ಮಂಜೇಶ್ವರ: ತುಳು ಭಾಷೆ ಮತ್ತು ಸಂಸ್ಕೃತಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ತುಳು ಭಾಷಾ ಪ್ರೇಮಿಗಳು ಬೇಧ ಮರೆತು ಒಂದಾಗಬೇಕು ಎಂದು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಭಿಪ್ರಾಯಪಟ್ಟರು.
ಕೇರಳ ತುಳು ಅಕಾಡೆಮಿಗಾಗಿ ನಿರ್ಮಿಸುವ ತುಳುಭವನದ ಶಿಲಾನ್ಯಾಸ ಫೆ.27ರಂದು ನಡೆಯಲಿದ್ದು, ಈ ಸಂಬಂಧ ರಚಿಸಲಾದ ಸಂಘಟನಾ ಸಮಿತಿ ಕಾರ್ಯಾಲಯವನ್ನು ಹೊಸಂಗಡಿ ನವೀನ್ ಕ್ವಾಟರ್ಸ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರ ಪೂರೈಸಿದ ಒಂದು ಸಾವಿರ ದಿನ ಸಂಬಂಧ ಸರಣಿ ಕಾರ್ಯಕ್ರಮಗಳ ಸ್ಥಳೀಯ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ, ಮಂಜೇಶ್ವರ ತಹಶೀಲ್ದಾರ್ ಜೋನ್ ವರ್ಗೀಸ್, ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ, ಕಾರ್ಯಕಾರಿ ಸಮಿತಿ ಸದಸ್ಯೆ ಗೀತಾ ವಿ.ಸಾಮಾನಿ, ಮಂಜೇಶ್ವರ ಸಿ.ಡಿ.ಎಸ್.ಅಧ್ಯಕ್ಷೆ ಜ್ಯೋತಿ ಪ್ರಭಾ ಮೊದಲಾದವರು ಉಪಸ್ಥಿತರಿದ್ದರು.
ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಸ್ವಾಗತಿಸಿ,ಸದಸ್ಯೆ ಭಾರತೀ ಬಾಬು ವಂದಿಸಿದರು.

