HEALTH TIPS

ಅಣ್ಣ ತಮ್ಮ ಕಂಬಳ ಸಮಾರೋಪ ತುಳುನಾಡಿನ ಭಾಗವಾದ ಕಾಸರಗೋಡಿನಲ್ಲೂ ಕಂಬಳ ಆಯೋಜನೆಗೆ ಕರ್ನಾಟಕದಂತೆಅಗತ್ಯ ನೀತಿ ರೂಪಿಸಬೇಕು-ಪಿ.ಆರ್.ಶೆಟ್ಟಿ ಪೊಯ್ಯೆಲು

ಉಪ್ಪಳ: ಪೈವಳಿಕೆ ಬೋಳಂಗಳದಲ್ಲಿ ನಡೆದ ಚೊಚ್ಚಲ ಅಣ್ಣ ತಮ್ಮ ಜೋಡುಕರೆ ಕಂಬಳದ ಸಮಾರೋಪ ಸಮಾರಂಭ ಭಾನುವಾರ ಬೆಳಿಗ್ಗೆ ನಡೆಯಿತು. ಕಂಬಳದಲ್ಲಿ ಭಾಗವಹಿಸಿ ಗೆದ್ದ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದ ಅಣ್ಣ ತಮ್ಮ ಜೋಡುಕರೆ ಕಂಬಳದ ಗೌರವ ಸಲಹೆಗಾರ, ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು ಮಾತನಾಡಿ ಸತ್ಯ, ಧರ್ಮದ ತಾಣವಾದ ಪೈವಳಿಕೆಯ ಬೋಳಂಗಳದಲ್ಲಿ ಕಂಬಳ ಆಯೋಜನೆಗೆ ಸಣ್ಣ ಪುಟ್ಟ ಅಡೆತಡೆಗಳು ಬಂದರೂ ಯಶಸ್ವಿಯಾಗಿ ಕಂಬಳ ನಡೆದಿದೆ. ಮುಂದಿನ ವರ್ಷಗಳಲ್ಲಿ ನಿರಂತರವಾಗಿ ಕಂಬಳವನ್ನು ಇಲ್ಲಿ ಆಯೋಜಿಸುವಂತಾಗಲಿ ಮತ್ತು ಹೆಚ್ಚಿನ ಸಂಖ್ಯೆಯ ಜೋಡಿ ಕೋಣಗಳು ಭಾಗವಹಿಸುವಂತಾಗಲಿ ಎಂದು ಹಾರೈಸಿದರು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯಾನಾ ಆಸ್ಪತ್ರೆ ಸಮೂಹದ ಪ್ರಬಂಧಕ ಕಂಬಳ ಸಮಿತಿ ಮಹಾಪೋಷಕ ಅಬ್ದುಲ್ ಲತೀಫ್ ಸ್ವಪ್ನಗೋಡು ಮಾತನಾಡಿ, ಕಂಬಳ ಜನಪದ ಕ್ರೀಡೆಯು ವಿಶೇಷ ಅನುಭವವನ್ನು ನೀಡುವ ಅಪೂರ್ವ ಗ್ರಾಮೀಣ ಕಲೆಯಾಗಿದೆ. ಕಂಬಳ ಎಂಬುದು ಒಂದು ಉತ್ಸವ ಮತ್ತು ಅನನ್ಯ ಸಂಸ್ಕøತಿಯ ಭಾಗವಾಗಿದೆ. ಗಡಿನಾಡು ಪ್ರದೇಶವಾದ ಮಂಜೇಶ್ವರ ತಾಲೂಕಿನಲ್ಲಿ ದಶಕಗಳ ಹಿಂದೆ ನಡೆಯುತ್ತಿದ್ದ ಕಂಬಳವು ಸ್ತಬ್ದವಾಗಿತ್ತು. ಗಡಿನಾಡು ಪ್ರದೇಶದ ಮಂಜೇಶ್ವರ ತಾಲೂಕಿನಲ್ಲಿ ಪುನಃ ಕಂಬಳದ ಸದ್ದು ಮೊಳಗಿದ್ದು ಪೈವಳಿಕೆಯ ಬೊಳಂಗಳದಲ್ಲಿ ಕೇಳುವಂತಾಗಿದೆ. ಕಂಬಳವನ್ನು ಆಯೋಜಿಸಲು ಸಹಕಾರ ನೀಡಿದ ಎಲ್ಲಾ ಸಂಘಟಕ ಸಮಿತಿ ಸದಸ್ಯರನ್ನು, ಭಾಗವಹಿಸಿದ ಜೋಡಿ ಕೋಣಗಳ ಯಜಮಾನರನ್ನು ಅಭಿನಂದಿಸಿದರು. ಅಡೆತಡೆಗಳನ್ನು ಮೆಟ್ಟಿನಿಂತು ಯಶಸ್ವಿ ಕಂಬಳ ಆಯೋಜನೆಗಾಗಿ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸಿದರು. ಪ್ರತಿ ವರ್ಷ ಪೈವಳಿಕೆ ಬೋಳಂಗಳದಲ್ಲಿ ಕಂಬಳ ಕ್ರೀಡೆಯ ಆಯೋಜನೆಯಾಗಲಿ, ಅದಕ್ಕಾಗಿ ನಿರಂತರ ಸಹಕಾರ ನೀಡುವುದಾಗಿ ಹೇಳಿದರು. ಉಡುಪಿ, ದ.