HEALTH TIPS

ಆನ್ ಲೈನ್ ವೀಡಿಯೋ ಸ್ಪರ್ಧೆಗೆ ವೀಡಿಯೋ ಆಹ್ವಾನ- `ಮಿಳಿವ್-2019' ಗೆ ಚಾಲನೆ

ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಾರ್ವಜನಿಕರಿಗಾಗಿ ನಡೆಸಲಾಗುವ ಆನ್ ಲೈನ್ ವೀಡಿಯೋ ಸ್ಪರ್ಧೆ `ಮಿಳಿವ್ 2019' ಆರಂಭಗೊಂಡಿದೆ. ವೆಬ್ ಸೈಟ್ ಮೂಲಕ ಹೆಸರು ನೋಂದಣಿ ನಡೆಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಅಪ್ ಲೋಡ್ ಮಾಡುವ ವೀಡಿಯೋಗಳಿಗೆ ಖ್ಯಾತ ಸಿನಿಮಾ, ಜಾಹೀರಾತುಗಳ ನಿರ್ದೇಶಕರು ಅಂಕ ನೀಡಲಿದ್ದಾರೆ. ಮೊದಲ ಬಹುಮಾನ ರೂಪದಲ್ಲಿ ಒಂದೂವರೆ ಲಕ್ಷ ರೂ., ದ್ವಿತೀಯ ಬಹುಮಾನ 50 ಸಾವಿರ ರೂ., ತೃತೀಯ ಬಹುಮಾನ 25 ಸಾವಿರ ರೂ., ಪೆÇ್ರೀತ್ಸಾಹಕ ಬಹುಮಾನ 5 ಸಾವಿರ ರೂ. ತಲಾ ಹತ್ತುಮಂದಿಗೆ ಲಭಿಸಲಿದೆ. ಜೊತೆಗೆ ಹಿನ್ನೆಲೆ ಕಲಾವಿದರಿಗೆ ಪಿ.ಆರ್.ಡಿ. ವತಿಯಿಂದ ನಡೆಸಲಾಗುವ ಇತರ ವೀಡಿಯೋ/ ಆಡಿಯೋ ಸಂಗ್ರಹಗಳಲ್ಲಿ ಭಾಗಿಗಳಾಗುವ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ರಾಜ್ಯ ಸರಕಾರ ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸುವ ಜನಪರ ಯೋಜನೆಗಳನ್ನು ಹೆಚ್ಚುವರಿ ಜನತೆಗೆ ತಲಪಿಸುವ ಉದ್ದೇಶದಿಂದ ಈ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಪಿ.ಆರ್.ಡಿ. ನಿರ್ದೇಶಕ ಟಿ.ವಿ.ಸುಭಾಷ್ ತಿಳಿಸಿದರು. ನೋಂದಣಿ ನಡೆಸುವ ವೇಳೆ ಲಭಿಸುವ ಲೋಗಿನ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಫೆ.24 ರ ವರೆಗೆ ವೀಡಿಯೋ ಅಪ್ ಲೋಡ್ ನಡೆಸಬಹುದು. ಅಭಿವೃದ್ಧಿ, ಕಲ್ಯಾಣ, ಕೇರಳ ಪುನರ್ ನಿರ್ಮಾಣ ಎಂಬ ವಿಷಯಗಳಲ್ಲಿ ಪ್ರಧಾನವಾಗಿ ವೀಡಿಯೋ ನಿರ್ಮಾಣ ನಡೆಸಬೇಕು. ಪೆÇ್ರಫೆಷನಲ್ ಕೆಮರಾ ಬಳಸಿ ಅಥವಾ ಮೊಬೈಲ್‍ನಲ್ಲಿ ಚಿತ್ರೀಕರಣ ನಡೆಸಬಹುದು. ಫಿಕ್ಷನ್/ಡಾಕ್ಯೂ ಫಿಕ್ಷನ್/ಆನಿಮೇಷನ್(3ಡಿ, 2ಡಿ), ಛಾಯಾಚಿತ್ರ, ಮೂವಿ, ಯಾವುದೇ ರೀತಿಯ ವೀಡಿಯೋ ಪ್ರಸ್ತುತ ಪಡಿಸಬಹುದು. ಸಾಮಾನ್ಯ ಜನತೆಗೆ ಅರ್ಥವಾಗುವ ರೀತಿ ಈ ಕೃತಿಗಳು ಇರಬೇಕು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries