ಕೋಳ್ಯೂರು ಶ್ರೀಶಂಕರನಾರಾಯಣ ದೇವರ ಬ್ರಹ್ಮಕಲಶೋತ್ಸವದ ವಾರ್ಷಿಕೋತ್ಸವ ನಾಳೆ
0
ಫೆಬ್ರವರಿ 15, 2019
ಮಂಜೇಶ್ವರ: ಕೋಳ್ಯೂರು ಶ್ರೀಶಂಕರನಾರಾಯಣ ದೇವಾಲಯದ ಬ್ರಹ್ಮಕಲಶೋತ್ಸವದ ವಾರ್ಷಿಕೋತ್ಸವ ಫೆ. 17 ರಂದು(ಇಂದು) ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8ಕ್ಕೆ ಮಹಾಗಣಪತಿ ಹವನ, 9ರಿಂದ ಶತರುದ್ರಾಭಿಷೇಕ ಮತ್ತು ಪವಮಾನಾಭಿಷೇಕ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನಸಮತರ್ಪಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30 ರಿಂದ ಹವ್ಯಾಸಿ ಕಲಾವಿದರು ಕೋಳ್ಯೂರು ತಂಡದಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ಕೂಟ, ಅಪರಾಹ್ನ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರಿಂದ ಪಾಶುಪತ ಪ್ರದಾನ ಹರಿಕಥಾ ಸತ್ಸಂಗ ಹಾಗೂ 3.30 ರಿಂದ ಹವ್ಯಾಸಿ ಕಲಾವಿದರು ಕೋಳ್ಯೂರು ತಂಡದವರಿಂದ ಯಕ್ಷಗಾನ ಬಯಲಾಟ ಮೈಂದ ದ್ವಿವಿದ - ಮಹಿಷ ವಧೆ ನಡೆಯಲಿದೆ.
ಹಿಮ್ಮೇಳದಲ್ಲಿ ತೆಂಕಬೈಲು ಮುರಲೀಕೃಷ್ಣ ಶಾಸ್ತ್ರಿ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಭಾರ್ಗವಕೃಷ್ಣ ಬಲಿಪಗುಳಿ, ರಾಮಮೂರ್ತಿ ಕುದ್ರೆಕ್ಕೋಡ್ಳು ಸಹಕರಿಸುವರು. ಮುಮ್ಮೇಳದಲ್ಲಿ ಶಶಿಕಿರಣ ಸುಣ್ಣಂಗುಳಿ(ಮೈಂದ), ಶ್ರೀಕೃಷ್ಣ ಭಟ್ ಸುಣ್ಣಂಗುಳಿ(ದ್ವಿವಿದ), ಸುಧಾ ನಂದಕುಮಾರ್ ಕೇರಿಮಾರು(ಸಿಂಹಮುಖಿ), ಮಹಾಬಲೇಶ್ವರ ಭಟ್ ಕೊಮ್ಮೆ ಮತ್ತು ಬಳಗ(ವನ ಪಾಲಕರು), ವಿಠಲ್ ಭಟ್ ಮೊಗಸಾಲೆ(ಕೃಷ್ಣ), ಅಭಿಷೇಕ್ ಕೊಮ್ಮೆ(ಗರುಡ), ವಸಂತ ಸುವರ್ಣ ಬೇಕರಿ(ಬಲರಾಮ), ಹಾಗೂ ಮಹಿಷ ವಧೆ ಆಖ್ಯಾನದಲ್ಲಿ ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ , ರಾಜ ಭಟ್ ಬರೆಮನೆ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ರಾಮಮೂರ್ತಿ ಕುದ್ರೆಕ್ಕೋಡ್ಲು, ಮುಮ್ಮೇಳದಲ್ಲಿ ಸಂದೀಪ ಕೋಳ್ಯೂರು(ಮಾಲಿನಿ), ಸುರೇಶ ಚಕ್ರಕೋಡಿ(ಸುಪಾಶ್ರ್ವಕ), ರಾಮಕೃಷ್ಣ ಭಟ್ ಸಂತೆಗದ್ದೆ(ಬ್ರಹ್ಮ), ಸತೀಶ್ ಸುವರ್ಣ ಕೊಡ್ಲಮೊಗರು(ವಿದ್ಯುನ್ಮಾಲಿ), ಮಹಾಬಲೇಶ್ವರ ಭಟ್ ಕೊಮ್ಮೆ(ಮಾಲಿನಿ ದೂತ), ಕಿಶೋರ್ ಭಟ್ ಕೊಮ್ಮೆ(ಮಹಿಷಾಸುರ), ಆದಿತ್ಯ ಬರೆಮನೆ(ಶಂಖಾಸುರ), ಚಂದ್ರಶೇಖರ ಆಚಾರ್ಯ ಬೇಕರಿ(ದುರ್ಗಾಸುರ), ವೆಂಕಟ್ರಮಣ ಭಟ್(ಬಿಡಲಾಸುರ), ಪೃಥ್ವೀಚಂದ್ರ ಪೆರುವೋಡಿ(ಚಕ್ಷುಶಾಸುರ), ಡಾ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ(ದೇವೇಂದ್ರ), ಅದ್ವೈತ ಭಾರದ್ವಾಜ ಬರೆಮನೆ(ಅಗ್ನಿ), ಶಶಾಂಕ್ ಬೇಕರಿ(ವರುಣ), ಶ್ರೇಯಾಂಕ್ ಬೇಕರಿ(ವಾಯು), ವಿಠಲ್ ಭಟ್ ಮೊಗಸಾಲೆ(ವಿಷ್ಣು), ಗುರುತೇಜ ಶೆಟ್ಟಿ ಒಡಿಯೂರು(ಶ್ರೀದೇವಿ), ಸ್ತುತಿಶ್ರೀ ರಾಧೇಶ್ಯಾಮ್(ಈಶ್ವರ), ಶ್ರಾವಣ್ ಮುಗುಳಿ(ಯಕ್ಷ ಹಾಗೂ ಸಿಂಹ) ಪಾತ್ರಗಳನ್ನು ನಿರ್ವಹಿಸುವರು.

