HEALTH TIPS

ಕೊಂಡೆವೂರಿನ ಯಾಗ ಭೂಮಿಯಲ್ಲಿ ಇಂದು

          ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ 24ರ ತನಕ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಇಂದಿನ ಕಾರ್ಯಕ್ರಮದ ವಿವರ
   ಉಪ್ಪಳ:  ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅತ್ಯಪೂರ್ವವಾದ "ವಿಶ್ವಜಿತ್ ಅತಿರಾತ್ರ ಸೋಮಯಾಗ" ಮತ್ತು ವೇದಮಾತೆ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುಗಳ ಪುನ: ಪ್ರತಿಷ್ಠಾ "ಅಷ್ಟಬಂಧ, ಸಾಂನಿಧ್ಯ ಕಲಶಾಭಿಷೇಕ"ವು ಫೆಬ್ರವರಿ 18ರಿಂದ ಆರಂಭಗೊಂಡು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು  ಶುಕ್ರವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5. ರಿಂದ 8.30ರ ತನಕ ಪುಣ್ಯಾಹ, ಗಣಯಾಗ ನಡೆಯಿತು. 7.48ಕ್ಕೆ ಕುಂಭಲಗ್ನದಲ್ಲಿ ಸಾಂನಿಧ್ಯ ಕಲಶಾಭಿಷೇಕ ನೆರವೇರಿತು. ಬೆಳಿಗ್ಗೆ 10.ಕ್ಕೆ ಯತಿವರ್ಯರಿಗೆ-ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬೆಳಿಗ್ಗೆ 10.30ಕ್ಕೆ ಅನುಗ್ರಹ ಸಂದೇಶ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ  12.30ಕ್ಕೆ: ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಗಂಟೆ 5.ರಿಂದ 8.30ರ ವರೆಗೆ ಶ್ರೀದುರ್ಗಾನಮಸ್ಕಾರ ಪೂಜೆ, ರಂಗ ಪೂಜೆ ನಡೆಯಿತು.
     ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ಅರುಣ ಕೇತುಕ ಚಯನ, ಉಪಸ್ಥಾನ, ಪ್ರವಗ್ರ್ಯ ಉದ್ವಾಸನೆ,ಅಗ್ನಿಪ್ರಣಯನ, ಹವಿರ್ಧಾನ-ಪ್ರಣಯನ, ಸದೋಮಂಟಪ ನಿರ್ಮಾಣ, ಅಗ್ನಿಷೋಮೀಯ ಪ್ರಣಯನ,ಅಗ್ನಿಷೋಮೀಯ ಯಾಗ, ವಸತೀವರೀ ಹರಣ, ಪಂಚಗೋದೋಹನ, ನಾಮಸುಬ್ರಹ್ಮಣ್ಯಾಹ್ವಾನ,ಸತ್ಯುಪಕ್ರಮ ವಿಧಿವಿಧಾನಗಳು ನೆರವೇರಿದವು. ಬೆಳಿಗ್ಗೆ 10.30ಕ್ಕೆ  ವೈಶ್ರವಣ ಯಜ್ಞಗಳು ವಿಶಿಷ್ಟವಾಗಿ ನೆರವೇರಿತು. 


       ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ  ಧಾರ್ಮಿಕ ಸಭೆ ನಡೆಯಿತು.
    ಇಂದಿನ ಕಾರ್ಯಕ್ರಮ:
      ಫೆ. 23 ರಂದು ಶನಿವಾರ ಯಾಗಶಾಲೆಯಲ್ಲಿ ಬೆಳಿಗ್ಗೆ 4.ಕ್ಕೆ ಯಜ್ಞಸಾರಥಿಗಾನ, ಗ್ರಹೋಪಸ್ಥಾನ, ಪ್ರಾತರನುವಾಕ, ನಾಮ-ಸುಬ್ರಹ್ಮಣ್ಯಾಹ್ವಾನ, ಸೋಮಾಭಿಷವ, ಗ್ರಹಗ್ರಹಣ, ಸರ್ಪಣ, ಬಹಿಷ್‍ಪವಮಾನ, ಸವನೀಯಯಾಗ, ವಪಾಯಾಗ, ಪ್ರಾತಸ್ಸವನ,ಆಜ್ಯಾದಿ ಶಸ್ತ್ರಗಳು, ಪ್ರಾತಸ್ಸವನ ಸಮಾಪ್ತಿ. ಮಾಧ್ಯಂದಿನ ಸವನ: ಸೋಮಾಭಿಷವ, ತರ್ಪಣ, ಸವನೀಯ ಯಾಗ, ದಕ್ಷಿಣಾದಾನ, ವಿಶ್ವಕರ್ಮ ಹೋಮ, ಮಾಧ್ಯಂದಿನಸ್ತೋತ್ರ ಶಸ್ತ್ರಗಳು.ತೃತೀಂiÀi  ಸವನಯಾಗ, ಅಂಗಯಾಗ, ವೈಶ್ವದೇವ ಪಿತೃಯಜ್ಞ, ಅಗ್ನಿಮಾರುತ, ವಾಲಖಿಲ್ಯ, ವೃಷಾಕಪಿ, ಎವಯಾಮರುತ್, ಸ್ತೋತ್ರ,  ಶಸ್ತ್ರ ವಿಶೇಷಗಳು, ಷೋಡಶೀರಾತ್ರಿ ಪರ್ಯಾಯ, ಆಶ್ವಿನ ಸ್ತೋತ್ರ, ಶಸ್ತ್ರಬೆಳಿಗ್ಗೆ 10.ಕ್ಕೆ:ಯತಿವರ್ಯರಿಗೆ-ಪೂರ್ಣಕುಂಭಸ್ವಾಗತ. ಬೆಳಿಗ್ಗೆ10.30ಕ್ಕೆ ಅನುಗ್ರಹ ಸಂದೇಶ ಪರಮ ಪೂಜ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ., ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ, ಕಟಪಾಡಿ. ಮಧ್ಯಾಹ್ನ  12.30ಕ್ಕೆ: ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
     ಫೆ. 24 ರಂದು ಭಾನುವಾರ ಬೆಳಿಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುಚ್ಛ, ಅವಭೃಥ ಸ್ನಾನ, ಉದಯನಿಯೇಷ್ಟಿ, ಮೈತ್ರಾವರುಣ್ಯೇಷ್ಟಿ, ಉದವಸಾನೀಯ, ಪೂರ್ಣಾಹುತಿ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries