ಇಂದಿನಿಂದ ಪುನರ್ನವ ಕೃಷಿ ಮೇಳ
0
ಫೆಬ್ರವರಿ 16, 2019
ಕಾಸರಗೋಡು: "ಪುನರ್ನವ ಕೃಷಿ ಮೇಳ' ಇಂದು(ಫೆ.16) ಆರಂಭಗೊಳ್ಳಲಿದೆ.
ಸಿ.ಪಿ.ಸಿ.ಆರ್.ಐ.ಯಲ್ಲಿ ಮೇಳ ಜರುಗಲಿದ್ದು, ಬೆಳಿಗ್ಗೆ 10 ಗಂಟೆಗೆ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕೃಷಿ ಪ್ರದರ್ಶನಗಳನ್ನು ಸಂಸದ ಪಿ.ಕರುಣಾಕರನ್, ವಿಚಾರಸಂಕಿರಣವನ್ನು ಶಾಸಕ ಕೆ.ಕುಂಞÂರಾಮನ್ ಉದ್ಘಾಟಿಸುವರು. ಜೈವಿಕ ಕೃಷಿ ಸಾಧಕರಿಗೆ ಶಾಸಕ ಎಂ.ರಾಜಗೋಪಾಲನ್ ಪ್ರಶಸ್ತಿ ಪ್ರದಾನ ಮಾಡುವರು.
ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆ, ಕಾಸರಗೋಡು ಆತ್ಮ ಸಂಸ್ಥೆ, ಐ.ಸಿ.ಎ.ಆರ್., ಸಿ.ಪಿ.ಸಿ.ಆರ್.ಐ ಜಂಟಿ ವತಿಯಿಂದ ಕಾರ್ಯಕ್ರಮಜರುಗುತ್ತಿದ್ದು, ಫೆ.19 ವರೆಗೆ ಮೇಳ ನಡೆಯಲಿದೆ.
ಕೃಷಿಯ ವೈವಿಧ್ಯಮಯ ಸಮೃದ್ಧಿಯನ್ನು ಪ್ರಸ್ತುತಪಡಿಸುವ 60 ಸ್ಟಾಲ್ ಗಳು ಮೇಳದಲ್ಲಿ ಇರುವುವು. ಇವುಗಳಲ್ಲಿ ಕೆ.ವಿ.ಕೆ. ಮತ್ತು ಸಿ.ಪಿ.ಸಿ.ಆರ್.ಐ.ಯ ಸ್ಟಾಲ್ ಗಳೂ ಇರುವುವು. ಆತ್ಮಾ ವ್ಯಾಪ್ತಿಯ 6 ಬ್ಲೋಕ್ ಗಳ, ಮಣ್ಣು ಸಂರಕ್ಷಣೆ ವಿಭಾಗದ,ರೆಡ್ಕೋ ಇತ್ಯಾದಿ ಇಲಾಖೆಗಳ ಸ್ಟಾಲ್ ಗಳೂ ಇರುವುವು. ಬೆಳಿಗ್ಗೆ 10ರಿಂದ ರಾತ್ರಿ 7.30 ವರೆಗೆ ಸಂದರ್ಶಕರ ಪ್ರವೇಶಕ್ಕೆ ಅವಧಿಯಿರುವುದು.
ಮಣ್ಣು ಕೊಚ್ಚಿ ಹೋಗುವುದು,ವನ್ಯಮೃಗಗಗಳ ಹಾವಳಿ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ, 20 ಸ್ವಯಂಸೇವಾ ಸಂಘಟನೆಗಳ ವಿವಿಧ ಕೃಷಿ ಉತ್ಪನ್ನಗಳು, ನರ್ಸರಿಗಳು, ಅಂತೂರಿಯಂ, ಆರ್ಕಿಡ್ ಇತ್ಯಾದಿ ಸಸ್ಯಗಳೂ ಮೇಳದಲ್ಲಿ ಇರುವುವು. ವಿವಿಧ ರೀತಿಯ ಸ್ಥಳೀಯ ಬೀಜ,ಜೈವಿಕ ಕೀಟನಾಶಕಗಳು ಇತ್ಯಾದಿಗಳ ಪ್ರದರ್ಶನಮತ್ತು ಮಾರಾಟ ಮೇಳದಲ್ಲಿ ಇರುವುದು.
ಸಮಾರಂಭದ ವೇಳೆ ಕೃಷಿಕರ ಸಮಸ್ಯೆಗಳ ಕುರಿತು ಸಂವಾದ, ವಿಚಾರಸಂಕಿರಣ ಇತ್ಯಾದಿಗಳೂ ನಡೆಯಲಿವೆ. ಫೆ.19ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಮಭವನ್ನು ಜಿಲ್ಲಾಪಂಚಾಯತ್ ಉಪಾಧ್ಯಕ್ಷೆ ಸಾಂತಮ್ಮ ಫಿಲಿಪ್ ಉದ್ಘಾಟಿಸುವರು. ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು.

