ಜಿಲ್ಲಾ ಸಾಹಿತ್ಯ ಸಮೇಳನದ ಕವಿಗೋಷ್ಠಿಗೆ ಕವನಗಳ ಆಹ್ವಾನ
0
ಡಿಸೆಂಬರ್ 19, 2018
ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವು 2019 ಜನವರಿ 19 ಹಾಗೂ 20 ರಂದು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹಿರಿಯ ಪ್ರೌಢಶಾಲೆಯಲ್ಲಿ ಜರಗಲಿರುವುದು.
ಇದರ ಆಂಗವಾಗಿ ನಡೆಯುವ ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆ ಮಾಡಲು ಆಸಕ್ತ 18 ವರ್ಷ ಮೇಲ್ಪಟ್ಟ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಕವಿಗಳಿಂದ ಸ್ವರಚಿತ ಕನ್ನಡ ಕವನಗಳನ್ನು ಆಹ್ವಾನಿಸಲಾಗಿದೆ,
ಕವನಗಳು ಯಾವುದೇ ವಿಷಯಕ್ಕೆ ಸಂಬಂಧಿಸಿರಬಹುದು. ಕವನವು 30 ಸಾಲುಗಳಿಗೆ ಮೀರದಂತೆ; ಒಬ್ಬರು ತಲಾ ಒಂದು ಕವನವನ್ನು ಮಾತ್ರ ಕಳುಹಿಸಬಹುದು. 2018 ದಶಂಬರ ತಾರೀಕು 20ರ ಮೊದಲು ತಮ್ಮ ಕವನಗಳನ್ನು ಖಾಯಂ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಪಿ ರಾಮಚಂದ್ರ ಭಟ್ ,ಗೌರವ ಕಾರ್ಯದರ್ಶಿ,ಕ,ಸಾ,ಪ ಕೇರಳ ಗಡಿನಾಡ ಘಟಕ,ಅಂಚೆ ಧರ್ಮತ್ತಡ್ಕ (ವಯ)ಮಂಗಲ್ಪಾಡಿ 671324 ಮೊ.ಸಂ. 9446737968, E Mail pramachandrabhat2015@gmail,com,
ಅಥವಾ
(ಸುಂದರ ಬಾರಡ್ಕ - 9495755401)baradkasundara001@gmail,com,
ಇವರಿಗೆ ಕಳುಹಿಸಿಕೊಡಬೇಕು. ಈ ಮೊದಲು ಮುದ್ರಣರೂಪದಲ್ಲಿ ಎಲ್ಲೂ ಪ್ರಕಟವಾಗದ ಕವನಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆ ಆದ ಕವಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

