ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ 24ರ ತನಕ ಅತಿರಾತ್ರ ಸೋಮಯಾಗ
0
ಫೆಬ್ರವರಿ 16, 2019
ಉಪ್ಪಳ: ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅತ್ಯಪೂರ್ವವಾದ "ವಿಶ್ವಜಿತ್ ಅತಿರಾತ್ರ ಸೋಮಯಾಗ" ಮತ್ತು ವೇದಮಾತೆ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುಗಳ ಪುನ: ಪ್ರತಿಷ್ಠಾ "ಅಷ್ಟಬಂಧ, ಸಾಂನಿಧ್ಯ ಕಲಶಾಭಿಷೇಕ"ವು ಫೆಬ್ರವರಿ 18ರಿಂದ 24ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಕಾರ್ಯಕ್ರಮದ ಅಂಗವಾಗಿ ಫೆ. 17 ರಂದು ಭಾನುವಾರ (ಇಂದು)ಬೆಳಿಗ್ಗೆ 7.30ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ತೋರಣ ಮುಹೂರ್ತ, ಆದ್ಯ ಗಣಯಾಗ.ಪೂರ್ವಾಹ್ಣ 9.00ಕ್ಕೆ ಅಗ್ನಿಹೋತ್ರಿಗಳ ಆಗಮನ- ಪೂರ್ಣಕುಂಭಸ್ವಾಗತ ಅಪರಾಹ್ಣ 3.30ಕ್ಕೆ ಹೊರೆಕಾಣಿಕೆ ಮೆರವಣಿಗೆ ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಶ್ರೀ ಕ್ಷೇತ್ರಕ್ಕೆ ಮತ್ತು ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ. ಸಾಯಂಕಾಲ 5.ಕ್ಕೆ ಉಗ್ರಾಣ ಮೂಹೂರ್ತ ನೆರವೇರಲಿದೆ.
ಫೆ. 18 ರಂದು ಸೋಮವಾರ ಬೆಳಿಗ್ಗೆ 7.30ಕ್ಕೆ ಋತ್ವಿಜರ ಆಗಮನ-ಪೂರ್ಣಕುಂಭ ಸ್ವಾಗತ. ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 8. ರಿಂದ ಗಣಯಾಗ, ಪುಣ್ಯಾಹ, ನಾಂದೀ ಸಮಾರಾಧನೆ, óಋತ್ವಿಗ್ವರಣ, ಸಪ್ತ ಶುದ್ಧಿ. ಮಧ್ಯಾಹ್ನ 12.30ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಅಪರಾಹ್ಣ 3.30ಕ್ಕೆ "ಸ್ವಕುಲಧರ್ಮಾರಾದನೆ" -ವಿವಿಧ ಸಮುದಾಯಗಳವರ ಕುಲಕಸುಬಿನ ಉತ್ಪನ್ನಗಳ ಮೆರವಣಿಗೆ ಉಪ್ಪಳ ಪೇಟೆಯಿಂದ ಶ್ರಿ ಕ್ಷೇತ್ರಕ್ಕೆ - ಸಮರ್ಪಣೆ. ಸಾಯಂಕಾಲ 5.30 ರಿಂದ ವಾಸ್ತು ಪೂಜೆ, ವಾಸ್ತು ಹೋಮ, ಯಾಗ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ. ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಸಾಯಂಕಾಲ 4. ಕ್ಕೆ ಎಲ್ಲಾ ಸಮುದಾಯಗಳ ಪ್ರಮುಖರಿಗೆ ಗೌರವಾರ್ಪಣೆ. ಸಾಯಂಕಾಲ 5.ರಿಂದ ಧರ್ಮಸಂದೇಶ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಶ್ರೀ ಬೇಳ ಪದ್ಮನಾಭ ಶರ್ಮ ಜೋತಿಷ್ಯರು ಇರಿಞ್ಞಲಕ್ಕುಡ, ವಿದ್ವಾನ್ ಸುಬ್ರಹ್ಮಣ್ಯ ಅವಧಾನಿಗಳು, ಗುಂಡಿಬೈಲು, ಉಡುಪಿ ಭಾಗವಹಿಸುವರು.
ಫೆ. 19 ರಂದು ಮಂಗಳವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5. ರಿಂದ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಗಣಯಾಗ, ದಕ್ಷಿಣಾಮೂರ್ತಿ ಯಾಗ ಬೆಳಿಗ್ಗೆ 10.ಕ್ಕೆ ಯತಿವರ್ಯರಿಗೆ-ಪೂರ್ಣಕುಂಭಸ್ವಾಗತ, 10.30ಕ್ಕೆ ಅನುಗ್ರಹ ಸಂದೇಶ ಪರಮ ಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು, ಶ್ರೀಮದ್ ಎಡನೀರು ಮಠ ಅವರಿಗೆ, ಮಧ್ಯಾಹ್ನ 12.30ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಾಯಂಕಾಲ 5. ರಿಂದ : ದುರ್ಗಾನಮಸ್ಕಾರ ಪೂಜೆ.
ಯಾಗಶಾಲೆಯಲ್ಲಿ ಬೆಳಿಗ್ಗೆ 7.30 ಕ್ಕೆ ಗಣಪತಿ ಪೂಜೆ, ಸ್ವಸ್ತಿವಾಚನ, ಮಹಾಸಂಕಲ್ಪ, ಋತ್ವಿಗ್ವರಣ, ಮಧುಪರ್ಕ ಪೂಜೆ, ದೇವನಾಂದಿ, ಯಾಗಶಾಲಾ ಪ್ರವೇಶ, ಕೂಷ್ಮಾಂಡ ಸಾವಿತಾದಿ ಹೋಮ, ಸೋಮ ಪೂಜೆ, ಪ್ರವಗ್ರ್ಯ ಸಂಭರಣ, ದೀಕ್ಷಣಿಯಾ ಇಷ್ಟಿ ಅಪರಾಹ್ಣ ದೀಕ್ಷಾಭೋಜನ, ನವನೀತದೀಕ್ಷಾ, ಅಪ್ಸುದೀಕ್ಷಾ, ದಂಡದೀಕ್ಷಾ, ಮಂತ್ರದೀಕ್ಷಾ, ಪಯೋವ್ರತ, ಸನೀಹಾರ ಪ್ರೇóಷಣ ನಡೆಯಲಿದೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ:
ರಾತ್ರಿ 7.30ರಿಂದ : ಧಾರ್ಮಿಕ ಸಭೆ ನಡೆಯಲಿದ್ದು, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ದಿವ್ಯ ಉಪಸ್ಥಿತಿಯಲ್ಲಿ ಡಾ. ವಿನಯ್ ಹೆಗ್ಡೆ, ಕುಲಪತಿಗಳು, ನಿಟ್ಟೆ ಸಮೂಹ ಸಂಸ್ಥೆಗಳು ಉದ್ಘಾಟಿಸುವರು. ಅಜಿತ್ ಕುಮಾರ್ ರೈ ಮಾಲಾಡಿ,ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾದ್ವಿ ನಿರಂಜನ್ ಜ್ಯೋತಿ, ಕೇಂದ್ರ ಸಚಿವರು, ಆಹಾರ ಸಂಸ್ಕರಣಾ ಇಲಾಖೆಯ ಸಚಿವಾಲಯ, ರಾಘವೇಂದ್ರ ಶಾಸ್ತ್ರಿ-ಶಿಲೆ, ಶಿಲೆ ಆಡಳಿತ ಮೊಕ್ತೇಸರರು ಶ್ರೀ ಶರವು ಮಹಾಗಣಪತಿ ದೇವಸ್ಥಾನ. ಸುನಿಲ್ ಕುಮಾರ್, ಮುಖ್ಯ ಸಚೇತಕರು, ಕರ್ನಾಟಕ ಸರಕಾರ. ರಘುಪತಿ ಭಟ್, ಶಾಸಕರು, ಉಡುಪಿ. ಡಾ|.ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ. ಡಾ. ಎಂ.ಎನ್. ರಾಜೇಂದ್ರ ಕುಮಾರ್ (ಅಧ್ಯಕ್ಷರು, Sಅಆಅಅ ಃಚಿಟಿಞ).ಡಾ. ಮೋಹನ್ ಆಳ್ವ, ಅಧ್ಯಕ್ಷರು ಆಳ್ವಾಸ್ ಸಮೂಹ ಸಂಸ್ಥೆಗಳು. ಸೌಂದರ್ಯ ರಮೇಶ್, ಉದ್ಯಮಿ, ಬೆಂಗಳೂರು . ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ, ಪುತ್ತೂರು. ನಾರಾಯಣ ಹೆಗ್ಡೆ ಕೋಡಿಬೈಲು, ಆಡಳಿತ ಮೊಕ್ತೇಸರರು,ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ. ಕೆ. ಎನ್. ಕೃಷ್ಣ ಭಟ್, ಅಧ್ಯಕ್ಷರು, ಬದಿಯಡ್ಕ ಗ್ರಾಮ ಪಂಚಾಯತು. ಜಿತೇಂದ್ರ ಕೊಟ್ಟಾರಿ, ಉದ್ಯಮಿ, ಮಂಗಳೂರು. ರಾಜಶೇಖರ ಚೌಟ ದೇವಸ್ಯ, ಉದ್ಯಮಿ, ದುಬಾಯಿ. ಕಿರಣ್ ಜೋಗಿ-ಅಧ್ಯಕ್ಷರು, ಜೋಗಿ ಸಮಾಜ ಮಂಗಳೂರು. ಮಂಜುನಾಥ್ ರೇವಣ್‍ಕರ್, ಅಧ್ಯಕ್ಷರು, ಸೂರಜ್ ಇಂಟರ್‍ನೇಶನಲ್ ವಿದ್ಯಾಸಂಸ್ಥೆ. ಸಂಜೀವ ಭಂಡಾರಿ ಮುಳಿಂಜಗುತ್ತು ಉಪಸ್ಥಿತರಿದ್ದು ಶುಭಹಾರೈಸುವರು. ಸಮಾರಂಭದಲ್ಲಿ ದೀನಬಂಧು ಕಿಳಿಂಗಾರು ಗೋಪಾಲಕೃಷ್ಣ ಭಟ್(ಸಾಯಿರಾಂ ಭಟ್) ಅವರನ್ನು ಸನ್ಮಾನಿಸಲಾಗುವುದು.
ಫೆ. 20 ರಂದು ಬುಧವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5. ರಿಂದ 8. ರ ತನಕ :ಪುಣ್ಯಾಹ,ಗಣಯಾಗ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಾಯತ್ರಿ ಹೋಮ. ಬೆಳಿಗ್ಗೆ 10.ಕ್ಕೆ ಯತಿವರ್ಯರಿಗೆ-ಪೂರ್ಣಕುಂಭಸ್ವಾಗತ. ಬೆಳಿಗ್ಗೆ10.30ಕ್ಕೆ ಅನುಗ್ರಹ ಸಂದೇಶ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನಂ, ಶ್ರೀ ಕ್ಷೇತ್ರ ಒಡಿಯೂರು, ಪರಮ ಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ, ಮುಡುಬಿದಿರೆ ನೀಡುವರು. ಮಧ್ಯಾಹ್ನ 12.30ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಾಯಂಕಾಲ 4. ರಿಂದ 7.ರ ತನಕ : ಶಕ್ತಿದಂಡಕಮಂಡಲ ಪೂಜೆ, ಬಿಂಬ ಶಯ್ಯಾಧಿವಾಸ ನಡೆಯಲಿದೆ.
ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ ಸೋಮಪೂಜೆ, ಪ್ರಾಯಣೀಯೈಷ್ಟಿ, ಸೋಮಕ್ರಯ, ಸೋಮರಾಜಾತಿಥ್ಯ, ಆತಿಥ್ಯೇಷ್ಟಿ, ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ ಅಪರಾಹ್ಣ ಅಪರಾಹ್ಣ ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ಪಯೋವ್ರತಗಳು ನಡೆಯಲಿವೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ: ಧಾರ್ಮಿಕ ಸಭೆ ನಡೆಯಲಿದ್ದು, ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ, ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ವಾಸುದೇವ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಹಾಗೂ ಬ್ರಹ್ಮಶ್ರೀ ಪಾಂಬೂಮೇಕಾಡ್ ಜಾತವೇದನ್ ನಂಬೂದಿರಿಪ್ಪಾಡ್, ಪ್ರಧಾನ ಅರ್ಚಕರು, ಪಾಂಬೂಮೇಕಾಡ್ ಶ್ರೀ ನಾಗರಾಜ ಕ್ಷೇತ್ರ. ತ್ರಿಶ್ಶೂರು ಅವರು ಉಪಸ್ಥಿತರಿರುವರು. ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸುವರು. ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರು, ಅಂಗಾರ, ಶಾಸಕರು, ಸುಳ್ಯ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು. ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ. ವಿಶಾಲ್ ಹೆಗ್ಡೆ ನಿಟ್ಟೆ, ನಿರ್ದೇಶಕರು, ನಿಟ್ಟೆ ಸಮೂಹ ಸಂಸ್ಥೆಗಳು. ತಾರಾ ಅನುರಾಧ, ಮಾಜಿ ವಿಧಾನಪರಿಷತ್ ಸದಸ್ಯರು, ಐಕಳ ಹರೀಶ್ ಶೆಟ್ಟಿ, ಉದ್ಯಮಿ, ಮುಂಬಯಿ ಮತ್ತು ಅಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ., ಮಂಜುನಾಥ್ ಭಂಡಾರಿ, ಅಧ್ಯಕ್ಷರು, ಸಹ್ಯಾದ್ರಿ ಸಮೂಹ ಸಂಸ್ಥೆಗಳು. ರವಿ ಶೆಟ್ಟಿ, ಉದ್ಯಮಿಗಳು, ಮುಂಬಯಿ. ರಘು ಎಲ್ ಶೆಟ್ಟಿ, ಉದ್ಯಮಿ, ಮುಂಬಯಿ. ಎಸ್. ಆರ್. ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೊ ಮಂಗಳೂರು. ನಿತ್ಯಾನಂದ ಮುಂಡೋಡಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ಕರ್ನಿರೆ ವಿಶ್ವನಾಥ್ ಶೆಟ್ಟಿ, ಉದ್ಯಮಿ, ಮುಂಬಯಿ. ರವೀಂದ್ರನಾಥ್ ರೈ, ವಕೀಲರು, ಮಾಜಿ ಉಪಾಧ್ಯಕ್ಷರು, ಬಾರ್ ಕೌನ್ಸಿಲ್ ಕರ್ನಾಟಕ. ಶ್ರೀ ವಸಂತ ಪೈ ಬದಿಯಡ್ಕ, ಅಧ್ಯಕ್ಷರು,ಕೆಡಿಂಜೆ ಶ್ರೀಮಹಾವಿಷ್ಣು ದೇವಸ್ಥಾನ. ಬಿ.ಆರ್. ನಾಗೇಂದ್ರಪ್ರಸಾದ್,ಅಧ್ಯಕ್ಷರು, ಕೊಡಗು ಜಿಲ್ಲಾ ಹೋಟೇಲ್ ಮತ್ತು ರೆಸಾಟ್ರ್ಸ ಮಾಲೀಕರ ಸಂಘ. ಕಡಂದಲೆ ಸುರೇಶ್ ಭಂಡಾರಿ, ಉದ್ಯಮಿ, ಮುಂಬಯಿ. ಸಂಜೀವ ಶೆಟ್ಟಿ, ತಿಂಬರ, ಉದ್ಯಮಿ, ನವಿಮುಂಬೈ. ಕೊರಗಪ್ಪ ಶೆಟ್ಟಿ ಸಣ್ಣಹಿತ್ಲು, ಆಡಳಿತಮೊಕ್ತೇಸರರು, ಅಂಬಾರು ಶ್ರೀ ಸದಾಶಿವ ದೇವಸ್ಥಾನ ಉಪಸ್ಥಿತರಿದ್ದು ಶುಭಹಾರೈಸುವರು.ಈ ಸಂದರ್ಭ ಸಮಾಜ ಸೇವಕ ಗೋಪಾಲ ಎಂ ಬಂದ್ಯೋಡ್ ಅವರನ್ನು ಸನ್ಮಾನಿಸಲಾಗುವುದು.
ಫೆ. 21 ರಂದು ಗುರುವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5. ರಿಂದ 11.ರ ತನಕ: ಪುಣ್ಯಾಹ, ಗಣಯಾಗ. 7.50ಕ್ಕೆ ಕುಂಭಲಗ್ನದಲ್ಲಿ ಪುನ:ಪ್ರತಿಷ್ಠಾ ಅಷ್ಠಬಂಧ, ತತ್ವಹೋಮ. ಬೆಳಿಗ್ಗೆ10.ಕ್ಕೆ: ಯತಿವರ್ಯರಿಗೆ -ಪೂರ್ಣಕುಂಭಸ್ವಾಗತ. ಬೆಳಿಗ್ಗೆ10.30ಕ್ಕೆ: ಅನುಗ್ರಹ ಸಂದೇಶ: ಪರಮ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಲ್ಯೋಟ್ಟು ಕಾರ್ಕಳ, ಪರಮ ಪೂಜ್ಯ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ಬಾಳೆಕೋಡಿ. ಮಧ್ಯಾಹ್ನ 12.30ಕ್ಕೆ: ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5.00ರಿಂದ 7.30ರ ವರೆಗೆ : 108 ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.
ಯಾಗಶಾಲೆಯಲ್ಲಿ ಬೆಳಿಗ್ಗೆ9.00ಕ್ಕೆ : ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ವೇದಿನಿರ್ಮಾಣ, ಯೂಪಕರ್ಮ, ಚಯನಕರ್ಮ.ಅಪರಾಹ್ಣ :ಅಪರಾಹ್ಣ ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ಪಯೋವ್ರತ ವಿಧಿವಿಧಾನಗಳು ನಡೆಯಲಿದೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ., ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಆಶೀರ್ವಚನನ ನೀಡುವರು. ಬ್ರಹ್ಮಶ್ರೀ ಹರಿನಾರಾಯಣದಾಸ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಉಪಸ್ಥಿತರಿರುವರು. ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕರು ಹಾಗೂ ಮಾಜಿ ಸಚಿವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಶ್ವಿನಿ ಕುಮಾರ್ ಚೌಭೆ, ರಾಜ್ಯ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಭಾರತ ಸರಕಾರ. ರಮೇಶ್ ಚೆನ್ನಿತ್ತಲ, ಪ್ರತಿಪಕ್ಷ ನಾಯಕರು,ಕೇರಳ ಸರಕಾರ. ಕು.| ಶೋಭಾ ಕರಂದ್ಲಾಜೆ, ಲೋಕಸಭಾ ಸದಸ್ಯೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ವಿ. ಮುರಳೀಧರನ್, ರಾಜ್ಯಸಭಾ ಸದಸ್ಯರು, ಭಾರತ ಸರಕಾರ. ರಾಜೇಶ್ ನಾೈಕ್, ಶಾಸಕರು, ಬಂಟ್ವಾಳ. ಕೆ. ಪಿ. ನಂಜುಂಡಿ, ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರಕಾರ. ಯನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರಕಾರ. ಹರೀಶ್ ಕುಮಾರ್, ಸದಸ್ಯರು, ವಿಧಾನಪರಿಷತ್, ಕರ್ನಾಟಕ ಸರಕಾರ. ಬೊಳ್ಯ ವಿವೇಕ್ ಶೆಟ್ಟಿ, ಉದ್ಯಮಿ, ಮುಂಬಯಿ., ಗೋಪಾಲ್ ಚೆಟ್ಟಿಯಾರ್, ಸಂಘಚಾಲಕರು, ರಾ.ಸ್ವ.ಸಂ, ಮಂಗಳೂರು ವಿಭಾಗ. ಹರೀಶ್ ಸೇರಿಗಾರ್, ಉದ್ಯಮಿ, ದುಬಾಯಿ., ರಮಾನಾಥ ಹೆಗ್ಡೆ, ಆಡಳಿತ ಮೊಕ್ತೇಸರರು, ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು. ಪುಷ್ಪರಾಜ್ ಜೈನ್, ಅಭಿಷ್ ಬಿಲ್ಡರ್ಸ್, ಮಂಗಳೂರು. ಸಂತೋಷ್ ಕುಮಾರ್ ಶೆಟ್ಟಿ - ದುರ್ಗಾಂಬಾ ಬಿಲ್ಡರ್ಸ್, ಮಂಗಳೂರು., ರೋಹಿದಾಸ್ ಬಂಗೇರ, ಉದ್ಯಮಿ, ಮುಂಬಯಿ., ಪುಂಡರಿಕಾಕ್ಷ ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತ್, ಡಾ. ಮಂಜುನಾಥ್, ಯುನೈಟೆಡ್ ಆಸ್ಪತ್ರೆ, ಕಾಸರಗೋಡು. ಸುರೇಶ್, ಉದ್ಯಮಿ, ಕಾಸರಗೋಡು., ಡಾ. ಸ್ವಪ್ನಾ ಜಯಗೋವಿಂದ, ಉಕ್ಕಿನಡ್ಕ ಆಯುರ್ವೇದ ಆಸ್ಪತ್ರೆ ಉಪಸ್ಥಿತರಿರುವರು. ಸಮಾರಂಭದಲ್ಲಿ ವಿ. ಸುಬ್ರಹ್ಮಣ್ಯ, ಆಡಳಿತ ಪಾಲುದಾರರು, ತೇಜೂ ಮಸಾಲಾ, ಬೆಂಗಳೂರು , ಜಯರಾಮ, ಶಾಸಕರು, ತುರುವೇಕೆರೆ ಅವರನ್ನು ಸನ್ಮಾನಿಸಲಾಗುವುದು.
ಫೆ.22 ರಂದು ಶುಕ್ರವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5. ರಿಂದ 8.30ರ ತನಕ: ಪುಣ್ಯಾಹ, ಗಣಯಾಗ. 7.48ಕ್ಕೆ ಕುಂಭಲಗ್ನದಲ್ಲಿ ಸಾಂನಿಧ್ಯ ಕಲಶಾಭಿಷೇಕ. ಬೆಳಿಗ್ಗೆ 10.ಕ್ಕೆ: ಯತಿವರ್ಯರಿಗೆ-ಪೂರ್ಣಕುಂಭ ಸ್ವಾಗತ. ಬೆಳಿಗ್ಗೆ10.30ಕ್ಕೆ :ಅನುಗ್ರಹ ಸಂದೇಶ: ಪರಮ ಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ, ಗುರುಪುರ., ಪರಮ ಪೂಜ್ಯ ಶ್ರೀ ಮಬಾಬಲ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು, ಕನ್ಯಾನ. ಮಧ್ಯಾಹ್ನ 12.30ಕ್ಕೆ: ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5.ರಿಂದ 8.30ರ ವರೆಗೆ: ದುರ್ಗಾನಮಸ್ಕಾರ ಪೂಜೆ, ರಂಗ ಪೂಜೆ ನಡೆಯಲಿದೆ.
ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ: ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ಅರುಣ ಕೇತುಕ ಚಯನ, ಉಪಸ್ಥಾನ, ಪ್ರವಗ್ರ್ಯ ಉದ್ವಾಸನೆ,ಅಗ್ನಿಪ್ರಣಯನ, ಹವಿರ್ಧಾನ-ಪ್ರಣಯನ, ಸದೋಮಂಟಪ ನಿರ್ಮಾಣ, ಅಗ್ನಿಷೋಮೀಯ ಪ್ರಣಯನ,ಅಗ್ನಿಷೋಮೀಯ ಯಾಗ, ವಸತೀವರೀ ಹರಣ, ಪಂಚಗೋದೋಹನ, ನಾಮಸುಬ್ರಹ್ಮಣ್ಯಾಹ್ವಾನ,ಸತ್ಯುಪಕ್ರಮ. ಬೆಳಿಗ್ಗೆ 10.30ಕ್ಕೆ : ವೈಶ್ರವಣ ಯಜ್ಞಗಳು ನಡೆಯಲಿದೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ., ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳು. ಬ್ರಹ್ಮಶ್ರೀ ಕೈಮುಕ್ ಪೆರಿಂಪಡ್ಪು ವೈದಿಕನ್ ಶ್ರೀ ರಾಮನ್ ಅಕ್ಕಿತ್ತಿರಿಪ್ಪಾಡ್: ಬ್ರಹ್ಮಶ್ರೀ ಚೇನಾಸ್ ದಿನೇಶನ್ ನಂಬೂದಿರಿಪ್ಪಾಡ್, ಗುರುವಾಯೂರು ತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ, ಕುಂಟಾರು ಉಪಸ್ಥಿತರಿರುವರು. ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಡಿ.ವಿ. ಸದಾನಂದ ಗೌಡ, ಕೇಂದ್ರಸಚಿವರು, ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ,ಭಾರತ ಸರಕಾರ. ಜನರಲ್ ವಿ. ಕೆ. ಸಿಂಗ್, ಕೇಂದ್ರ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತ ಸರಕಾರ. ಪಿ.ಯಸ್. ಪ್ರಕಾಶ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ. ಲಾಲಾಜಿ ಮೆಂಡನ್, ಶಾಸಕರು, ಕಾಪು. ಉಮಾನಾಥ್ ಕೋಟ್ಯಾನ್, ಶಾಸಕರು ಮೂಡುಬಿದಿರೆ, ಭಾಸ್ಕರ್ ಕೆ., ಮೇಯರ್, ಮಂಗಳೂರು ಮಹಾನಗರಪಾಲಿಕೆ. ಕೃಷ್ಣ ಪಾಲೆಮಾರ್, ಮಾಜಿ ಸಚಿವರು, ಕರ್ನಾಟಕ ಸರಕಾರ., ಕೆ. ಸುರೇಂದ್ರನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ,, ಪ್ರಕಾಶ್ ಶೆಟ್ಟಿ ಬಂಜಾರ ಅಧ್ಯಕ್ಷರು, ಬಂಜಾರ ಸಮೂಹ ಸಂಸ್ಥೆಗಳು., ಕೆ. ಸಿ. ನಾೈಕ್, ಆಡಳಿತ ಮೊಕ್ತೇಸರರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ,, ಸತೀಶ್ ಪೂಜಾರಿ ಅಧ್ಯಕ್ಷರು, ದುಬೈ ಬಿಲ್ಲವರ ಸಂಘ.ಡಾ. ಜೀವರಾಜ್ ಸೊರಕೆ, ಅಧ್ಯಕ್ಷರು, ಎಸ್.ಸಿ.ಎಸ್ ಆಸ್ಪತ್ರೆ, ಮಂಗಳೂರು., ಬೊಳ್ನಾಡುಗುತ್ತು ಚಂದ್ರಹಾಸ ರೈ, ಉದ್ಯಮಿ, ಮುಂಬಯಿ. ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರು, ಅದಾನಿ ಪವರ್ ಲಿಮಿಟೆಡ್. (UPಅಐ), ಟಿ. ವಿಜಯಕುಮಾರ್ ರೆಡ್ಡಿ, ರಾಷ್ಟ್ರೀಯ ಅಧ್ಯಕ್ಷರು , ಹಿಂದೂ ಹೆಲ್ಪ್ ಲೈನ್., ಭಾಸ್ಕರ ಶೆಟ್ಟಿ, ಉದ್ಯಮಿ, ಪುಣೆ., ದಯಾನಂದ ಬಂಗೇರ ಉದ್ಯಮಿ ಮುಂಬಯಿ., ಸದಾಶಿವ ಶೆಟ್ಟಿ, ಕುಳೂರು ಕನ್ಯಾನ, ಉದ್ಯಮಿ, ಮುಂಬಯಿ., ಮಾದವ ಮಾವೆ,ಉದ್ಯಮಿ, ಬೆಂಗಳೂರು, ಜಯದೇವ್ ಖಂಡಿಗೆ ಉಪಸ್ಥಿತರಿದ್ದು ಶುಭಹಾರೈಸುವರು. ಸಮಾರಂಭದಲ್ಲಿ ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ, ಅಬುದಾಭಿ.,ಎಸ್. ಎನ್. ವಿ.ಎಲ್. ನರಸಿಂಹ ರಾಜು, ಅಧ್ಯಕ್ಷರು, ಆಕ್ಸಫರ್ಡ್ ವಿದ್ಯಾಸಂಸ್ಥೆಗಳ ಸಮೂಹ, ಬೆಂಗಳೂರು., ಶಾರದಮ್ಮ, ಸಮಾಜ ಸೇವಕಿ, ಬೆಂಗಳೂರು., ಡಿ. ಎಸ್. ಸೂರ್ಯನಾರಾಯಣ, ಬೆಂಗಳೂರು ಅವರನ್ನು ಸನ್ಮಾನಿಸಲಾಗುವುದು.
ಫೆ. 23 ರಂದು ಶನಿವಾರ ಯಾಗಶಾಲೆಯಲ್ಲಿ ಬೆಳಿಗ್ಗೆ 4.ಕ್ಕೆ: ಯಜ್ಞಸಾರಥಿಗಾನ, ಗ್ರಹೋಪಸ್ಥಾನ, ಪ್ರಾತರನುವಾಕ, ನಾಮ-ಸುಬ್ರಹ್ಮಣ್ಯಾಹ್ವಾನ, ಸೋಮಾಭಿಷವ, ಗ್ರಹಗ್ರಹಣ, ಸರ್ಪಣ, ಬಹಿಷ್‍ಪವಮಾನ, ಸವನೀಯಯಾಗ, ವಪಾಯಾಗ, ಪ್ರಾತಸ್ಸವನ,ಆಜ್ಯಾದಿ ಶಸ್ತ್ರಗಳು, ಪ್ರಾತಸ್ಸವನ ಸಮಾಪ್ತಿ. ಮಾಧ್ಯಂದಿನ ಸವನ: ಸೋಮಾಭಿಷವ, ತರ್ಪಣ, ಸವನೀಯ ಯಾಗ, ದಕ್ಷಿಣಾದಾನ, ವಿಶ್ವಕರ್ಮ ಹೋಮ, ಮಾಧ್ಯಂದಿನಸ್ತೋತ್ರ ಶಸ್ತ್ರಗಳು.ತೃತೀಂiÀi ಸವನಯಾಗ, ಅಂಗಯಾಗ, ವೈಶ್ವದೇವ ಪಿತೃಯಜ್ಞ, ಅಗ್ನಿಮಾರುತ, ವಾಲಖಿಲ್ಯ, ವೃಷಾಕಪಿ, ಎವಯಾಮರುತ್, ಸ್ತೋತ್ರ, ಶಸ್ತ್ರ ವಿಶೇಷಗಳು, ಷೋಡಶೀರಾತ್ರಿ ಪರ್ಯಾಯ, ಆಶ್ವಿನ ಸ್ತೋತ್ರ, ಶಸ್ತ್ರಬೆಳಿಗ್ಗೆ 10.ಕ್ಕೆ:ಯತಿವರ್ಯರಿಗೆ-ಪೂರ್ಣಕುಂಭಸ್ವಾಗತ. ಬೆಳಿಗ್ಗೆ10.30ಕ್ಕೆ ಅನುಗ್ರಹ ಸಂದೇಶ ಪರಮ ಪೂಜ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ., ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ, ಕಟಪಾಡಿ. ಮಧ್ಯಾಹ್ನ 12.30ಕ್ಕೆ: ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಫೆ. 24 ರಂದು ಭಾನುವಾರ ಬೆಳಿಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುಚ್ಛ, ಅವಭೃಥ ಸ್ನಾನ, ಉದಯನಿಯೇಷ್ಟಿ, ಮೈತ್ರಾವರುಣ್ಯೇಷ್ಟಿ, ಉದವಸಾನೀಯ, ಪೂರ್ಣಾಹುತಿ ನಡೆಯಲಿದೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಅಪರಾಹ್ಣ 2.30ಕ್ಕೆ: ಸಮಾರೋಪ ಸಮಾರಂಭ ಧಾರ್ಮಿಕ ಸಭೆ ನಡೆಯಲಿದ್ದು, ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ, ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಉಪಸ್ಥಿತರಿರುವರು. ಕುಸುಮೋಧರ. ಡಿ. ಶೆಟ್ಟಿ ,ಉದ್ಯಮಿ, ಮುಂಬಯಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸುರೇಶ್ ಪ್ರಭು, ಕೇಂದ್ರ ಸಚಿವರು, ನಾಗರಿಕ ವಿಮಾನಯಾನ, ಭಾರತ ಸರಕಾರ. ಶ್ರೀಪಾದ್ ಯಸ್ಸೋ ನಾಯಕ್, ಮಾನ್ಯ ಆಯುಷ್ ಖಾತೆ ಸಚಿವರು, ಭಾರತಸರಕಾರ, ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕರು, ಕರ್ನಾಟಕ ಸರಕಾರ. ಕೆ. ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರು, ಕರ್ನಾಟಕ ಸರಕಾರ. ಶ್ರೀರಾಮಲು, ಮಾಜಿ ಮಂತ್ರಿಗಳು ಹಾಗೂ ಶಾಸಕರು, ಕರ್ನಾಟಕ ಸರಕಾರ. ಡಾ. ಪ್ರಭಾಕರ ಭಟ್, ಸಂಚಾಲಕರು, ಶ್ರೀರಾಮ ವಿದ್ಯಾ ಕೇಂದ್ರ, ಕಲ್ಲಡ್ಕ. ಸಂಜೀವ ಮಠಂದೂರು, ಶಾಸಕರು, ಪುತ್ತೂರು. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು. ಸುರೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ. ರೋಹಿತ್ ಶೆಟ್ಟಿ ನಗ್ರಿಗುತ್ತು, ಉದ್ಯಮಿ, ಪ್ರವೀಣ್ ಶೆಟ್ಟಿ ವಕ್ವಾಡಿ - ಫೋರ್ಚೂನ್ ಸಂಸ್ಥೆಗಳು, ದುಬಾಯಿ. ಸರ್ವೋತ್ತಮ ಶೆಟ್ಟಿ , ಉದ್ಯಮಿ, ದುಬಾಯಿ. ಯಶಪಾಲ್ ಸುವರ್ಣ, ಅಧ್ಯಕ್ಷರು, ಮೀನುಗಾರಿಕಾ ಫೆಡರೇಶನ್, ದ.ಕ ಮತ್ತು ಉಡುಪಿ ಜಿಲ್ಲೆ. ಸುನೀಲ್‍ಕೃಷ್ಣ ಸುತಾರ್, ಉಪಾಧ್ಯಕ್ಷರು, ಎನ್. ಸಿ.ಪಿ. ನವಿಮುಂಬೈ. ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ, ಮುಂಬಯಿ. ಗುಣಶೀಲ ಶೆಟ್ಟಿ, ಉದ್ಯಮಿ, ದುಬಾಯಿ. ಶ್ರೀ ಪ್ರೇಮ್‍ನಾಥ್ ಶೆಟ್ಟಿ, ಉದ್ಯಮಿ, ದುಬಾಯಿ ಉಪಸ್ಥಿತರಿರುವರು.
ಸಾಯಂಕಾಲ 5. ರಿಂದ: ಯಜ್ಞಸಮರ್ಪಣೆ (ಯಜ್ಞಶಾಲೆಗೆ ಅಗ್ನಿಸ್ಪರ್ಶ), ಮಂತ್ರಾಶೀರ್ವಾದ, ಮಹಾಪ್ರಸಾದ ವಿತರಣೆ ನಡೆಯಲಿದೆ.
ಫೆ. 25 ರಂದು ಸೂರ್ಯಾಸ್ತ 6.37ರಿಂದ ಮಾ. 4 ರ ಸೂರ್ಯಾಸ್ತ 6.38ರ ತನಕ 16ನೇ ವóರ್ಷದ ಅಖಂಡ ಭಜನಾ ಸಪ್ತಾಹ ಜರಗಲಿರುವುದು.

