ಕಾಸರಗೋಡು: ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸುವವರೇ ನಿಜವಾದ ದೇಶಭಕ್ತರು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಗಣರಾಜ್ಯೋತ್ಸವ ಅಂಗವಾಗಿ ಶನಿವಾರ ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿ, ಪಥಸಂಚಲನದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮೊಂದಿಗೆ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ಆಡಳಿತದಲ್ಲಿ ಪರಾಜಯಗೊಂಡಿದೆ. ಆದರೆ ಭಾರತ ಪ್ರಜಾಪ್ರಭುತ್ವ ನೀತಿಯ ಸದ್ಬಳಕೆ ಮತ್ತು ಸಂವಿಧಾನ ಮೌಲ್ಯಗಳ ಅನುಷ್ಠಾನದಿಂದ ಸಫಲವಾಗಿದೆ ಎಂದವರು ಹೇಳಿದರು.
ಸಂವಿಧಾನದ ಮೌಲ್ಯಗಳನ್ನು ದುರ್ಬಲಗೊಳಿಸಲು ಯತ್ನ ನಡೆಸಲು ಕೆಲವು ಶಕ್ತಿಗಳು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು ಅದನ್ನು ವಿರೋಧಿಸಿ, ಯಾವುದೇ ಬೆಲೆತೆತ್ತು ಮೌಲ್ಯಗಳನ್ನು ಸಂರಕ್ಷಿಸಲು ನಾವು ಕಟಿಬದ್ಧರು. ದೇಶಪ್ರೇಮಿಗಳಾದ ಯುವಜನತೆ ಮತ್ತು ವಿದ್ಯಾರ್ಥಿಗಳು ಇದರ ನೇತೃತ್ವ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಸುಕ್ಷೇಮ ರಾಷ್ಟ್ರ ನಿರ್ಮಾಣದ ಕನಸು ನನಸು ಮಾಡುವಲ್ಲಿ ನಮ್ಮ ಯತ್ನದ ಪ್ರಯಾಣವನ್ನು ತ್ವರಿತಗೊಳಿಸಬೇಕಾದ ಅಗತ್ಯವಿದೆ. ವಿಭಜನೆ ಮತ್ತು ಅವೈಜ್ಞಾನಿಕ ಕುರುಡುತನವನ್ನು ಬದಲಿಸಿ ಪ್ರಗತಿಪರ ಚಿಂತನೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗಿರುವ ಇಂಧನವನ್ನಾಗಿ ಬೆಳಕಿನತ್ತ ಸಾಗಬೇಕಾದ ಅಗತ್ಯವಿದೆ ಎಂದವರು ಹೇಳಿದರು.
ರಾಜ್ಯ ಅನುಭವಿಸಿದ ಅತೀ ಭೀಕರ ಜಲ ದುರಂತದ ವೇಳೆ ಕೋಮು ಭಾವನೆಗೂ ಮೀರಿ ಪ್ರಕಟಗೊಂಡ ಮಾನವೀಯತೆ ಸಾಮಾಜಿಕ ಬದ್ಧತೆಯ ಸಂಕೇತವಾಗಿದೆ. ತಂತ್ರಜ್ಞಾನವನ್ನು ನಾಡಿನ ಪ್ರಗತಿಗಾಗಿ ಬಳಸಿದ ಯುವಜನತೆ ದೇಶಕ್ಕೆ ದೊಡ್ಡ ನಿರೀಕ್ಷೆಯನ್ನು ಮೂಡಿಸಿದೆ ಎಂದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ಅವರೂ ಪಥಸಂಚಲನದ ವಂದನೆ ಸ್ವೀಕರಿಸಿದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞÂರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯ್, ಕಾಸರಗೋಡು ಆರ್.ಡಿ.ಒ. ಅಬ್ದು ಸಮದ್, ಸಹಾಯಕ ಜಿಲ್ಲಾಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಪಥ ಸಂಚಲನ : ಪಥಸಂಚಲನದಲ್ಲಿ ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ನೇತೃತ್ವ ವಹಿಸಿದರು. ಜಿಲ್ಲಾ ಹೆಡ್ ಕ್ವಾಟರ್ಸ್‍ನ ರಿಸರ್ವ್ ಇನ್ಸ್‍ಪೆಕ್ಟರ್ ಎಂ.ಕುಂಞÂಕೃಷ್ಣನ್ ಸೆಕೆಂಡ್ ಕಮಾಂಡರ್ ಆಗಿದ್ದರು. ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್, ಸಶಸ್ತ್ರ ದಳ, ಅಬಕಾರಿ, ಕೆ.ಪಿ.ನಾಲ್ಕನೇ ಬೆಟಾಲಿಯನ್, ಬ್ಯಾಂಡ್ ತಂಡ, ವಿವಿಧ ಶಿಕ್ಷಣಾಲಯಗಳ ಎನ್‍ಸಿಸಿ ಸೀನಿಯರ್, ಎನ್‍ಸಿಸಿ ಜ್ಯೂನಿಯರ್, ವಿವಿಧ ಶಿಕ್ಷಣಾಲಯಗಳ ಸ್ಕೌಟ್ ಮತ್ತು ಗೈಡ್ಸ್, ವಿದ್ಯಾರ್ಥಿ ಪೆÇಲೀಸ್, ಬ್ಯಾಂಡ್ ತಂಡ, ನೌಕಾ ಪಡೆ, ರೆಡ್ ಕ್ರಾಸ್ ಮೊದಲಾದ ತಂಡಗಳು ಭಾಗವಹಿಸಿದ್ದುವು.
