನಕ್ಕೆ ಕ್ರಿಯಾಶೀಲತೆಯೊದಗಿಸುತ್ತದೆ. ಸಂಕಷ್ಟ-ಸವಾಲುಗಳನ್ನು ಮೀರಿ ಬೆಳೆದಾಗ ಅಂತಹ ಗೆಲುವು ಹೆಚ್ಚು ಸೂಕವಾಗಿರುತ್ತದೆ ಎಂದು ತಿಳಿಸಿದರು. ಸಂತೆ ಎಂದರೆ ಗೊಂದಲ ಎಂಬ ಭಾವ ನಮ್ಮಲ್ಲಿದೆ. ಆದರೆ ಎಲ್ಲವನ್ನೂ ತೆರೆದಿರುವ, ಮುಕ್ತತೆಯ ವಾತಾವರಣ ಸಂತೆಯ ವಿಶೇಷತೆಯಾಗಿದ್ದು, ಹೊಸ ಅನುಭವಗಳಿಗೆ ಕಾರಣವಾಗುತ್ತದೆ ಎಂದು ಅವರು ವಿಶ್ಲೇಶಿಸಿದರು. ಕಾರ್ಯಕ್ರಮ ಸಂಘಟಿಸಿದ ರಂಗಚಿನ್ನಾರಿ ನಿರ್ದೇಶಕ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾತನಾಡಿ, ಬದುಕಿನ ತಾತ್ವಿಕತೆಯ ಒಳನೋಟಗಳು ಭಿನ್ನ ವಿಭಿನ್ನವಾಗಿ ಒಂದೊಂದು ಕಾಲಘಟ್ಟದಲ್ಲೂ ರೋಚಕಗೊಳಿಸುತ್ತದೆ. ಹೇಳಲಾಗದ, ಹೇಳ ಬಾರದ ನೆನಪುಗಳು ಪ್ರತಿಯೊಬ್ಬನ ಅಂತರಂಗದಲ್ಲೂ ಮುಳುಗೇಳುತ್ತಿರುತ್ತದೆ. ಆದರೆ ಸಂರ್ಭಕ್ಕನುಸರಿಸಿ ಖಷಿ ನೀಡುವ ಅನುಭವ, ನೆನಪುಗಳನ್ನು ಹಂಚಿಕೊಳ್ಳುವುದು ಕ್ರಿಯಾಶೀಲತೆಯೊಂದಿಗೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ ಎಂದು ತಿಳಿಸಿದರು. ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ, ಕಲೆ, ರಂಗಭೂಮಿ, ಶಿಲ್ಪಶಾಸ್ತ್ರ-ಚಿತ್ರ, ಪತ್ರಿಕೋದ್ಯಮ, ವ್ಯವಸಾಯ ಹೀಗೆ ವಿವಿಧ ರಂಗಗಳ ಪ್ರಮುಖರು ಪಾಲ್ಗೊಂಡು ತಮ್ಮ ಅನುಭವ-ಜೀವನ ಕಥೆಗಳನ್ನು ತೆರೆದಿಟ್ಟಿರುವುದು ಗಡಿನಾಡಿನ ಚರಿತ್ರೆಯಲ್ಲಿ ಹೊಸ ಕಾರ್ಯಕ್ರಮವೊಂದಕ್ಕೆ ನಾಂದಿಯೊದಗಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries