HEALTH TIPS

ಇಂದು ಬೇಳ ಬ್ರಹ್ಮ ಬೈದರ್ಕಳ ನೇಮೋತ್ಸವ

ಬದಿಯಡ್ಕ: ಬೇಳ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವರ್ಷಂಪ್ರತಿ ಜರಗುವ ಶ್ರೀ ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವವು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಮಾರ್ಗದರ್ಶನದಲ್ಲಿ ಹಾಗೂ ಬಾಳೆಕಲ್ಲು ಶ್ರೀ ಕೊರಗಪ್ಪ ಪೂಜಾರಿಯವರ ನೇತೃತ್ವದಲ್ಲಿ ಫೆ.16, ಶನಿವಾರದಂದು ನೆರವೇರಲಿರುವುದು. ಕಾರ್ಯಕ್ರಮದಂಗವಾಗಿ ಫೆ.15ರಂದು ಸಂಜೆ 4 ಗಂಟೆಗೆ ನೀರ್ಚಾಲು ಅಶ್ವತ್ಥಕಟ್ಟೆ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಫೆ.16ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ತಂತ್ರಿಗಳವರಿಂದ ಬ್ರಹ್ಮತಂಬಿಲ, 11 ಗಂಟೆಗೆ ಗರೋಡಿ ಮನೆಯಿಂದ ಭಂಡಾರ ಹೊರಡುವುದು, ಮಧ್ಯಾಹ್ನ ಅನ್ನದಾನ, 2 ಗಂಟೆಗೆ ಶುದ್ಧ ಕಲಶ ಹೋಮ, ರಾತ್ರಿ 9 ಗಂಟೆಗೆ ಶ್ರೀ ಬೈದರ್ಕಳ ಗರೋಡಿ ಇಳಿಯುವುದು ಮತ್ತು ಶ್ರೀ ಬ್ರಹ್ಮಬಲಿ, ರಾತ್ರಿ 11 ಗಂಟೆಗೆ ಶ್ರೀ ಬ್ರಹ್ಮ ಬೈದರ್ಕಳ ಸುರಿಗೆ ಒಪ್ಪಿಸುವುದು, ಪ್ರಾತಃಕಾಲ 1 ಗಂಟೆಗೆ ಮಾಯಂದಾಳ ದೇವಿಯ ಉತ್ಸವ, 4 ಗಂಟೆಗೆ ಪೂಜಾರಿಗಳ ಸೇಟು, 6 ಗಂಟೆಗೆ ಗಂಧಪ್ರಸಾದ ವಿತರಣೆ, ಭಂಡಾರ ಒಳಗಿರಿಸುವುದರೊಂದಿಗೆ ಸಂಪನ್ನವಾಗಲಿದೆ. ಸಾಂಸ್ಕøತಿಕ ಕಾರ್ಯಕ್ರಮಗಳು : ಫೆ16ರಂದು ಮಧ್ಯಾಹ್ನ 2.30ರಿಂದ ಸೂರಂಬೈಲು ಸ್ವಸ್ತಿಶ್ರೀ ಕಲಾಪ್ರತಿಷ್ಠಾನ ಎಡನಾಡು ಇವರಿಂದ ಯಕ್ಷಗಾನ ತಾಳಮದ್ದಳೆ, 6 ಗಂಟೆಯಿಂದ ಪುಟಾಣಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 7.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಬ್ರಹ್ಮಬೈದರ್ಕಳ ಸೇವಾಸಮಿತಿ ಅಧ್ಯಕ್ಷ ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಬಾಡೂರು ಧಾರ್ಮಿಕ ಭಾಷಣ ಮಾಡಲಿರುವರು. ಡಾ| ಮಾಲತಿ ಪ್ರಕಾಶ್, ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಶ್ರೀ ಬ್ರಹ್ಮಬೈದರ್ಕಳ ಸೇವಾಸಮಿತಿಯ ಗೌರವಾಧ್ಯಕ್ಷ ರಾಮಕೃಷ್ಣ ಭಟ್ ಡಿ. ಗೌರವ ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries