ಮೊಗೇರ ಸಂಘದ ವಾರ್ಷಿಕ ಮಹಾಸಭೆ-ನೂತನ ಪದಾಧಿಕಾರಿಗಳ ಆಯ್ಕೆ
0
ಫೆಬ್ರವರಿ 15, 2019
ಬದಿಯಡ್ಕ: ಜಿಲ್ಲಾ ಮೊಗೇರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬದಿಯಡ್ಕದ ಪರಿಶಿಷ್ಟಜಾತಿ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ರವಿಕಾಂತ ಕೇಸರಿ ಕಡಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಬಾಬು ಬಂದ್ಯೋಡು, ಗೌರವಾಧ್ಯಕ್ಷರಾಗಿ ರಾಮಪ್ಪ ಮಂಜೇಶ್ವರ, ಉಪಾಧ್ಯಕ್ಷರುಗಳಾಗಿ ಕೃಷ್ಣದಾಸ್ ದರ್ಬೆತ್ತಡ್ಕ, ಚಂದಪ್ಪ ಕಕ್ವೆ, ಕಾರ್ಯದರ್ಶಿಯಾಗಿ ಸುಧಾಕರ ಬೆಳ್ಳಿಗೆ, ಜೊತೆಕಾರ್ಯದರ್ಶಿಗಳಾಗಿ ಪುಷ್ಪ ಮಾಳಂಗೈ, ಸುಂದರ ಸುದೆಂಬಳ, ಕೋಶಾಧಿಕಾರಿಯಾಗಿ ಗೋಪಾಲ ದರ್ಭೆತ್ತಡ್ಕ, ಸಂಘಟನಾ ಕಾರ್ಯದರ್ಶಿಗಳಾಗಿ ವಿನೋದ್ ಬೇಪು, ರವಿ ಕನಕಪ್ಪಾಡಿ ಅವರನ್ನು ಆರಿಸಲಾಗಿದೆ.
ಸಲಹಾ ಸಮಿತಿ ಸದಸ್ಯರಾಗಿ ಹರಿರಾಮ ಕೊಳೂರು, ರವಿಕಾಂತ ಕೇಸರಿ ಕಡಾರ್, ಪದ್ಮನಾಭ ಚೇನಕ್ಕೋಡು, ಸುಂದರ ಸಿ. ಎಚ್., ಸಮಿತಿ ಸದಸ್ಯರಾಗಿ ರಾಮ ಪಟ್ಟಾಜೆ, ಸತ್ಯಶಂಕರ ಕಾಟುಕುಕ್ಕೆ, ಸುಂದರ ಬಾರಡ್ಕ, ಶಂಕರ ಡಿ, ಸುನಿತ ಎಸ್, ಸುಂದರಿ ಯಂ, ಲೀಲಾ ಪಟ್ಟಾಜೆ, ಮೋಹನ ಬೆಳ್ಳಿಗೆ, ಕುಟ್ಟಿ ತಲೆಬೈಲ್, ವಿಶ್ವನಾಥ ಕನಿಯಾಲ, ರಮೇಶ ಕಕ್ವೆ, ಪುಷ್ಪ, ಗಿರಿಜ ಬಂದ್ಯೋಡು, ಉಮೇಶ ಬಂದ್ಯೋಡು, ಶಾಂತಪ್ಪ ಕಾವುತಮೂಲೆ, ಗಿರಜಾ ಕಾಡಮನೆ, ಜೀವನ್ ಚೇನೆಕ್ಕೋಡು, ರಿತೇಶ್ ಕಿರಣ್ ಚೀಮುಳ್ಳು ಕಾಟುಕುಕ್ಕೆ, ಶಶಿ ಮಾಳಂಗೈ, ಇಂದಿರಾ ಮಾಳಂಗೈ ಇವರನ್ನು ಆಯ್ಕೆಗೊಳಿಸಲಾಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷ ಅಂಗಾರ ಅಜಕ್ಕೋಡು, ಶಂಕರ ದರ್ಭೆತ್ತಡ್ಕ ಶುಭಾಶಂಸನೆಗೈದರು. ವಿನೋದ್ ಬೇಪು ಸ್ವಾಗತಿಸಿ, ಕವಿ ಕನಕಪ್ಪಾಡಿ ವಂದಿಸಿದರು.

