ಪೆರ್ಲ: ಪ್ರಾಚೀನ ವಿಟ್ಲ ಸೀಮಾ ವ್ಯಾಪ್ತಿಗೊಳಪಡುವ, ಪ್ರಸ್ತುತ ಕಾಸರಗೋಡು ಜಿಲ್ಲೆಯಲ್ಲಿರುವ ಕೆಲವೇ ಕೆಲವು ಉಳ್ಳಾಲ್ತಿ ಕ್ಷೇತ್ರಗಳಲ್ಲೊಂದಾದ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೆಯು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಭಾನುವಾರದಿಂದ ಫೆ.5ರ ವರೆಗೆ ವಿವಿಧ ವ್ಯದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಭಾನುವಾರ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿತು.
ಭಾನುವಾರ ಬೆಳಿಗ್ಗೆ 10.30ಕ್ಕೆ ಪೆರ್ಲ ಸತ್ಯನಾರಾಯಣ ಮಂದಿರ ಪರಿಸರದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಮವಸ್ತ್ರಧಾರಿ ಮಾತೆಯರು, ಊರ&ಪರವೂರ ಭಕ್ತರ ತಂಡದೊಂದಿಗೆ ಮುತ್ತುಕೊಡೆ, ಕೊಂಬು ವಾದ್ಯಗಳೊಂದಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿತು.
ಬಳಿಕ ಉಗ್ರಾಣ ಮುಹೂರ್ತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಸಂಜೆ 5.30ಕ್ಕೆ ಉದ್ಯಮಿ ರಾಮಪ್ರಸಾದ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಉಪನ್ಯಾಸ ನೀಡಿದರು. ಬೆಂಗಳೂರು ಟಯೋಟ ಸಂಸ್ಥೆ ಪ್ರಧಾನ ಪ್ರಬಂಧಕ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ನರಸಿಂಹ ಭಟ್ ದಂಬೆಮೂಲೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾತ್ರಿ 8ರಿಂದ ನಾಟ್ಯ ನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆ ಕೀರ್ತಿ ಮತ್ತು ಬಳಗದ 'ನೃತ್ಯಸಮನ್ವಿತಂ' ನಡೆಯಿತು.
ಇಂದಿನ(ಸೋಮವಾರ) ಕಾರ್ಯಕ್ರಮಗಳು:
ಜ.28ರಂದು ಬೆಳಗ್ಗೆ 6ರಿಂದ ಗಣಪತಿ ಹವನ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, 8ರಿಂದ ಸಹಸ್ರಮೋದಕ ಅಥರ್ವಶೀರ್ಷ ಗಣಯಾಗ, 10ರಿಂದ ಶಕುಂತಳಾ ಎಸ್.ಎನ್.ಭಟ್ ಅವರಿಂದ ಸಂಗೀತ, 11ರಿಂದ ಪ್ರಜ್ವಲ್ ಎಸ್.ಕೆ., ಪ್ರಮೋದ್ ರಾಜ್ ಎಸ್.ಕೆ. ನಾದ ಸರಸ್ವತಿ ಸಂಗೀತ ನಿಲಯ ಪೆರ್ಲ ಇವರಿಂದ ಭಜನ್ ವೈವಿಧ್ಯ, ಮಧ್ಯಾಹ್ನ 12.30ಕ್ಕೆ ಅಂಕುರ ಪೂಜೆ, ಮಹಾಪೂಜೆ, 1ರಿಂದ ವಾದ್ಯವೃಂದ ಬದಿಯಡ್ಕ ಅವರಿಂದ ಪದ್ಮಶ್ರೀ ಮ್ಯೂಸಿಕಲ್ ವೇವ್ಸ್, 3ರಿಂದ ಬೆಂದ್ರೋಡು ಗೋವಿಂದ ಭಟ್ ಬಳಗದಿಂದ ಯಕ್ಷಗಾನ ಗಾನ ವೈಭವ, ಸಂಜೆ 5.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಮಂಗಳೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡುವರು.ಉದ್ಯಮಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿದ್ದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಉಡುಪಿ ಧಾರ್ಮಿಕ ಭಾಷಣ ಮಾಡಲಿದ್ದಾರೆ.ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.ರಾತ್ರಿ 8ರಿಂದ ಮಂಗಳಾ ಮ್ಯಾಜಿಕ್ ವಲ್ರ್ಡ್ ರಾಜೇಶ್ ಮಳಿ, ಮಳಿ ಸಹೋದರಿಯರ ಅಪೂರ್ವ ಜಾದೂ ಪ್ರದರ್ಶನ, 9ರಿಂದ ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

