ಕೊಂಡೆವೂರಿನ ಸೋಮಯಾಗಕ್ಕೆ ಹೊರೆಕಾಣಿಕೆ ಸಮರ್ಪಣೆ
0
ಫೆಬ್ರವರಿ 15, 2019
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18 ರಿಂದ ಆರಂಭಗೊಳ್ಳಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ*ಯು ಫೆ. 17 ರಂದು ಭಾನುವಾರ ಅಪರಾಹ್ಣ 3.30ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ, ಯಾಗ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಆನೆಮಜಲು ವಿಷ್ಣು ಭಟ್ ರವರು ಐಲ ಕ್ಷೇತ್ರದಲ್ಲಿ ಮತ್ತು ಕದ್ರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ.ಜೆ.ಶೆಟ್ಟಿಯವರು ಕದ್ರಿ ಕ್ಷೇತ್ರದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಭಕ್ತಾದಿಗಳು ತಮ್ಮ ದೇವಸ್ಥಾನ, ಮಂದಿರ, ಭಜನಾ ಮಂಡಳಿಗಳು, ಸ್ವಸಹಾಯಸಂಘ, ಯುವಕಮಂಡಲ, ಯಕ್ಷಗಾನ ಸಂಘ, ಮಾತೃಮಂಡಳಿ ಮತ್ತು ವೈಯಕ್ತಿಕವಾಗಿ/ಸಾರ್ವಜನಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ, ಸಮರ್ಪಣೆ ಮಾಡಿ ಯಾಗದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

