ಉಪ್ಪಳ: ಕೇರಳ ರಾಜ್ಯದಲ್ಲೇ ಅತ್ಯಧಿಕ ಮಂದಿ ಉರ್ದು ಬಾಷೆಯನ್ನಾಡುವ ಹನಫೀ ಸಮುದಾಯದ ಮುಸಲ್ಮಾನರು ಅತೀ ಹೆಚ್ಚು ಇರುವ ಉಪ್ಪಳದ ಜನತೆಯ ಬಹಳ ಕಾಲದ ನಿರೀಕ್ಷೆಯಾಗಿದ್ದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಬೆಳವಣಿಗೆಯ ಚಿಗುರೊಡೆದಿದೆ.
ಉಪ್ಪಳದ ಪರಿಸರದ ನಯಾಬಜಾರ್, ಬ್ಯಾಂಬೇ ಬಜಾರ್, ಮಜಾಲ್, ಬಪ್ಪಾಯಿತೊಟ್ಟಿ, ಕುರ್ಚಿಪಳ್ಳ, ಅಂಬಾರ್, ಮಣಿಮುಂಡ ಸಹಿತ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ಉರ್ದು ಬಾಷೆಗಳನ್ನಾಡುವ ಅಹ್ಲೇ ಸುನ್ನತ್ ಹನಫೀ ಸಮುದಾಯಕೊಳಪಟ್ಟ ಸುಮಾರು 5000 ಮಂದಿ ಈ ಪ್ರದೇಶಗಳಲ್ಲಿ ವಾಸಿಸುತಿದ್ದಾರೆ.
ಇವರೆಲ್ಲರ ಕೇಂದ್ರ ಜಮಾಹತ್ ಆಗಿರುವ ಅಹ್ಲೇ ಸುನ್ನತ್ ಹನಫೀ ಜಮಾಹತ್ ಉಪ್ಪಳ ಇದರ ಆಡಳಿತ ಮಂಡಳಿ ಇದೀಗ ಸಮುದಾಯಕ್ಕೆ ಉತ್ತಮವಾದ ವಿದ್ಯಾರ್ಜಣೆಯನ್ನು ನೀಡುವ ಉದ್ದೆಶದಿಂದ ವಿದ್ಯಾ ಸಂಸ್ಥೆಯನ್ನು ಆರಂಭಿಸಲು ತೀರ್ಮಾನಿಸಿ ಆ ಪ್ರಯುಕ್ತ ಇದರ ಕಚೇರಿ ಉದ್ಘಾಟನೆ ಉಪ್ಪಳ ಹನಫೀ ಜಮಾಹತ್ ಆವರಣದಲ್ಲಿ ಹಾಜಿ ಬಿ ಎಸ್ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಲಾಂಛನವನ್ನು ಪ್ರಕಾಶನಗೈದು ಉದ್ಘಾಟಿಸಿದರು.
ಹಾಜಿ ಬಿ ಎಸ್ ಅಬ್ದುಲ್ ರಹ್ಮಾನ್ ರವರು ಕಚೇರಿಯ ಉದ್ಘಾಟಿಸಿದರು. ವಿದ್ಯಾಸಂಸ್ಥೆಗೆ ಸೇರಿಸಿಕೊಳ್ಳುವ ಮೊದಲ ದಾಖಲಾತಿ ಅರ್ಜಿಯನ್ನು ಜಮಾಹತ್ ಅಧ್ಯಕ್ಷ ಬಿ ಎಸ್ ಬಶೀರ್ ಆಹ್ಮದ್ ವಿತರಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಝಬೇರ್ ಅಂಬಾರ್, ಹಾಜಿ ಹುಸೈನ್ ಕೆ ಎಸ್, ಸಯ್ಯದ್ ಮೊಹಮ್ಮದ್ ಹಾಜಿ, ಮೊಹಮ್ಮದ್ ಹುಸೈನ್, ಸೇಖ್ ಆದಂ ಸಾಹೇಬ್, ಅಶ್ರಫ್ ರಂಜಾನ್, ಮಕ್ಬೂಲ್ ಆಹ್ಮದ್, ಶೇಖ್ ಇಸ್ಮಾಯಿಲ್ ಮುನ್ನ, ನೂರುದ್ದೀನ್ ಅಡ್ಕ, ನಾಸಿರ್ ಖಾನ್ ಅಂಬಾರ್, ಅಬ್ದುಲ್ ಅಝೀಝ್, ಫೈಝಲ್ ರಹ್ಮಾನ್, ಮೊಹಮ್ಮದ್ ಆಸಿಫ್, ಅಬೂಬಕ್ಕರ್ ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಅಝೀಂ ಮಣಿಮುಂಡ ಸ್ವಾಗತಿಸಿ, ಸಯ್ಯದ್ ಮೊಹಮ್ಮದ್ ರಫೀಕ್ ವಂದಿಸಿದರು.

