ತಿರುವನಂತಪುರ: ಶಬರಿಮಲೆ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜೈಲಿನಲ್ಲಿ ಕಳೆಯುತ್ತಿರುವ ಸಹಸ್ರಾರು ಅಯ್ಯಪ್ಪ ಭಕ್ತರ ವಿಮೋಚನೆಗಾಗಿ ಶಬರಿಮಲೆ ಕ್ರೀಯಾ ಸಮಿತಿ ಮುಂದಿರಿಸಿದ `ಶತಂ ಸಮರ್ಪಯಾಮಿ' ಅಭಿಯಾನಕ್ಕೆ ಬೆಂಬಲವಾಗಿ ಅಯ್ಯಪ್ಪ ಭಕ್ತ, ಚಲನಚಿತ್ರ ನಟ ಸಂತೋಷ್ ಪಂಡಿತ್ 51 ಸಾವಿರ ರೂ. (ಐವತ್ತೊಂದು ಸಾವಿರ) ನೀಡಿದ ದಾಖಲೆಯನ್ನು ತನ್ನ ಫೇಸ್‍ಬುಕ್ ಪುಟದಲ್ಲಿ ಹರಿಯಬಿಟ್ಟಿದ್ದು ಅಯ್ಯಪ್ಪ ಭಕ್ತರಲ್ಲಿ ಸಂಚಲನವನ್ನು ಉಂಟುಮಾಡಿದೆ. ಎಲ್ಲೆಡೆ ವಾಟ್ಸಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ನಾನು ಶಬರಿಮಲೆ ಕ್ರೀಯಾಸಮಿತಿಯ ಚಾಲೆಂಜ್ ಅನ್ನು ಸ್ವೀಕರಿಸಿ 51 ಸಾವಿರ ರೂ.ಗಳನ್ನು ಅವರ ಖಾತೆ ವರ್ಗಾಯಿಸಿದ ವಿವರವನ್ನು ಸಂತೋಷಪೂರ್ವಕವಾಗಿ ತಿಳಿಯಪಡಿಸುತ್ತಿದ್ದೇನೆ. ಅವರು 100 ರೂಪಾಯಿ ಮಾತ್ರ ಕೇಳಿಕೊಂಡಿದ್ದರು. ಎಲ್ಲರಿಗೂ ಒಳಿತನ್ನೇ ಬಯಸುತ್ತೇನೆ ಎಂದು ಪಂಡಿತ್ ತನ್ನ ಫೇಸ್ ಬುಕ್ ಪೋಸ್ಟ್‍ನಲ್ಲಿ ಮಲಯಾಳಂ ಭಾಷೆಯಲ್ಲಿ ತಿಳಿಸಿದ್ದಾರೆ.
ಶಬರಿಮಲೆ ಆಚಾರಸಂರಕ್ಷಣೆಗಾಗಿ 10 ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಇಂದು ಜೈಲಿನಲ್ಲಿ ಕಳೆಯುದ್ದು, ಅನೇಕರು ನಿರೀಕ್ಷಣಾ ಜಾಮೀನಿಗಾಗಿ ಅಲೆದಾಡುತ್ತಿದ್ದಾರೆ.
ವಾಟ್ಸಪ್‍ನಲ್ಲಿ ಹರಿದಾಡುತ್ತಿರುವ ಸಂದೇಶ:
ಶಬರಿಮಲೆ ಕರ್ಮ ಸಮಿತಿಯ ಆಶ್ರಯದಲ್ಲಿ "ಶತಂ ಸಮರ್ಪಯಾಮಿ" ಎಂಬ ಯೋಜನೆ ಘೋಷಣೆಗೊಂಡಿದೆ. ಹಿಂದು ಐಕ್ಯವೇದಿ ರಾಜ್ಯ ಅಧ್ಯಕ್ಷೆ ಶಶಿಕಲ ಟೀಚರ್ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಶಬರಿಮಲೆ ಆಚಾರ ಸಂರಕ್ಷಣೆಗಾಗಿ ನಡೆದ ಹೋರಾಟದಲ್ಲಿ ಸಾವಿರಾರು ಮಂದಿಯ ವಿರುದ್ದ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೆÇಲೀಸ್ ಜಾಮೀನು ರಹಿತ ಪ್ರಕರಣ ದಾಖಲಿಸಿದೆ. ಸಾವಿರಾರು ಮಂದಿ ಇದೀಗ ರಿಮಾಂಡ್ ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನು ಹಲವರು ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ.
ಜೈಲು ಸೇರಿದವರನ್ನು ಬಿಡುಗಡೆ ಮಾಡಬೇಕಾಗಿದೆ. ಅವರ ಕುಟುಂಬವನ್ನು ನೋಡಿಕೊಳ್ಳಬೇಕಾಗಿದೆ. ಅವರ ಮಕ್ಕಳ ಶಾಲೆ, ಮನೆಯಲ್ಲಿರುವ ರೋಗಿಗಳಿಗೆ ಔಷಧ, ದಿನ ನಿತ್ಯದ ಖರ್ಚು ಸಹಿತ ಲಕ್ಷಾಂತರ ರೂ ಖರ್ಚು ಬೇಕಾಗಿದೆ.
ನಾವೆಲ್ಲ ಶಬರಿಮಲೆಯ ಆಚಾರ ಸಂರಕ್ಷಣೆಗಾಗಿ ವಿವಿದ ರೀತಿಯಲ್ಲಿ ಹೋರಾಟ ನಡೆಸಿದವರು. ಸಾಮಾಜಿಕ ಮಾಧ್ಯಮಗಳ ಮೂಲಕವೂ ಇದಕ್ಕಾಗಿ ಬಾರೀ ಪ್ರಚಾರ ಮಾಡಿದ್ದೇವೆ. ಆದುದರಿಂದ ಹೋರಾಟ ನಡೆಸಿದವರ, ರಿಮಾಂಡ್ ಆದವರ, ಅವರ ಮನೆಯವರ ಸ್ಥಿತಿ ನಮಗೆಲ್ಲ ಚೆನ್ನಾಗಿ ಗೊತ್ತು.
ಪ್ರತಿಯೋರ್ವರೂ 100 ರೂ.ಸಮರ್ಪಿಸುವ ಚಳವಳಿ "ಶತಂ ಸಮರ್ಪಯಾಮಿ" ಯೋಜನೆಯಾಗಿದೆ. 100 ರೂ. ನೀಡಿ ನಮ್ಮ ಸಹೋದರರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಹಕರಿಸಬೇಕಾಗಿ ವಿನಂತಿಸುತ್ತಾ ಇದುವೇ ನಿಜವಾದ ಆಚಾರ ಸಂರಕ್ಷಣೆ ಎಂದು ತಿಳಿಸಲು ಇಚ್ಚಿಸುತ್ತೇವೆ.
- ಶಬರಿಮಲೆ ಕರ್ಮ ಸಮಿತಿಗೆ ಬೇಕಾಗಿ ಓರ್ವ ಭಕ್ತ.
(ವಾಟ್ಸ್‍ಆಫ್ ಮಲೆಯಾಳ ಅನುವಾದ)



