ನೈಪುಣ್ಯ ಅಭಿವೃದ್ಧಿಗೆ ಸಿದ್ಧಗೊಳ್ಳಿವೆ 17 ಸಮುದಾಯ ಸಾಮಥ್ರ್ಯ ಉದ್ಯಾನಗಳು: ಬೃಹತ್ ಸಂಸ್ಥೆಗಳ ನೇತೃತ್ವ
0
ಫೆಬ್ರವರಿ 12, 2019
ಕಾಸರಗೋಡು: ರಾಜ್ಯದ ಯುವಜನತೆಗೆ ನೈಪುಣ್ಯ ತರಬೇತಿ ನೀಡಿ ಉದ್ಯೋಗ ಖಚಿತಪಡಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 17 ಸಮುದಾಯ ಸಾಮಥ್ರ್ಯ ಉದ್ಯಾನಗಳು(ಕಮ್ಯೂನಿಟಿ ಸ್ಕಿಲ್ ಪಾರ್ಕ್) ಸಿದ್ಧಗೊಳ್ಳುತ್ತಿವೆ.
ಏಪ್ರಿಲ್ ತಿಂಗಳಲ್ಲಿ 9 ಪಾಕ್ರ್ಗಳು ಪೂರ್ಣರೂಪದಲ್ಲಿ ಚಟುವಟಿಕೆ ಆರಂಭಿಸಲಿವೆ. ಇವುಗಳಲ್ಲಿ ಮೊದಲ ಉದ್ಯಾನವನ್ನು ಕೊಲ್ಲಂ ಕುಳಕ್ಕಡದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸಿದ್ದಾರೆ.
ಪಿ.ಪಿ.ಪಿ.ಮಾದರಿಯಲ್ಲಿ ಅಸಾಪ್ ಸಿದ್ಧಗೊಳಿಸುವ ಸಾಮಥ್ರ್ಯ ಉದ್ಯಾನಗಳಲ್ಲಿ ಭಾರತದ ಮತ್ತು ವಿದೇಶದ ಬೃಹತ್ ಸಂಸ್ಥೆಗಳು ಸರಕಾರದೊಂದಿಗೆ ಕೈಜೋಡಿಸಿವೆ. ವಿವಿಧ ಕಂಪನಿಗಳು, ಸಂಸ್ಥೆಗಳು ಸೇರಿರುವ ಕಂಸೋಶರ್ಂ ತರಬೇತಿಗೆ ನೇತೃತ್ವ ವಹಿಸುತ್ತಿವೆ. ಕುಳಕಡದಲ್ಲಿ ಆಂಧ್ರಪ್ರದೇಶದ ಸಿನ್ ಕೋಸರ್ ಎಂಬ ಸಂಸ್ಥೆ ಆಪರೇಟಿಂಗ್ ಪಾಲುದಾರನಾಗಿದೆ.
ಸಿಂಗಾಪುರದ 8 ಕಂಪನಿಗಳು ಈ ಕನ್ಸೋಶರ್ಂ ನಲ್ಲಿದೆ. ಕಳಮಶ್ಶೇರಿಯಲ್ಲಿ ಎ.ಬಿ.ಎಂ.,ಮಲಪ್ಪುರಂ ಪಾಂಡಿಕಾಡ್ ಅಪೋಲೋ ಆಸ್ಪತ್ರೆ ಸಮೂಹ ಸಂಸ್ಥೆಯ ತರಬೇತಿ ವಿಭಾಗವಾಗಿರುವ ಮೆಡ್ ಸ್ಕಿಲ್ಸ್ ಮತ್ತು ಮಾನಂತವಾಡಿಯಲ್ಲಿ ಭಾರತದ ಇಲೆಕ್ಟ್ರಾನಿಕ್ಸ್ ಉತ್ಪಾದನೆ ವಲಯದಲ್ಲಿ ರಂಗದಲ್ಲಿಮೂರನೇ ಸ್ಥಾನದಲ್ಲಿರುವ ಕೈನ್ಸ್, ಲಕಿಡಿಯಲ್ಲಿಕೇಂದ್ರ ಸಾರ್ವಜನಿಕ ವಲಯ ಸಂಸ್ಥೆಯಾಗಿರುವ ಸೆಂಟರ್ ಫಾರ್ ಬಯೋಪೊಲಿಮರ್ ಸಯನ್ಸ್ ಆಂಡ್ ಟೆಕ್ನಾಲಜಿ , ಕುನ್ನಮತಾನಂ ನಲ್ಲಿ ಸಹಸ್ರ ಇಲೆಕ್ಟ್ರಾನಿಕ್ಸ್ , ಪಾಲಕ್ಕಾಡ್ ಚಾತನ್ನೂರಿನಲ್ಲಿ ಇಸಾಫ್ ಬ್ಯಾಂಕ್ , ಕಾಸರಗೋಡು ಸಿ.ಎಂ.ಸಿ. ಗ್ರೂಪ್ ನ ಅಂಗವಾಗಿರುವ ಕೊಯಮತ್ತೂರು ಮರೈನ್ ಕಾಲೇಜು , ಪೆರುಂಬಾವೂರಿನ ಮಾಗ್ರ್ರಿಗೋರಿಯೋಸ್ ಎಜ್ಯುಕೇಶನಲ್ ಸೊಸೈಟಿಗಳು ಆಪರೇಟಿಂಗ್ ಪಾಟ್ರ್ನರ್ ಗಳಾಗಿವೆ.
ಸಂಸ್ಥೆಗಳಿಗೆ ಸಂಯುಕ್ತ ಉದ್ಯೋಗಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಿ ನೌಕರಿ ನೀಡುವ ನಿಟ್ಟಿನಲ್ಲಿ ಸ್ಕಿಲ್ ಪಾಕ್ರ್ಗಳು ಸಹಕಾರಿಯಾಗಿವೆ. ಆಪರೇಟಿಂಗ್ ಪಾಟ್ರ್ನರ್ ಗಳಿಗೆ ಈ ನಿಟ್ಟಿನಲ್ಲಿ ಅರ್ಜಿ ಕೋರಬಹುದಾಗಿದೆ. ಇದೇ ವೇಳೆ ಶೇ 30 ಸೀಟುಗಳು ಸರಕಾರಿ ಆದೇಶ ಪ್ರಕಾರದ ಅರ್ಜಿದಾರರಿಗೆ ನೀಡಬೇಕು ಎಂಬ ಕರಾರೂ ಇದೆ. ಶಿಕ್ಷಣ ಮೀಸಲಾತಿ ವಿಭಾಗದಲ್ಲಿ ಸೇರಿರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 40 ರಿಯಾಯಿತಿಯೂ ಲಭಿಸಲಿದೆ. 3 ತಿಂಗಳಿಂದ 6 ತಿಂಗಳ ವರೆಗೆ ತರಬೇತಿಯ ಕಾಲಾವಧಿ ಇರುವುದು. ರೋಬೋಟಿಕ್ಸ್, ಬಿಗ್ ಡಾಟಾ ಅನಾಲಿಸಿಸ್, ಅಕೌಂಟಿಂಗ್, ಸಿ.ಎನ್.ಸಿ.ಆಪರೇಟರ್ ,ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್ ಡಿಸೈನರ್, ಇಲೆಕ್ಟ್ರಿಕಲ್ ಎಕ್ವಿಟ್ ಮೆಂಟ್ ಡಿಸೈನ್ ಇತ್ಯಾದಿ ತರಬೇತಿಗಳು ಪ್ರಧಾನವಾಗಿ ಇಲ್ಲಿ ನಡೆಯಲಿವೆ. 10 ಸಾವಿರ ರೂ.ನಿಂದ 60 ಸಾವಿರ ರೂ. ವರೆಗೆ ಶುಲ್ಕ ಇರುವ ತರಬೇತಿಗಳಿವೆ. ದಿನವೊಂದಕ್ಕೆ ಅನೇಕ ಬ್ಯಾಚ್ ಗಳಲ್ಲಿ ತರಬೇತಿ ನಡೆಯಲಿದೆ. 14 ತಾಸು ವರೆಗೆ ಪ್ರತಿದಿನ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಪಾಕ್ರ್ಗಳು ಸಜ್ಜುಗೊಂಡಿವೆ. ಇದಲ್ಲದೆ ಅಸಾಪ್ ನೇರವಾಗಿ ತಲಾ4 ತಾಸುಗಳ ತರಬೇತಿ ನೀಡಲಿದೆ.

