ಕಲ್ಲಕಟ್ಟ ಶಾಲೆಯಲ್ಲಿ ಕಲಿಕೆಯ ಉತ್ಸವ
0
ಫೆಬ್ರವರಿ 24, 2019
ಕಾಸರಗೋಡು: ಕಲ್ಲಕಟ್ಟ ಶಾಲೆಯಲ್ಲಿ ಕಲಿಕೋತ್ಸವ ಇತ್ತೀಚೆಗೆ ಸಂಪನ್ನಗೊಂಡಿತು. ಚೆಂಗಳ ಗ್ರಾಮ ಪಂಚಾಯತಿ ಸದಸ್ಯೆ ಸಫಿಯ ಮಹಮ್ಮದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಶಾಲಾ ಪ್ರಬಂಧಕ ಪಿ.ವಿ.ಕೇಶವ ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೋಸೆಫ್ ಲೋಬೊ, ಮಾತೃಸಂಘದ ಅಧ್ಯಕ್ಷೆ ಲಿಲ್ಲಿ ಡಿ'ಸೋಜ, ಬಿಆರ್‍ಸಿ ಪ್ರತಿನಿಧಿ ವೀಣ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶ್ಯಾಮ ಪ್ರಸಾದ್ ಸ್ವಾಗತಿಸಿ, ಎನ್.ಗಣಪತಿ ಭಟ್ ವಂದಿಸಿದರು.
ಬಳಿಕ ಒಂದನೇ ತರಗತಿಯಿಂದ ಮೊದಲ್ಗೊಂಡು ಏಳನೇ ತರಗತಿಯ ವರೆಗಿನ ಮಕ್ಕಳಿಂದ ವೈವಿಧ್ಯಮಯ ಕಲಿಕೆಯ ಚಟುವಟಿಕೆಗಳು ನಡೆಯಿತು. ಕಿರು ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಬಿಪಿಒ ಕಾಸಿಂ ಮಾಸ್ಟರ್ ಶುಭಕೋರಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಪ ಜಿಲ್ಲೆ ವಿದ್ಯಾ„ಕಾರಿ ಅಗಸ್ಟಿನ್ ಬರ್ನಾಡ್ ಮಾತನಾಡಿದರು. ಪ್ರತಿಯೊಂದು ಮಗು ಹಿರಿಮೆಯತ್ತ ಸಾಗಲಿ. ಶಿಕ್ಷಣ ಸಂಸ್ಥೆಗಳು ಹಿರಿಮೆಯ ತಾಣಗಳಾಗಲಿ. ಮುಂದಿನ ದಿನಗಳಲ್ಲಿ ಎಲ್ಲ ಮಕ್ಕಳು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲಿ ಎಂದು ಹಾರೈಸಿದರು.

