ಮಂಜೇಶ್ವರ: ಕಣ್ವತೀರ್ಥ ಶ್ರೀಬ್ರಹ್ಮೇಶ್ವರ ದೇವಾಲಯದ ಸುತ್ತುಪೌಳಿ ಮಹಾ ಕಲಶಾಭಿಷೇಕ ಸಮಾರಂಭವು ಶುಕ್ರವಾರ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿವರ್ಯ ಶ್ರಿವಿಶ್ವಪ್ರಸನ್ನ ಶ್ರೀಗಳ ಉಪಸ್ಥಿತಿಯಲ್ಲಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಗುರುವಾರ ವಿವಿಧ ವ್ಯದಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಿಗ್ಗೆ ಗಣಪತಿ ಹವನ, ಆಶ್ಲೇಷ ಬಲಿ, ವಿವಿಧ ಸಂಘಸಮಸ್ಥೆಗಳಿಂದ ಭಜನಾ ಸಮಕೀರ್ತನೆಗಳು ನೆರವೇರಿತು. ಸಂಜೆ ವಾಸ್ತುಪೂಜೆ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ಪ್ರಾಕಾರ ಬಲಿ ಮೊದಲಾದ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳ ಉಪಸ್ಥಿತಿಯಲ್ಲಿ ಮಿಥುನ ನಾವಡ ಉದ್ಘಾಟಿಸಿದರು. ಡಾ.ಜಯಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಟಿ.ಎ.ಎನ್.ಖಂಡಿಗೆ, ಚಂದ್ರಹಾಸ ಪಂಡಿತ್, ರವೀಂದ್ರನಾಥ ಶೆಟ್ಟಿ ದೊಡ್ಡಮನೆ, ಶಶಿಕಲಾ, ಭಗವಾನ್‍ದಾಸ್ ಮೊದಲಾದವರು ಉಪಸ್ಥಿತರಿದ್ದು ಶುಬಹಾರೈಸಿದರು.ತಂತ್ರಿವರ್ಯ ಗೋಪಾಲಕೃಷ್ಣ, ಅರ್ಚಕ ರಮೇಶ್ ಉಪಾಧ್ಯಾಯ, ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದರು.


