ಪ್ರೀಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕೋರಿಕೆ
0
ಫೆಬ್ರವರಿ 16, 2019
ಕಾಸರಗೋಡು: ಈ ಶೈಕ್ಷಣಿಕ ವರ್ಷ ಜಿಲ್ಲೆಯ ಸರಕಾರಿ, ಅನುದಾನಿತ ಶಾಲೆಗಳ 9,10ನೇ ತರಗತಿಗಳಲ್ಲಿ ಕಲಿಕೆ ನಡೆಸುತ್ತಿರುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರಿ ಯೋಜನೆ ಪ್ರಕಾರ ಪ್ರೀಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕೋರಲಾಗಿದೆ.
ಸರಕಾರಿ, ಅನುದಾನಿತ ಶಾಲೆಗಳಲ್ಲಿ ಕಲಿಕೆ ನಡೆಸುತ್ತಿರುವವರು, ವಾರ್ಷಿಕ ಆದಾಯ 2 ಲಕ್ಷ ರೂ. ಗಿಂತ ಕಡಿಮೆ ಇರುವ ಕುಟುಂಬಕ್ಕೆ ಸೇರಿದ ಪರಿಶಿಷ್ಟ ಜಾತಿ-ಪಂಗಡಕ್ಕೆ ಶೆರಿದವರು ಶಾಲಾ ಹಿರಿಯ ಅಧಿಕಾರಿಗಳ ಮೂಲಕ ಫೆ.17ರ ಮುಂಚಿತವಾಗಿ ಅರ್ಜಿಯನ್ನು ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಕಚೇರಿಯಲ್ಲಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ 04994-255466. ಕಾಸರಗೋಡು, ಎಣ್ಮಕಜೆ, ಪನತ್ತಡಿ, ನೀಲೇಶ್ವರ ಟ್ರೈಬಲ್ ಎಕ್ಸ್ ಟೆನ್ಶನ್ ಕಚೇರಿಗಳನ್ನು ಸಂಪರ್ಕಿಸಬಹುದು. ಸಂಸ್ಥೆಗಳ ಹಿರಿಯ ಅಧಿಕಾರಿಗಳು ಟ್ರೈಬಲ್ ಡೆವೆಲಪ್ ಮೆಂಟ್ ಕಚೇರಿಯಲ್ಲಿ ಸಲ್ಲಿಸುವ ಲಿಸ್ಟ್ ನಲ್ಲಿ ವಿದ್ಯರ್ಥಿಗಳು ಹಾಸ್ಟೆಲ್ ನಲ್ಲಿರುವವರೋ, ಡೇ ಸ್ಕೂಲ್ ನವರೋ ಎಂದು ನಮೂದಿಸಬೇಕು. ಸಂಸ್ಥೆಗಳ ಬ್ಯಾಂಕ್ ಖಾತೆಯ ಮಾಹಿತಿಯನ್ನೂ ನೀಡಬೇಕು.

