ಬದಿಯಡ್ಕದಲ್ಲಿ ಕೃಷಿಕರ ಇಕೋಶಾಫ್ ಕಾರ್ಯಾರಂಭ
0
ಫೆಬ್ರವರಿ 15, 2019
ಬದಿಯಡ್ಕ: ರಾಜ್ಯ ಕೃಷಿ ಇಲಾಖೆಯ ಆಶ್ರಯದಲ್ಲಿ ಕೃಷಿಕರ ಇಕೋಶಾಫ್ ಬದಿಯಡ್ಕ ಪೋಲೀಸ್ ಠಾಣಾ ಪರಿಸರದಲ್ಲಿ ಇತ್ತೀಚೆಗೆ ಚಾಲನೆಗೊಳಿಸಲಾಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಇಕೋಶಾಫ್ ಉದ್ಘಾಟಿಸಿದರು. ಈ ಸಮದರ್ಭ ಅವರು ಮಾತನಾಡಿ, ಕೃಷಿಕರು ಬೆಳೆದ ಉತ್ಪನ್ನಗಳಿಗೆ ಅಗತ್ಯದ ಬೆಲೆ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಇಕೋಶಾಫ್ ಸಫಲವಾಗಲಿದೆ. ಜೊತೆಗೆ ರಾಸಾಯನಿಕ ರಹಿತ ಸಾವಯವ ತರಕಾರಿ ಉತ್ಪನ್ನಗಳು ಗ್ರಾಹಕರಿಗೆ ಒಂದೆಡೆ ಲಭ್ಯವಾಗುವ ಮೂಲಕ ಸೌಕರ್ಯ ವೃದ್ದಿಸಲಿದೆ ಎಂದು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳಾದ ಅವಿನಾಶ್ ವಿ.ರೈ, ಎ.ಎನ್.ಅಹಮ್ಮದ್, ಶ್ಯಾಮ್ ಪ್ರಸಾದ್ ಮಾನ್ಯ, ಶಬಾನಾ, ಡಿ.ಶಮಕರ, ಅನ್ವರ್ ಓಝೋನ್, ವಿಶ್ವನಾಥ ಪ್ರಭು ಕರಿಂಬಿಲ, ಪ್ರಸನ್ನ ಕುಮಾರಿ, ಜಯಶ್ರೀ, ಪುಷ್ಪಾ ಭಾಸ್ಕರನ್, ಕೃಷಿ ಅಧಿಕಾರಿಗಳಾದ ಮೀರಾ, ಆನಂದ ಕೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸಜಿನಿಮೋಳ್, ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದರು.