ಬಹುಮಾನ ಪಡೆದ ತಂಡಗಳು : ಪೆÇಲೀಸ್ ವಿಭಾಗದಲ್ಲಿ ಕಾಸರಗೋಡು ಜಿಲ್ಲಾ ಹೆಡ್ ಕ್ವಾಟರ್ಸ್, ಎನ್‍ಸಿಸಿ ಸೀನಿಯರ್ ವಿಭಾಗದಲ್ಲಿ ಕಾಸರಗೋಡು ಸರಕಾರಿ ಕಾಲೇಜು, ಎನ್‍ಸಿಸಿ ಜ್ಯೂನಿಯರ್ ವಿಭಾಗದಲ್ಲಿ ನೀಲೇಶ್ವರ ರಾಜಾಸ್ ಪ್ರೌಢಶಾಲೆ, ವಿದ್ಯಾರ್ಥಿ ಪೆÇಲೀಸ್ ವಿಭಾಗದಲ್ಲಿ ತ್ರಿಕ್ಕರಿಪುರ ವಿ.ಪಿ.ಪಿ.ಎಂ.ಕೆ.ಪಿ.ಎಸ್.ಜಿ.ಎಚ್.ಎಸ್.ಎಸ್, ರೆಡ್‍ಕ್ರಾಸ್ ವಿಭಾಗದಲ್ಲಿ ಪಾಕಂ ಜಿ.ಎಚ್.ಎಸ್.ಎಸ್, ಸ್ಕೌಟ್ ವಿಭಾಗದಲ್ಲಿ ಪೆರಿಯ ಜವಾಹರ್ ನವೋದಯ, ಗೈಡ್ಸ್ ವಿಭಾಗದಲ್ಲಿ ಕೇಂದ್ರೀಯ ವಿದ್ಯಾಲಯ-2 ಬಹುಮಾನ ಪಡೆದರು. ಸಚಿವ ಇ.ಚಂದ್ರಶೇಖರನ್ ಬಹುಮಾನ ವಿತರಿಸಿದರು.
ಸಾಂಸ್ಕøತಿಕ ಕಾರ್ಯಕ್ರಮಗಳು : ಸಮಾರಂಭದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಪೆರಿಯ ಜವಾಹರ್ ನವೋದಯ, ಕಾಸರಗೋಡು ಸರಕಾರಿ ಕಾಲೇಜು, ಪರವನಡ್ಕ ಜಿಎಂಆರ್‍ಎಚ್‍ಎಸ್, ಚೈತನ್ಯ ವಿದ್ಯಾಲಯ, ಪಟ್ಲ ಜಿಎಚ್‍ಎಸ್‍ಎಸ್, ಪರಕ್ಕಳಾಯಿ ಪಿಎನ್‍ಪಿಎಸ್, ಆಯುರ್ವೇದ ವೈದ್ಯಕೀಯ ಕಾಲೇಜು ಸಂಸ್ಥೆಗಳ ವಿದ್ಯಾರ್ಥಿಗಳ ತಂಡ ವಿವಿಧ ಕಲಾ ಕಾರ್ಯಕ್ರಮದ ಪ್ರಸ್ತುತಿ ನಡೆಸಿದರು.

