ಕುಟ್ಟಿ ಬಜಕೂಡ್ಲುಗೆ ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕೋತ್ಸವ ಪ್ರಶಸ್ತಿ-2019
0
ಫೆಬ್ರವರಿ 15, 2019
ಪೆರ್ಲ: ಗಡಿನಾಡಿನ ಹಿರಿಯ ದೈವ ನರ್ತನ ಕಲಾವಿದ ಕುಟ್ಟಿ ಬಜಕ್ಕೂಡ್ಲು ಅವರಿಗೆ ಪ್ರಸ್ತುತ ಸಾಲಿನ ಕರ್ನಾಟಕ ಜಾನಪದ ಲೋಕೋತ್ಸವ ಪ್ರಶಸ್ತಿ ಒಲಿದು ಬಂದಿದೆ. ರಾಮನಗರದಲ್ಲಿ ನಡೆಯಲಿರುವ ಜಾನಪದ ಲೋಕೋತ್ಸವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಜಾನಪದ ಪರಿಷತ್ತು ಕೇಂದ್ರ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಕುಟ್ಟಿ ಬಜಕ್ಕೂಡ್ಲು ಅವರ ಬಗ್ಗೆ:
ನಮ್ಮ ತುಳುನಾಡೆಂದರೆ ಹಲವು ಭಾಷೆ, ನಡೆ, ನುಡಿ, ಆಚಾರ, ವಿಚಾರ, ಕಲೆ, ಸಂಸ್ಕøತಿಗಳ ಬೀಡು. ಕಲಾ ಲೋಕದಲ್ಲಿ ನೋಡಿದರೆ ಅದನ್ನು ಸಂಪನ್ನಗೊಳಿಸುವಷ್ಟು ಕಲಾವಿದರು ನಮ್ಮ ನಡುವೇ ಇದ್ದರೂ ಗುರುತಿಸಲ್ಪಡದೆ ಎಲ್ಲೋ ಮರೆಯಾದವರೆ ಹೆಚ್ಚು. ನಮ್ಮ ತುಳುನಾಡು ಧಾರ್ಮಿಕ, ಸಾಂಸ್ಕøತಿಕ, ಸಾಹಿತಿಕ ನೆಲೆಯಾದುದರಿಂದ ಕೆಲವು ವೈಶಿಷ್ಟ್ಯಗಳು, ಕಟ್ಟುಪಾಡುಗಳು ಇನ್ನೂ ಜೀವಂತವಾಗಿವೆ. ಕಲೆಗಳಲ್ಲಿ, ಸಾಹಿತ್ಯಗಳಲ್ಲಿ ಸಾಧನೆ, ಸಾಮಥ್ರ್ಯಗಳು ಬೇರೆ ಬೇರೆಯಾಗಿದ್ದರೂ ಅವುಗಳನ್ನು ಆರಾಧಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ.
ಇಂತಹ ನೆಲದಲ್ಲಿ ಸುಮಾರು 73 ವರ್ಷಗಳಿಂದ ಪಡ್ರೆ, ಕಾಟುಕುಕ್ಕೆ, ಎಣ್ಮಕಜೆ ಹಾಗೂ ಶೇಣಿ ಗ್ರಾಮಗಳಲ್ಲಿ ದೈವಕೋಲ ಕಲಾವಿದರಾಗಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಈಗಲೂ ದೈವನರ್ತಕರಾಗಿ ಗುರುತಿಸಲ್ಪಡುವ ಕಲಾವಿದರಾಗಿದ್ದಾರೆ ಕುಟ್ಟಿ ಬಜಕೂಡ್ಲು. ತನ್ನ ಹನ್ನೆರಡನೆಯ ವಯಸ್ಸಿನಿಂದಲೇ ಈ ಕ್ಷೇತ್ರದಲ್ಲಿ ಪಂಜುರ್ಲಿ, ಮುಕಾಂಬಿಕಾ ಗುಳಿಗ, ಕೋಮರಾಯ ಹಾಗೂ ಪಡ್ರೆ, ಅಗಲ್ಪಾಡಿ ಕ್ಷೇತ್ರದಲ್ಲಿ ಕಾರಣಿಕ ದೈವವೆಂದೇ ಪ್ರಖ್ಯಾತಿ ಹೊಂದಿದ ಜಟಾಧಾರಿ ದೈವ ಹಾಗೂ ಚೆಂಬರ್ಕಾನದ ಧೂಮಾವತಿ ದೈವಪಾತ್ರಿಯಾಗಿ ಗುರುತಿಸಿಕೊಂಡಿದ್ದು ಪ್ರತಿವರ್ಷ ಶ್ರಾವಣ ಮಾಸದ ಆಟಿಕಳಂಜ, ಜೋಗಿ, ಕನ್ಯಾಪು ಮುಂತಾದ ತುಳುನಾಡಿನ ಪರಂಪರೆಯನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ ವಿಚಾರ.