ಕನ್ನಡ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಮಾತನಾಡಿ ಕಂಬಳವನ್ನು ಸಮರ್ಥವಾಗಿ ಆಯೋಜಿಸಲು ಉತ್ಸುಕರಾಗಿರುವ ಯುವ ಸಮೂಹವನ್ನು ನಮ್ಮ ಮಧ್ಯೆ ಇದೆ. ಅಗತ್ಯವಾದ ಆರ್ಥಿಕ ಸಹಕಾರ ಸಮಾಜದಿಂದ ನೀಡಲ್ಪಟ್ಟರೆ ವ್ಯವಸ್ಥಿತ ಕಂಬಳ ಆಯೋಜನೆ ಕಷ್ಟಸಾಧ್ಯವಲ್ಲ ಎಂದರು. ಕರ್ನಾಟಕ ರಾಜ್ಯದಲ್ಲಿ ಕಂಬಳ ಆಯೋಜನೆಗೆ ಅಗತ್ಯವಾದ ಕಾನೂನು ರೂಪಿಸಲಾಗಿದೆ. ತುಳುನಾಡಿನ ಭಾಗವಾಗಿರುವ ಉತ್ತರ ಕೇರಳದಲ್ಲೂ ಅಡ್ಡಿ ಆತಂಕವಿಲ್ಲದೆ ಕಂಬಳ ಆಯೋಜಿಸುವಂತಾಗಬೇಕು. ಇದಕ್ಕೆ ಪೂಕವಾಗಿರುವ ಕಾನೂನು ಕೇರಳದಲ್ಲೂ ತರಬೇಕಿದ್ದು, ಇದಕ್ಕಾಗಿ ಇಲ್ಲಿನ ಜನಪ್ರತಿನಿಧಿಗಳು ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಣ್ಣ ತಮ್ಮ ಜೋಡುಕರೆ ಕಂಬಳದ ಮಹಾಪೋಷಕ ಉದ್ಯಮಿ ಅಬ್ದುಲ್ ಲತೀಫ್ ಅವರನ್ನು ಪೈವಳಿಕೆ ಅರಸ ರಂಗತ್ರೈ ಬಲ್ಲಾಳ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸೆಮಿಫೈನಲ್ ಹಂತ ತಲುಪಿದ ಹಾಗೂ ವಿಜೇತ ಕೋಣ ಜೋಡಿ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ರಾಜೇಶ್ ಶೆಟ್ಟಿ, ಬಾಡು ಪೂಜಾರಿ, ಉದ್ಯಮಿ ಕೆ.ಎಚ್.ಖಾದರ್ ಸ್ವಿಸ್‍ಗೋಲ್ಡ್, ಗೌರವ ಸಲಹೆಗಾರ ಮಾರಪ್ಪ ಭಂಡಾರಿ, ಶ್ರೀರಾಮ ಮೂಡಿತ್ತಾಯ, ಪ್ರಸಾದ್ ರೈ ಕಯ್ಯಾರ್, ರಮೇಶ್ ರೈ, ಹರೀಶ್ ಭಂಡಾರಿ, ಸುಬ್ರಹ್ಮಣ್ಯ ಭಟ್, ಝಡ್.ಎ.ಕಯ್ಯಾರ್, ಅಬ್ದುಲ್ ಅಜೆಕಾರು, ರಮೇಶ್ ಕಡಂಬಾರು, ಖಾದರ್ ಕುರುಡಪದವು, ಆದಂ ಆವಳ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ.ಎಂ, ಕಂಬಳ ಸಮಿತಿ ಪ್ರಧಾನ ಸಂಚಾಲಕ ಅಶ್ವಥ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅಜಿತ್.ಎಂ.ಸಿ ಲಾಲ್‍ಭಾಗ್ ಸ್ವಾಗತಿಸಿ, ಹರೀಶ್ ಶೆಟ್ಟಿ ಕಡಂಬಾರು ವಂದಿಸಿದರು. ಕಂಬಳದ ವಿವರ: ಪೈವಳಿಕೆಯ ಬೋಳಂಗಳದಲ್ಲಿ ನಡೆದ ಅಣ್ಣ ತಮ್ಮ ಜೋಡುಕರೆ ಕಂಬಳದಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಶನಿವಾರ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ಕಂಬಳವು ಭಾನುವಾರ ಬೆಳಿಗ್ಗೆ ಪೂರ್ಣಗೊಂಡಿತು. ಒಟ್ಟು 88 ಜೊತೆ ಜೋಡಿ ಕೋಣಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವು. ಕನೆಹಲಗೆಯಲ್ಲಿ ಒಟ್ಟು 4 ಜೊತೆ, ಅಡ್ಡ ಹಲಗೆ-4 ಜೊತೆ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ-17 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ -16 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ-13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ-34 ಜೊತೆ ಕೋಣಗಳು ಭಾಗವಹಿಸಿದ್ದವು. ಸೆಮಿಫೈನಲ್ ಹಂತ ತಲುಪಿದ ತಂಡಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕಾರ್ಯವನ್ನು ಬೋಳಂಗಳದಲ್ಲಿ ಆರಂಭಿಸಿರುವುದು ಕಂಬಳ ಇತಿಹಾಸದಲ್ಲಿ ಪ್ರಥಮವಾಗಿತ್ತು. ಪ್ರಶಸ್ತಿ ಗಳಿಸಿದ ಜೋಡಿ ಕೋಣಗಳನ್ನು ಓಡಿಸಿದವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಂಬಳದಲ್ಲಿ ವಿಜೇತ ತಂಡಗಳು: ಕನೆಹಲಗೆ ಸ್ಪರ್ಧೆಯಲ್ಲಿ ಪ್ರಥಮ-ಬೇಲಾಡಿ ಬಾವ ಅಶೋಕ್ ಶೆಟ್ಟಿ ದ್ವಿತೀಯ-ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ- ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ಎ'ತಂಡ ದ್ವಿತೀಯ-ಕೂಳೂರು ಪೊಯ್ಯೆಲು ಪಿ.ಆರ್ ಎಟ್ಟಿ ಬಿ'ತಂಡ ಹಗ್ಗ ಕಿರಿಯ ಪ್ರಥಮ-ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಎ'ತಂಡ ದ್ವಿತೀಯ-ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಬಿ'ತಂಡ ನೇಗಿಲು ಹಿರಿಯ ಪ್ರಥಮ-ಇರುವೈಲು ಪಾನಿಲ ಬಾಡ ಪೂಜಾರಿ ದ್ವಿತೀಯ-ಬೋಳದ ಗುತ್ತು ಸತೀಶ್ ಶೆಟ್ಟಿ ನೇಗಿಲು ಕಿರಿಯ ಪ್ರಥಮ-ಗೋಳ್ತಮಜಲು ಆಸೀಫ್ ಸಾಹೇಬ್ ಬಿ'ತಂಡ ದ್ವಿತೀಯ-ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ ಬಿ' ತಂಡ ಅಡ್ಡಹಲಗೆ ಪ್ರಥಮ-ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್ ದ್ವಿತೀಯ- ಹಂಕರಜಾಲು ಮೋಹನದಾಸ್ ಮೋಹನದಾಸ್ ಭಿರ್ಮಣ್ಣ ಶೆಟ್ಟಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries