ಜಿಲ್ಲಾ ಎಂಪ್ಲಾಯ್ ಮೆಂಟ್ ಎಕ್ಸ್ ಚೇಂಜ್ ನಲ್ಲಿ 14ರಂದು ಸಂದರ್ಶನ
0
ಫೆಬ್ರವರಿ 12, 2019
ಕಾಸರಗೋಡು: ಕಾಸರಗೋಡು ಜಿಲ್ಲಾ ಎಂಪ್ಲಾಯ್ ಮೆಂಟ್ ಎಕ್ಸ್ ಚೇಂಜ್ ವ್ಯಾಪ್ತಿಯ ಎಂಪ್ಲಾಯಿಬಿಲಿಟಿ ಸೆಂಟರ್ ನಲ್ಲಿ ಫೆ.14ರಂದು ಬೆಳಗ್ಗೆ 11 ಗಂಟೆಗೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಸಂದರ್ಶನ ನಡೆಯಲಿದೆ. ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್, ಸ್ಟೋರ್ ಮೆನೇಜರ್, ಗ್ರಾಫಿಕ್ ಡಿಸೈನರ್,ಪ್ರೊಮೋಟರ್, ಪರಮೋಟರ್, ಫ್ಯಾಷನ್ ಕನ್ಸಲ್ಟೆಂಟ್ ಎಂಬ ಹುದ್ದೆಗಳಿಗೆ ಸಂದರ್ಶನಜರುಗಲಿದೆ. ಅಕೌಂಟೆಂಟ್ ಹುದ್ದೆಗೆ ಪದವಿ, ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪ್ಲಸ್ ಟು/ಪದವಿ, ಪ್ರಮೋಟರ್, ಗ್ರಾಫಿಕ್ಸ್ ಡಿಸೈನರ್, ಸ್ಟೋರ್ ಮೆನೇಜರ್ ಹುದ್ದೆಗೆ ಪದವಿ/ಸ್ನಾತಕೋತ್ತರ ಪದವಿ, ಫ್ಯಾಷನ್ ಕನ್ಸಲ್ಟೆಂಟ್ ಹುದ್ದೆಗೆ ಪ್ಲಸ್ ಟು/ಪದವಿ ಶಿಕ್ಷಣಾರ್ಹತೆಯಾಗಿದೆ. ಪುರುಷ ಉದ್ಯೋಗಾರ್ಥಿಗಳು ಮಾತ್ರ ಹಾಜರಾದರೆ ಸಾಕು. ವೇತನ: 1200 ರೂ.ನಿಂದ 20 ಸಾವಿರ ರೂ. ಆಸಕ್ತರು ಅಂದು ಕ್ಲಪ್ತ ಸಮಯಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಟುವಟಿಕೆ ನಡೆಸುವ ಎಂಪ್ಲಾಯಿಬಿಲಿಟಿ ಸೆಂಟರ್ ಗೆ ಗುರುತುಚೀಟಿಯ ನಕಲು ಸಹಿತ, 250 ರೂ. ವನ್ ಟ್ಯಂ ನೋಂದಣಿ ಶುಲ್ಕ ಪಾವತಿಸಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ : 9207155700,04994297470 ಸಂಪರ್ಕಿಸಬಹುದು.

