ವಾಟೆತ್ತಿಲ ಜಾಲು ಸುಬ್ರಹ್ಮಣ್ಯೆÃಶ್ವರ ಕ್ಷೆÃತ್ರ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಧನಸಹಾಯ
0
ಡಿಸೆಂಬರ್ 19, 2018
ಉಪ್ಪಳ: ಪುರಾಣ ಪ್ರಸಿದ್ಧವಾದ ಬಾಯಾರು ಸಮೀಪದ ವಾಟೆತ್ತಿಲ ಜಾಲು ಶ್ರಿÃಸುಬ್ರಹ್ಮಣ್ಯೆÃಶ್ವರ ಕ್ಷೆÃತ್ರ ಕ್ಕೆ ಧರ್ಮಸ್ಥಳದ ವತಿಯಿಂದ ಧನಸಹಾಯ ನೀಡಲಾಯಿತು. ಜೀರ್ಣೋದ್ಧಾರ ಹೊಸ್ತಿಲಲ್ಲಿರುವ ದೇವಸ್ಥಾನದ ನವೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ೨೦೧೯ರ ಮಧ್ಯಭಾಗದಲ್ಲಿ ಜೀಣೋದ್ಧಾರ ಕಾಮಗಾರಿ ಪೂರ್ಣಗೊಂಡು ಕಲಶಾಭಿಷೇಕ ನಡೆಯಲಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ವಾಟೆತ್ತಿಲ ಜಾಲು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಧನಸಹಾಯವಾಗಿ ನೀಡಲ್ಪಟ್ಟ ೫ ಲಕ್ಷ ರೂ.ಗಳ ಡಿ.ಡಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ವಿಶ್ವನಾಥ ಗೌಡ ಮತ್ತು ಅಶ್ವಥ್ ಪೂಜಾರಿ ಕ್ಷೆÃತ್ರ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಕ್ಷೆÃತ್ರದ ಧಾರ್ಮಿಕ ಮಾರ್ಗದರ್ಶಕರಾದ ಕಲ್ಲಡ್ಕ ರಾಮಕೃಷ್ಣ ಭಟ್, ವೀರೇಶ್ವರ ಕರ್ಮಾಕರ್, ಕ್ಷೆÃತ್ರ ಅರ್ಚಕ ವಾಟೆತ್ತಿಲ ಜಾಲು ನಾಗೇಶ್ ಭಟ್, ಆಡಳಿತ ಮೊಕ್ತೆÃಸರ ಮಾಧವ ಭಟ್, ಶ್ರಿÃಕಾಂತ್ ಭಟ್ ವಾಟೆತ್ತಿಲ, ಸುಬ್ರಹ್ಮಣ್ಯ ಭಟ್ ಸಜಂಕಿಲ, ಶಂಕರ ಮಾಸ್ತರ್ ಚೇರಾಲು ಮೊದಲಾದವರು ಉಪಸ್ಥಿತರಿದ್ದರು.


