ಪೊಯ್ಯತ್ತಬೈಲ್ : ಅಸಯ್ಯದತ್ ಮಣವಾಟಿ ಬೀಬಿ ಉರೂಸ್ ಗೆ ಅದ್ದೂರಿ ಚಾಲನೆ
0
ಫೆಬ್ರವರಿ 16, 2019
ಮಂಜೇಶ್ವರ : ಇತಿಹಾಸ ಪ್ರಸಿದ್ಧ ಪೊಯ್ಯತ್ತಬೈಲ್ ಅಸ್ಸಯ್ಯಿದತ್ ಮಣವಾಟಿ ಬೀವಿ ಮಖಾಂ ಉರೂಸ್ ಗೆ ಶುಕ್ರವಾರ ಜುಮಾ ನಮಾಜಿನ ಬಳಿಕ ಸಯ್ಯದ್ ಅತ್ತಾವುಲ್ಲ ತಂಙಳ್ ಧ್ವಜಾರೋಹಣಗೈದು ಚಾಲನೆ ನೀಡಿದರು.
ಪೊಯ್ಯತ್ತಬೈಲ್ ಖ್ಹಾಝಿ ತಾಜು ಶರೀಹ ಶೈಖುನಾ ಅಲಿಕುಂಞÂ ಮುಸ್ಲಿಯಾರ್ ಎಂ ಒ ಪ್ರಾರ್ಥಣೆಗೆ ನೇತೃತ್ವ ನೀಡಿದರು. ಪೊಯ್ಯತ್ತಬೈಲ್ ಜಮಾಹತ್ ಅಧ್ಯಕ್ಷ ಡಿ ಎಂ ಕೆ ಮೊಹಮ್ಮದ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಗೌರವಾಧ್ಯಕ್ಷ ಕುಂಞÂ ಆಹ್ಮದ್ ಮುಸ್ಲಿಯಾರ್, ಮಾಜಿ ಅಧ್ಯಕ್ಷರುಗಳಾದ ನಡಿಬೈಲ್ ಆಹ್ಮದ್ ಕುಂಞÂ ಹಾಜಿ, ಪಿ ಆಹ್ಮದ್ ಕುಂಞÂ ಓಡಂಗಳ, ಪಿ ಇಸ್ಮಾಯಿಲ್, ಮಾಹಿನ್ ಕುಟ್ಟಿ ನೀರೊಳಿಕೆ ಎಸ್ ಎಂ ಅಬ್ದುಲ್ ಖಾದರ್, ಶಂಶುದ್ದೀನ್ ತಂಙಳ್, ಜಬ್ಬಾರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಇಷಾ ನಮಾಜಿನ ಬಳಿಕ ಶೈಖುನಾ ಅಲಿಕುಂಞÂ ಮುಸ್ಲಿಯಾರ್ ಎಂ ಒ ರವರ ಅಧ್ಯಕ್ಷತೆಯಲ್ಲಿ ನಡೆದ ಮತ ಪ್ರವಚನ ಉದ್ಘಾಟನೆಯನ್ನು ಜಾಫರ್ ಸಾದಿಖ್ ತಂರ್ಙಳ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉರೂಸ್ ಎಂಬುವುದು ಆಚರಣೆಗೆ ಮಾತ್ರ ಸೀಮತವಾಗಿರಬಾರದು. ಅದರಲ್ಲಿ ನಮ್ಮಲ್ಲಿರುವ ಧಾರ್ಮಿಕತೆಯನ್ನು ಎತ್ತಿ ತೋರಿಸಬೇಕಾಗಿದೆ. ನಾವು ತೋರಿಸುತ್ತಿರುವ ಮತ ಸೌಹಾರ್ಧತೆ ನಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕಾಗಿದೆ. ಅಕ್ರಮ ನಡೆಸದೆ ಸಹಿಷ್ಣುತೆ ಹಾಗೂ ಸಮಾಧಾನವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಬಳಿಕ ಹುಸೈನ್ ಸಹದಿ ಮುಖ್ಯ ಪ್ರವಚನ ನಡೆಸಿದರು. ಈ ಸಂದರ್ಭ ವೇದಿಕೆಯಲ್ಲಿ ಮೊಹಮ್ಮದ್ ಸಖಾಫಿ ಪಾತೂರು, ಅಬ್ದುಲ್ ಮಜೀದ್ ಫೈಝಿ, ಸಿರಾಜುದ್ದೀನ್ ಸಿದ್ದೀಖಿ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಜಾಫರ್ ಸ್ವಾದಿಖ್ ಸಹದಿ, ಉಸ್ಮಾನ್ ಮುಸ್ಲಿಯಾರ್, ಹಾಜಿ ಬಿ ಆಹ್ಮದ್ ಕುಂಞÂ, ಎಸ್ ಇಬ್ರಾಹಿಂ ಹಾಜಿ ಸುಳ್ಯಮೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಡಿ ಎಂ ಕೆ ಮೊಹಮ್ಮದ್ ಸ್ವಾಗತಿಸಿ, ಎಸ್ ಇಬ್ರಾಹಿಂ ಹಾಜಿ ಸುಳ್ಯಮೆ ವಂದಿಸಿದರು.
ಶುಕ್ರವಾರದಿಂದ ಫೆ. 5 ರ ತನಕ ಉರೂಸ್ ನಡೆಯಲಿದೆ. ಕೇರಳ ಹಾಗೂ ಕರ್ನಾಟಕ ಸಂಗಮ ಸ್ಥಳವಾದ ಪೊಯ್ಯತ್ತಬೈಲು ಸರ್ವಧರ್ಮೀಯರ ಸೌಹಾರ್ಧ ಸಾರುವ ಭೂಮಿಯಾಗಿದೆ. ಜಾತಿ ಮತ ಭೇದವಿಲ್ಲದೆ ಸಹಸ್ರಾರು ಭಕ್ತಾಭಿಮಾನಿಗಳು ದರ್ಗಾ ಸಂದರ್ಶಿಸಿ ಪ್ರಾರ್ಥನೆ ನಡೆಸುತ್ತಿದ್ದಾರೆ. ಮಾರ್ಚ್ 4 ರ ತನಕ ನಡೆಯಲಿರುವ ಮತ ಪ್ರವಚನದಲ್ಲಿ ಹಲವು ಪಂಡಿತ ಶಿರೋಮಣಿಗಳು ಮತಪ್ರವಚನ ನೀಡಲಿದ್ದಾರೆ. ಮಾ. 5 ರಂದು ಹಗಲು ಉರೂಸ್ ನಡೆಯಲಿದೆ.

