ಮುಡೂರ್ ತೋಕೆ ಶಾಲೆಯಲ್ಲಿ ಕಲಿಕೋತ್ಸವ
0
ಫೆಬ್ರವರಿ 15, 2019
ಮಂಜೇಶ್ವರ: ಮುಡೂರ್ ತೋಕೆ ಎಸ್ ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೋತ್ಸವವು ಗುರುವಾರ ಜರಗಿತು. ಗ್ರಾ.ಪಂ. ಸದಸ್ಯೆ ಜೆಸಿಂತಾ ಡಿಸೋಜ ಉದ್ಘಾಟಿಸಿದರು. ಶಾಲಾ ಪ್ರಬಂಧಕ ದೇವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಿದ್ಧಿಕ್, ಶಾಲಾಭಿವೃದ್ದಿ ಸಮಿತಿ ಕಾರ್ಯದರ್ಶಿ ಚಂದ್ರಿಕಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಕ್ಕಳ ಕಲಿಕೋತ್ಸವವನ್ನು ವೀಕ್ಷಿಸಲು ಮಕ್ಕಳ ಹೆತ್ತವರು, ಊರವರು ಆಗಮಿಸಿದ್ದರು. ಶಾಲಾ ಅಧ್ಯಾಪಿಕೆಯರಾದ ಶಶಿಕಲಾ, ಚಿತ್ರ, ಫೌಸಿಯ ಹಾಗೂ ಅಧ್ಯಾಪಕ ಶೈಲೇಶ್ ತರಗತಿಯನ್ನು ನಡೆಸಿಕೊಟ್ಟರು. ಮುಖ್ಯ ಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ, ಶಿಕ್ಷಕಿ ಶಶಿಕಲಾ ವಂದಿಸಿದರು.

