ಕೊಲ್ಲಂಗಾನ ಪಾಂಡವರ ಕೆರೆಯಲ್ಲಿ ಅಶ್ವತ್ಥ ಉಪನಯನ, ನಾಗ ಪ್ರತಿಷ್ಠೆ
ಬದಿಯಡ್ಕ: ನೀರ್ಚಾಲು ಸಮೀಪದ ಕೊಲ್ಲಂಗಾನದ ಪ್ರಾಚೀನ ಇತಿಹಾಸದ ಪಾಂಡವರ ಕೆರೆಯಲ್ಲಿ ನಾಗ ದೇವರ ಪ್ರತಿಷ್ಠೆ ಹಾಗೂ ಅಶ್ವತ್ಥ ಉಪನಯನ ಕಾರ್ಯಕ್ರಮಗಳು ಗುರುವಾರದಿಂದ ಆರಂಭಗೊಂಡಿದ್ದು, ಫೆ.17 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದಂಗವಾಗಿ ಗುರುವಾರ ಸಂಜೆ 5ಕ್ಕೆ ತಂತ್ರಿವರ್ಯ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಅವರನ್ನು ಶ್ರೀಸನ್ನಿಧಿಗೆ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. ಬಳಿಕ ಶ್ರೀಶಾರದಾ ಭಜನಾ ಮಂದಿರ ಕೊಲ್ಲಂಗಾನ ಪರಿಸರದಿಂದ ಶ್ರೀಸನ್ನಿಧಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು. ಸಂಜೆ 6ಕ್ಕೆ ವಿವಿಧ ವೈದಿಕ ಕಾರ್ಯಕ್ರಮಗಳಾದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ಅಂಕುರಾರೋಹಣ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂಕ, ಪ್ರಸಾದ ವಿತರಣೆ ನಡೆಯಿತು.


ಶುಕ್ರವಾರ ಬೆಳಿಗ್ಗೆ 7.30ಕ್ಕೆ ಗಣಪತಿ ಹವನ, 8.51ರ ಮೀನಲಗ್ನದಲ್ಲಿ ಅಶ್ವತ್ಥೋಪನಯನ, ಸಂಜೆ 6.30ಕ್ಕೆಬಿಂಬಶುದ್ದಿ, ತತ್ವಕಲಶ, ತತ್ವಹೋಮ, ಅಭಿಷೇಕ, ಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ರಾತ್ರಿ ವಿವಿಧ ಮನೋರಂಜನಾ ಕಾರ್ಯಕ್ರಮ, 9ಕ್ಕೆ ಅನ್ನಸಂತರ್ಪಣೆ ನಡೆಯಿತು.
ಇಂದಿನ ಕಾರ್ಯಕ್ರಮ:
ಶನಿವಾರ ಬೆಳಿಗ್ಗೆ7.30ಕ್ಕೆ ಗಣಪತಿಹವನ, ಕಲಾಕಲಶ, ಕಲಾಹೋಮ, ಸಂಜೆ 6.30ರಿಂದ ಪ್ರತಿಷ್ಠಾ ಕಲಶ, ಪ್ರತಿಷ್ಠಾ ಹೋಮ, ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಶಯನ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8ಕ್ಕೆ ನಾಟ್ಯಮಂಟಪ ಮಧೂರು ಇಲ್ಲಿಯ ಜ್ಯೋಸ್ನ್ಸಾ ಕೆ ಕೊಲ್ಲಂಗಾನ ಅವರಿಂದ ಭರತನಾಟ್ಯ ಮತ್ತು ಮಕ್ಕಳಿಂದ ನಾಟ್ಯೋತ್ಸವ ನಡೆಯಲಿದೆ.
ಭಾನುವಾರ ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ, ಬೆಳಿಗ್ಗೆ8.44ರ ಮುಹೂರ್ತದಲ್ಲಿ ಶ್ರೀನಾಗದೇವರ ಪ್ರತಿಷ್ಠೆ, ಕಲಾಶಾಭಿಷೇಕ, ಬ್ರಹ್ಮಕಲಶಾಭಿಷೇಕ, ವಟು ಆರಾಧನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 7ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆವಹಿಸುವರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯರು ಪ್ರಾಸ್ತಾವಿಕವಾಗಿ ಮಾತನಾಡುವರು. ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರರಿವರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡುವರು. ರಾತ್ರಿ 8 ರಿಂದ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ನಾಗ ವಿಜಯ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.