ತ್ಯಾಗರಾಜ ಆರಾಧನೋತ್ಸವ ಆಚರಣೆ
0
ಫೆಬ್ರವರಿ 24, 2019
ಕಾಸರಗೋಡು: : ಚಿನ್ಮಯ ವಿದ್ಯಾಲಯದಲ್ಲಿ ತ್ಯಾಗರಾಜ ಆರಾಧನೋತ್ಸವ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.
ಕರ್ನಾಟಕ ಸಂಗೀತಜ್ಞೆ ದಿವ್ಯಾ ಮಹೇಶ್ ಅವರ ನೇತೃತ್ವದಲ್ಲಿ ತ್ಯಾಗರಾಜ ಪಂಚರತ್ನ ಕೀರ್ತನೆಗಳನ್ನು ಆಲಾಪಿಸಲಾಯಿತು. ಹಿಮ್ಮೇಳದಲ್ಲಿ ಮೃದಂಗದಲ್ಲಿ ಶ್ರೀಧರ್ ರೈ ಕಾಸರಗೋಡು ಹಾಗು ಪಿಟೀಲಿನಲ್ಲಿ ನಟರಾಜ ಕಲ್ಲೂರಾಯ ಸಹಕರಿಸಿದರು. ಸಾದ್ವಿ ಕಾಶಿಕಾನಂದಜಿ ಅನುಗ್ರಹ ಭಾಷಣ ಮಾಡಿದರು. ಪ್ರಾಂಶುಪಾಲ ಬಿ.ಪುಷ್ಪರಾಜ್, ಉಪ ಪ್ರಾಂಶುಪಾಲರಾದ ಸಂಗೀತ ಪ್ರಭಾಕರನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಒವೈಸ್ ಮುಹಮ್ಮದ್, ಮುಹಮ್ಮದ್ ಫಾರೀಸ್ ಮತ್ತು ಧನುಷ್ ಟಿ.ವಿ. ಮಾತನಾಡಿದರು.

