ಅನಿವಾಸಿ ಭಾರತೀಯರಿಗಾಗಿ ವಿಚಾರಸಂಕಿರಣ, ಸದಸ್ಯತನ ಶಿಬಿರ, ಅದಾಲತ್
0
ಫೆಬ್ರವರಿ 14, 2019
ಕಾಸರಗೋಡು: ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಚಟುವಟಿಕೆ ನಡೆಸುತ್ತಿರುವ ಕೇರಳ ಪ್ರವಾಸಿ ವೆಲ್ಪೇರ್ ಮಂಡಳಿ ಜಾರಿಗೊಳಿಸುವ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಮಂಡಳಿ ವತಿಯಿಂದ ಫೆಬ್ರವರಿ ತಿಂಗಳಲ್ಲಿ ವಿಚಾರಸಂಕಿರಣ ಮತ್ತು ಸದಸ್ಯತನ ಶಿಬಿರ, ಅದಾಲತ್ ನಡೆಸಲು ನಿರ್ಧರಿಸಲಾಗಿದೆ.
ಮಂಡಳಿ ಅಧ್ಯಕ್ಷ ಪಿ.ಟಿ.ಕುಂಞಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಫೆ.26ರಂದು ಕಾಸರಗೋಡಿನಲ್ಲಿ, 27ರಂದು ಕಣ್ಣೂರಿನಲ್ಲಿ ನಡೆಯುವ ಅದಾಲತ್‍ನಲ್ಲಿ ಸದಸ್ಯತನ, ಅಂಶಾದಾಯ ಪಾವತಿ, ಪಿಂಚಣಿ, ಮಂಡಳಿ ಜಾರಿಗೊಳಿಸುವ ವಿವಿಧ ಕಲ್ಯಾಣ ಯೋಜನೆಗಳು ಇತ್ಯಾದಿ ಕುರಿತು ದೂರುಗಳಿದ್ದಲ್ಲಿ ಫೆ.22ರ ಮುಂಚಿತವಾಗಿ ಜಿಲ್ಲಾ ಎಕ್ಸಿಕ್ಯೂಟಿವ್ ಆಫೀಸರ್, ಅನಿವಾಸಿ ವೆಲೇರ್ ಬೋರ್ಡ್, ವಲಯ ಆಫೀಸ್, ಸಾಮೂದಿರಿ ಸ್ಕ್ವಾಯರ್, ಫಸ್ಟ್ ಫೆÇ್ಲೀರ್, ಲಿಂಕ್ ರೋಡ್, ಕಲ್ಲಿಕೋಟೆ ಎಂಬ ವಿಳಾಸಕ್ಕೆ ಕಳುಹಿಸಬೇಕು. ಕಳುಹಿಸುವ ಲಕೋಟೆಯ ಹೊರಬದಿಯಲ್ಲಿ ಅನಿವಾಸಿ ಕ್ಷೇಮಬೋರ್ಡ್ ಅದಾಲತ್ ಎಂದು ನಮೂದಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0495-2304604 ನ್ನು ಸಂರ್ಕಿಸಬಹುದು.