ಇವರ ತಂದೆ ಕಂಕೆ ತಾಯಿ ಚೋಮುರವರ ಏಕೈಕ ಪುತ್ರ ಇವರಾಗಿದ್ದು ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್‍ನಲ್ಲಿ 4ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ಪತ್ನಿ ಕಮಲ ಮಕ್ಕಳಾದ ಮೋಹನ, ಗೋಪಾಲ, ರಾಮ ಹಾಗೂ ಪಲಾಕ್ಷ ಹಾಗೂ ಮೊಮ್ಮಕಳನ್ನೊಳಗೊಂಡ ತುಂಬು ಸಂಸಾರ ಇವರದು. ಇವರು ತಮ್ಮ ನಾಟಿಪದ್ಧತಿಯಿಂದ ಹಲವಾರು ರೋಗಿಗಳ ಆಶಾಕಿರಣವಾಗಿ ಸುತ್ತಮುತ್ತಲಿನ ಸಮುದಾಯಕ್ಕೊಂದು ವರದಾನವಾಗಿ ಪರಿಣಾಮ ಬೀರಿದವರು. ದೈವದ ಕಲ್ಪನೆಗೊಂದು ಸಾಕಾರಮೂರ್ತಿಯಾಗಿದ್ದುಕೊಂಡು ನಿಷ್ಕಲ್ಮಷವಾದ ಸ್ನೇಹಪರತೆಗೆ ಸಾಕ್ಷಿಯಾಗಿ ಪರಿಚಿತಮುಖ ಕಂಡಾಗ ನಕ್ಕು ಕೈ ಜೋಡಿಸಿ ವಂದಿಸುವ ಪರಿ ಕೂಡಾ ಕುಟ್ಟಿಯವರ ವಿನಯಪೂರ್ವ ನಡವಳಿಕೆಗೆ ಹಿಡಿದ ಕನ್ನಡಿಯಾಗಿದೆ. ಇವರು ಕಟ್ಟಿದ ದೈವಕೋಲ ನರ್ತನಗಳನ್ನು ವೀಕ್ಷಸಿದ ಹಲವಾರು ಮನದ ಪರದೆಯ ಮೇಲೆ ನಿರಂತರ ಜೀವಂತಿಕೆ ಪಡೆದುಕೊಂಡಿದೆ. ಇವರ ಈ ಸಾ`Àನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ.
ಪಡ್ರೆಯಲ್ಲಿ ಇವರಿಗೆ ಮೊದಲಿನಿಂದಲೂ ಅಪಾರವಾದ ನಂಟು. ತನ್ನ ಚಿಕ್ಕ ವಯಸಿನಿಂದಲೂ ಪಡ್ರೆಯಲ್ಲೇ ವಾಸವಿದ್ದು ಹಲವು ವರ್ಷಗಳ ಹಿಂದೆ ಬಜಕೂಡ್ಲುವಿನಲ್ಲಿ ಬಂದು ನೆಲೆಯಾದವರು.
ಇಂತಹ ಮುಕುಟಮಣಿಗೆ ಈಗಾಗಲೇ ಗಡಿನಾಡಿನ ಸಾಹಿತ್ಯ ಹಾಗೂ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರು ರಾಮನಗರದಲ್ಲಿ ನಡೆಯುವ ಜಾನಪದ ಲೋಕೋತ್ಸವದಲ್ಲಿ ಕುಟ್ಟಿ ಬಜಕೂಡ್ಲು ಜಾನಪದ ಲೋಕೋತ್ಸವ 2019 ಪ್ರಶಸ್ತಿ ಸ್ವೀಕರಿಸುವರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಶಿಫಾರಸಿನ ಮೇರೆಗೆ ಕುಟ್ಟಿಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

