HEALTH TIPS

ಪೊದೆಮೀಸೆ, ಬಿಗು ಮುಖದಲ್ಲೂ ಅರಳಿದ ಹಸಿರು ಠಾಣೆ ಬಳಿ ತರಕಾರಿ ಬೆಳೆಸಿ ಯಶಸ್ವಿಯಾದ ಪೆÇಲೀಸರು

ಕುಂಬಳೆ: ಸದಾ ಬಿಗು ಮುಖಮುದ್ರೆಯ, ಗಂಭೀರರಾಗಿ ಒತ್ತಡದ ಬದುಕಿನೊಂದಿಗೆ ಜೀವನ ಸಾಗಿಸುವ ಪೋಲೀಸರ ಪೊದೆಮೀಸೆಯೊಳಗೂ ಹಸಿರಿನ ಪರಿಸರ ಪ್ರೀತಿ ಮೂಡಿಬರಬಲ್ಲದು ಎಂಬುದಕ್ಕೆ ಕುಂಬಳೆ ಪೋಲೀಸ್ ಠಾಣೆ ಮಾದರಿಯಾಗಿದೆ. ಕುಂಬಳೆ ಪೆÇಲೀಸ್ ಠಾಣೆ ಬಳಿಯ ಖಾಲಿ ಸ್ಥಳದಲ್ಲಿ ತರಕಾರಿ ಕೃಷಿ ಮಾಡಿ ಕುಂಬಳೆ ಪೆÇಲೀಸರು ಗಮನ ಸೆಳೆದಿದ್ದಾರೆ. ಇಲ್ಲಿ ಬೆಂಡೆಕಾಯಿ, ಹೀರೆಕಾಯಿ, ಅಲಸಂಡೆ ಮುಂತಾದ ತರಕಾರಿ ಕೃಷಿ ಮಾಡಿದ್ದು, ಉತ್ತಮ ಬೆಳೆ ಲಭಿಸಿದೆ. ಬಿಡವಿನ ವೇಳೆ ಪೆÇಲೀಸರು ಕೃಷಿಯಲ್ಲಿ ತೊಡಗಿಕೊಂಡ ಕಾರಣ ಅಗತ್ಯಕ್ಕೆ ಬೇಕಾದ ತರಕಾರಿ ಲಭಿಸುವಂತಾಯಿತು. ಕುಂಬಳೆ ಸಿ.ಐ ಕೆ.ಪ್ರೇಮ್‍ಸದನ್, ಎಸ್.ಐ ಜಯರಾಜನ್, ಜನಮೈತ್ರಿ ಪಿಆರ್‍ಒ ಅನಿಲ್‍ಕುಮಾರ್ ಮುಂತಾದವರ ನೇತೃತ್ವದಲ್ಲಿ ತರಕಾರಿ ಕೃಷಿ ಮಾಡಲಾಗಿದೆ. ಕೇರಳದಚ ಮಲೆಯಾಳಿಗಳು ಹೀಗೆಯೇ! ರಾಜಕೀಯ, ಗದ್ದಲ-ಗಲಾಟೆಗಳ ಮಲೆಯಾಳಿ ಬದುಕು ಗೊಂದಲದೊಂದಿಗೆ ಅಷ್ಟೇ ನೆಲದ ಪ್ರೀತಿಯಲ್ಲೂ ವಿಶಿಷ್ಟವಾದುದು. ಮಲೆಯಾಳಿಗಳು ಎಲ್ಲೇ ಹೋದಲಿ ಒಂದಡಿ ಮಣ್ಣು ಲಭ್ಯವಾದರೆ ಏನಾದರೊಂದು ಹಸಿರು ಬೆಳೆಸುವ ತುಡಿತ ಅವರನ್ನು ಕಾಡುತ್ತದೆ. ಈಗೀಗ ನೆಲ ಲಭ್ಯವಾಗದಿದ್ದರೆ ಕಾಂಕ್ರೀಟ್ ಕಟ್ಟಡಗಳ ಲಭ್ಯ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಏನಾದರೊಂದು ನೆಡುವ ಪರಿಪಾಠ ಬೆಳೆಸಿಕೊಂಡಿರುವುದು ಕಂಡುಬರುತ್ತಿದೆ. ಮರ ಗೆಣಸು ಕೇರಳೀಯರ ಅತೀ ಪ್ರೀತಿಯ ಕೃಷಿಯಾದರೂ ಈಗೀಗ ಇತರ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ಸರಕಾರಿ ಸೇವೆಯಲ್ಲಿದ್ದ ಮಲೆಯಾಳಿಯೋರ್ವರು ತಮ್ಮ ಬಾಡಿಗೆ ಕೊಠಡಿಯ ಒಳಗೆ ಪ್ಲಾಸ್ಟಿಕ್ ಚೀಲಗಳಲ್ಲಿ ತರಕಾರಿ ಕೃಷಿ ಮಾಡಿ ಗಮನ ಸೆಳೆದಿದ್ದರು. ಅವರ ಕೃಷಿಯ ಉಮೇದಿನಲ್ಲಿ ಮನೆಯೊಳಗಿನಿಂದ ಹಸಿರು ಬಳ್ಳಿಯೊಂದು ಚಿಗುರುತ್ತಾ ಪಕ್ಕದ ಮನೆಯೊಳಗೆ ನುಸಿಳಿ ಭಾರೀ ವಿವಾದಕ್ಕೆಡೆಯಾದುದನ್ನು ನೆನಪಿಸಿದಾಗ ಎಂತಹ ಮನುಷ್ಯರು ಮರ್ರೆ ಎಂದೆನಿಸದಿರದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries