HEALTH TIPS

ಕಾಸರಗೋಡು ನಗರಸಭಾ ಬಜೆಟ್ ಮಂಡನೆ ಆರೋಗ್ಯ, ನಗರ ಅಭಿವೃದ್ಧಿ, ಮೂಲಭೂತ ಸೌಕರ್ಯಕ್ಕೆ ಆದ್ಯತೆ

ಕಾಸರಗೋಡು: ನಗರ ಅಭಿವೃದ್ಧಿ, ಆರೋಗ್ಯ, ಮೂಲಭೂತ ಸೌಕರ್ಯ ಮತ್ತು ಜನರ ಕ್ಷೇಮಕ್ಕೆ ಆದ್ಯತೆ ನೀಡಿರುವ ಕಾಸರಗೋಡು ನಗರಸಭೆಯ 2019-20 ನೇ ಸಾಲಿನ ಮುಂಗಡಪತ್ರವನ್ನು ಫೆ.15 ರಂದು ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಎಲ್.ಎ.ಮಹಮೂದ್ ಮಂಡಿಸಿದರು. ಮೂಲಭೂತ ಸೌಕರ್ಯ ವಲಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳನ್ನು ನವೀಕರಿಸಲು, ದುರಸ್ತಿಗೊಳಿಸಲು ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ವಿವಿಧ ಮೂಲಗಳಿಂದ 11 ಕೋಟಿ ರೂ. ಕ್ರೋಢೀಕರಿಸಲಾಗುವುದು. ಆರೋಗ್ಯ ವಲಯದಲ್ಲಿ ವಿಶೇಷ ಗಮನ ಹರಿಸಲಾಗಿದೆ. ಕಳೆದ ವರ್ಷದಂತೆ ಜನರಲ್ ಆಸ್ಪತ್ರೆ, ಆಯುರ್ವೇದ, ಹೋಮಿಯೋ ಆಸ್ಪತ್ರೆ, ನಗರಸಭಾ ಆರೋಗ್ಯ ಕೇಂದ್ರ ಎಂಬಿವುಗಳ ಸಮಗ್ರ ಅಭಿವೃದ್ಧಿಗೆ ಅಗತ್ಯದ ಯೋಜನೆಗಳಿಗೆ ರೂಪು ನೀಡಲಾಗಿದೆ. ವಾರ್ಡ್ ಮಟ್ಟದ ಅಭಿವೃದ್ಧಿ : ನಗರಸಭೆಯ 38 ವಾರ್ಡ್‍ಗಳಲ್ಲಿ ವಿವಿಧ ಕಾಮಗಾರಿಗಳಿಗಾಗಿ ಯೋಜನೆಯ ಮೊತ್ತದಿಂದ ಪ್ರತಿ ವಾರ್ಡ್‍ಗೆ ಕಳೆದ ವರ್ಷದಂತೆ ತಲಾ 8 ಲಕ್ಷ ರೂ. ಗಳಂತೆ ಮಂಜೂರು ಮಾಡಲಾಗಿದೆ. ಇದಕ್ಕಾಗಿ 3.04 ಕೋಟಿ ರೂ. ಮೀಸಲಿರಿಸಲಾಗಿದೆ. ನಗರಸಭಾ ಪ್ರದೇಶದಲ್ಲಿ ಕ್ಷೇಮ ಪಿಂಚಣಿ ಯೋಜನೆಗಳನ್ನು, ಹಿರಿಯ ನಾಗರಿಕ ಪಾಲಿಯೇಟಿವ್ ಕೇರ್ ಎಂಬಿವುಗಳ ಚಟುವಟಿಕೆ ಉತ್ತಮ ಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಸೆಕೆಂಡರಿ ಪಾಲಿಯೇಟಿವ್‍ನ ಚಟುವಟಿಕೆಗಳಿಗೆ ಈ ಬಾರಿಯೂ ಮೊತ್ತ ಮೀಸಲಿರಿಸಲಾಗಿದೆ. ಶಾರೀರಿಕ ಹಾಗು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವವರಿಗಿರುವ ಬಡ್ಸ್ ರಿಹಾಬಿಲಿಟೇಶನ್ ಸೆಂಟರ್‍ನ ಪ್ರಾಥಮಿಕ ಸೌಕರ್ಯಗಳನ್ನು ಉತ್ತಮ ಪಡಿಸಲಾಗುವುದು. ಟೀಚರ್, ಹೆಲ್ಪರ್‍ಗೆ ಅ„ಕ ವೇತನ ನೀಡಲು ಮೊತ್ತವನ್ನು ಮೀಸಲಿರಿಸಲಾಗಿದೆ. ಅಂಗನವಾಡಿಯ ಪೌಷ್ಠಿಕ ಆಹಾರ ವ್ಯವಸ್ಥೆಯನ್ನು ಉತ್ತಮಗೊಳಿಸಲು, ಅಂಗನವಾಡಿ ಕಟ್ಟಡಗಳನ್ನು ನವೀಕರಿಸಲು ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮೀನುಗಾರಿಕಾ ವಲಯ : ಮೀನು ಕಾರ್ಮಿಕರ ಕ್ಷೇಮಕ್ಕೆ, ಮೀನು ಉದ್ದಿಮೆ ವಲಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪೀಕರಿಸಿ ಜಾರಿಗೆ ತರಲಾಗುವುದು. ಹಿಂದಿನ ವರ್ಷಗಳಂತೆ ಮೀನು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಅಗತ್ಯಕ್ಕೆ ಪೀಠೋಪಕರಣ ಸೇರಿದಂತೆ ಕಲಿಕೋಪಕರಣಗಳನ್ನು ನೀಡಲಾಗುವುದು. ಮೀನು ಕಾರ್ಮಿಕರಿಗೆ ದೋಣಿ, ಬಲೆ ನೀಡಲಾಗುವುದು. ಅರ್ಹರಾದ ಮೀನು ಕಾರ್ಮಿಕರ ಕುಟುಂಬಗಳಿಗೆ ಮನೆ ದುರಸ್ತಿಗೆ ಆರ್ಥಿಕ ಸಹಾಯ ನೀಡಲಾಗುವುದು. ಪರಿಶಿಷ್ಟ ಜಾತಿ ಅಭಿವೃದ್ಧಿ : ನಗರಸಭೆಯ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ರಸ್ತೆ, ಕಾಲುದಾರಿ, ಚರಂಡಿ, ಪ್ರಾದೇಶಿಕ ಜಲ ಸಂಪನ್ಮೂಲಗಳನ್ನು ಬಳಸಿ ಹಾಗು ಇನ್ನಿತರ ಸಂಪನ್ಮೂಲಗಳಿಂದ ಕುಡಿಯುವ ನೀರಿನ ಸೌಕರ್ಯ ಒದಗಿಸುವ ಯೋಜನೆ ಜಾರಿಗೆ ತರಲಾಗುವುದು. ಪರಿಶಿಷ್ಟ ಜಾತಿ ಕುಟುಂಬಗಳ ಅರ್ಹರಾದ ಸದಸ್ಯರಿಗೆ ವಿವಾಹಕ್ಕೆ ಆರ್ಥಿಕ ಸಹಾಯ ನೀಡಲಾಗುವುದು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಗತ್ಯಕ್ಕಾಗಿ ಲ್ಯಾಪ್‍ಟೋಪ್, ಪೀಠೋಪಕರಣಗಳು ಎಂಬಿವುಗಳನ್ನು ಒದಗಿಸಲಾಗುವುದು. ಕೊಪ್ಪಲ್ ಸೇತುವೆ ನಿರ್ಮಾಣ ಪ್ರಾಥಮಿಕ ಹಂತದಲ್ಲಿದೆ. ಪೂರ್ತಿಗೊಳಿಸಲು ಒಟ್ಟು 53 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ. ಕೃಷಿ ವಲಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುವುದು ಅದಕ್ಕಾಗಿ 35 ಲಕ್ಷ ರೂ. ಮೀಸಲಿರಿಸಲಾಗಿದೆ. ಕುಟುಂಬಶ್ರೀ : ಯುವತಿಯರಿಗೆ ಸ್ವೋದ್ಯೋಗ ಕಲ್ಪಿಸಲು 25 ಲಕ್ಷ ರೂ. ವೆಚ್ಚ ಅಂದಾಜಿಸಲಾದ ಪವರ್ ಲಾಂಡ್ರಿ ಯೂನಿಟ್ ಪ್ರಾರಂಭಿಕ ನಿರ್ವಹಣಾ ಹಂತದಲ್ಲಿದೆ. ಸ್ವೋದ್ಯೋಗದ ಅಂಗವಾಗಿ ಡಿಟಿಪಿ ಸೆಂಟರ್ ಸ್ಥಾಪಿಸಲಾಗುವುದು. ಹರಿತ ಕ್ರಿಯಾ ಸೇನೆಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಾಗುವುದು. ಮನೆಗಳಿಗೆ ತೆರಳಿ ಅಜೈವಿಕ ಮಾಲಿನ್ಯಗಳನ್ನು ಸಂಗ್ರಹಿಸಿ ಶೆಡ್ಡಿಂಗ್ ಯೂನಿಟ್‍ಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸಂಬಂಧಪಟ್ಟ ಸಮೀಕ್ಷೆ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಸಾಂಸ್ಕøತಿಕ, ಕ್ರೀಡೆ : ಕಾಸರಗೋಡಿನ ಸಮಷ್ಠಿ ಕಲೆಗಳನ್ನು ಪೆÇ್ರೀತ್ಸಾಹಿಸಲು ಪ್ರತಿಭೆಗಳನ್ನು ಗುರುತಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಮುನಿಸಿಪಲ್ ಲೈಬ್ರರಿಯ ರೆಫರೆನ್ಸ್ ವಿಭಾಗದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ ನವೀಕರಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಯುವತಿ, ಯುವಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾಗಾರ, ಚಿತ್ರ ಪ್ರದರ್ಶನ, ಕವಿತೆ, ಕಥೆ, ಚಿತ್ರ ರಚನೆ ಸ್ಪರ್ಧೆಗಳನ್ನು, ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಗರದ ಕ್ರೀಡಾ ಕ್ಲಬ್‍ಗಳನ್ನು ನಗರಸಭೆಯಲ್ಲಿ ನೋಂದಾವಣೆ ಮಾಡಿ ಸ್ಪೋಟ್ರ್ಸ್ ಕಿಟ್‍ಗಳನ್ನು ವಿತರಣೆ ಮಾಡುವ ಕಾರ್ಯ ನಿರ್ವಹಣಾ ಹಂತದಲ್ಲಿದೆ. ಸ್ಪೋಟ್ರ್ಸ್ ಕೌನ್ಸಿಲ್ ಹಾಗು ಸರಕಾರದ ಸಹಾಯದಿಂದ ಮುನಿಸಿಪಲ್ ಸ್ಟೇಡಿಯಂ ನವೀಕರಿಸಲಾಗುವುದು. ಸಿ.ಸಿ. ಟಿ.ವಿ, ಚರಂಡಿ, ಶಿಕ್ಷಣ, ಕೈಗಾರಿಕೆ : ನಗರದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಜನರಲ್ ಆಸ್ಪತ್ರೆ ಆಸುಪಾಸು ಮೊದಲಾದೆಡೆಗಳಲ್ಲಿ ಸಿ.ಸಿ. ಟಿ.ವಿ. ಸ್ಥಾಪಿಸಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಶುಚಿತ್ವ ಹಾಗು ಕಾನೂನು ವ್ಯವಸ್ಥೆ ಕಾಪಾಡಲು ಸಿ.ಸಿ. ಟಿ.ವಿ. ಕ್ಯಾಮರಾ ಸ್ಥಾಪಿಸಲು ಎರಡನೇ ಹಂತದ ಕಾರ್ಯಕ್ರಮದ ಎಸ್ಟಿಮೇಟ್ ಸಿದ್ಧಪಡಿಸಲು ಟೆಲಿಕಮ್ಯೂನಿಕೇಶನ್ ಇಲಾಖೆಗೆ ಪತ್ರ ಸಿದ್ಧಪಡಿಸಿ ಸಲ್ಲಿಸಲು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇಂಡಸ್ಟ್ರೀಯಲ್ ಎಸ್ಟೇಟ್‍ನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಶೆಡ್‍ಗಳ ಕಾಮಗಾರಿಗೆ 25 ಲಕ್ಷ ರೂ. ಮೀಸಲಿರಿಸಲಾಗಿದೆ. ನಗರದ ವಿದ್ಯಾಲಯಗಳ ಅಭಿವೃದ್ಧಿಗೆ ಸಹಾಯ ಒದಗಿಸಲಾಗುವುದು. ಸರ್ವಶಿಕ್ಷಾ ಅಭಿಯಾನ್ ಯೋಜನೆಗೆ ನಗರಸಭೆಯ ಪಾಲು ಆಗಿ 25 ಲಕ್ಷ ರೂ.ಗಳನ್ನು ಫಂಡ್‍ನಿಂದ 21,05,000 ರೂ. ಮೀಸಲಿರಿಸಲಾಗಿದೆ. ನಗರದ ಚರಂಡಿಗಳನ್ನು ನವೀಕರಿಸಲು ವಿಶೇಷ ಗಮನ ಹರಿಸಲಾಗುವುದು. ಸಮಗ್ರ ಚರಂಡಿ ಯೋಜನೆ ಗುರಿಯಾಗಿದೆ. ಇದಕ್ಕಾಗಿ ವಿವಿಧ ಏಜೆನ್ಸಿಗಳೊಂದಿಗೆ ಕೈಜೋಡಿಸಿ ಕಾರ್ಯಗಳಿಗೆ ಅಗತ್ಯದ ರೂಪು ನೀಡಲಾಗುವುದು ಎಂದು ಬಜೆಟ್‍ನಲ್ಲಿ ಸೂಚಿಸಲಾಗಿದೆ. ಬಜೆಟ್ ಅಧಿವೇಶನದಲ್ಲಿ ನರಗಸಭಾ ಅಧ್ಯಕ್ಷೆ ಬಿಫಾತಿಮ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು. ನಿರಾಶಾದಾಯಕ ಬಜೆಟ್ : ಪಿ.ರಮೇಶ್ 2019-20 ನೇ ಸಾಲಿನ ಕಾಸರಗೋಡು ನಗರಸಭಾ ಬಜೆಟ್ ಕಾಸರಗೋಡು ನಗರವನ್ನು ದಶಕಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದು, ನಿರಾಶಾದಾಯಕ ಎಂದು ಪ್ರತಿಪಕ್ಷ ನಾಯಕ ಪಿ.ರಮೇಶ್ ಪ್ರತಿಕ್ರಿಯಿಸಿದ್ದಾರೆ. ಕಳೆದ ವರ್ಷ ಮಂಡಿಸಿದ ಬಜೆಟ್‍ನಲ್ಲಿ ಸೂಚಿಸಿದ ಹಲವು ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ. ಈ ಬಾರಿಯ ಬಜೆಟ್ ಕಳೆದ ವರ್ಷದ ಪ್ರತಿಯಾಗಿದೆ. ಕಳೆದ ವರ್ಷದ 50 ಕ್ಕೂ ಅಧಿಕ ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ. ಈ ಬಾರಿ ಕೃಷಿ, ಮೀನುಗಾರಿಕೆ, ಶಿಕ್ಷಣ ಮೊದಲಾದವುಗಳನ್ನು ಅವಗಣಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿನಲ್ಲಿ ಇದರ ಪರಿಹಾರಕ್ಕೆ ಯಾವುದೇ ಸ್ಪಷ್ಟ ಯೋಜನೆಯಿಲ್ಲ. ನುರಿತ ಉದ್ಯೋಗಸ್ಥರ ಕೊರತೆ ಮತ್ತು ಅ„ಕಾರಿಗಳ ವರ್ಗಾವಣೆಯಿಂದಾಗಿ ಕಳೆದ ವರ್ಷದ ಹಲವು ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ ಎಂದು ಬಜೆಟ್‍ನಲ್ಲಿ ಪ್ರಸ್ತಾಪಿಸಿರುವುದರಿಂದ ನಗರಸಭೆಯ ಅಭಿವೃದ್ಧಿ ನಿರ್ವಹಣೆಯಲ್ಲಿನ ವಿಫಲತೆಯನ್ನು ಒಪ್ಪಿಕೊಂಡಂತಾಗಿದೆ. ಈ ಕಾರಣದಿಂದಲೇ ಅ„ಕಾರರೂಢ ಪಕ್ಷದ ಸದಸ್ಯರೂ ಕೂಡಾ ಬಜೆಟ್‍ನ್ನು ಧ್ವನಿಮತದಿಂದ ಸ್ವೀಕರಿಸಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಬಗ್ಗೆ ಆಡಳಿತ ಪಕ್ಷದ ಸದಸ್ಯರೂ ಡೆಸ್ಕ್ ಬಡಿದು ಸ್ವಾಗತಿಸಲಿಲ್ಲ ಎಂದರು. ಪಲಾಯನ : ಬಜೆಟ್ ಮಂಡನೆ ಪ್ರಕ್ರಿಯೆ ಬೆಳಿಗ್ಗೆ 11.15 ಕ್ಕೆ ಮುಗಿದಿದ್ದರೂ, ಬಜೆಟ್ ಮೇಲಿನ ಚರ್ಚೆಯನ್ನು ಮಧ್ಯಾಹ್ನ 2.30 ಕ್ಕೆ ಇರಿಸಿದ್ದು ಪಲಾಯನವಾದವಾಗಿದೆ ಎಂದು ಪ್ರತಿಕ್ರಿಯಿಸಿದ ಅವರು ಬಜೆಟ್‍ನಲ್ಲಿ ಯಾವುದೇ ಹೊಸತನವಾಗಲೀ, ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳಾಗಲೀ ಇಲ್ಲದಿರುವುದರಿಂದ ಚರ್ಚೆಯನ್ನು ಮಧ್ಯಾಹ್ನಕ್ಕೆ ಇರಿಸಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries