ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರದ ಶ್ರೀ ಮಹಾವಿಷ್ಣು ಭಜನಾ ಸಂಘದ 29ನೇ ವಾರ್ಷಿಕೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ ಅಂಗವಾಗಿ 12 ಕಾಯಿಯ ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಭಜನಾ ಸಂಕೀರ್ತನೆ ಮಂದಿರದ ತಂತ್ರಿವರ್ಯರಾದ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಭಾನುವಾರ ಜರಗಿತು.
ಊರ ಹಾಗೂ ಪರವೂರಿನ ಅನೇಕ ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.ಮಧ್ಯಾಹ್ನ ಮಹಾಪೂಜೆಯ ಬಳಿಕ ಶ್ರೀಸೂರ್ಯನಾರಾಯಣ ಭಜನಾ ಸಂಘ ನಾರಾವಿ ಬೆಳ್ತಂಗಡಿ ಇದರ ಸದಸ್ಯರು ಭಜನಾ ಸಂಕೀರ್ತನೆ ನಡೆಸಿಕೊಟ್ಟರು. ಮಹಾ ಅನ್ನ ಸಂತರ್ಪಣೆ ನಡೆಯಿತು. ಶ್ರೀಗಣೇಶ ಮಹಿಳಾ ಭಜನಾ ಮಂಡಳಿ ಬೆದ್ರಂಪಳ್ಳ ಅವರು ಅಪರಾಹ್ನ 3.30ರಿಂದ ಭಜನಾ ಸಂಕೀರ್ತನೆ ನಡೆಸಿಕೊಟ್ಟರು.ಸಂಜೆ ಸೂರ್ಯಾಸ್ತಮಾನದಿಂದ ಸೋಮವಾರ ಸೂರ್ಯೋದಯದವರೆಗೆ ಅರ್ಧ ಏಕಾಹ ಭಜನೆ ವಿವಿಧ ಭಜನಾ ತಂಡಗಳಿಂದ ನಡೆಯಿತು. ಊರ ಪರವೂರಿನ ಭಗವದ್ಭಕ್ತರು ಪಾಲ್ಗೊಂಡರು.
ಶನಿವಾರ ಉಳಿಯತ್ತಡ್ಕದ ಶ್ರೀಗುರುಕೃಪ ಭಜನಾ ಸಂಘ ಉಳಿಯತ್ತಡ್ಕ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.



